ಬಿಎಂಟಿಸಿ ಕಂಡಕ್ಟರಿಗೆ ಥಳಿಸಿ ಜೈಲು ಸೇರಿದ ಮಹಿಳಾ ಟೆಕ್ಕಿ

Posted By:
Subscribe to Oneindia Kannada
bangalore-accenture-techie-swati-nigam-assault-bmtc-conductor-manjaiah
ಬೆಂಗಳೂರು, ಜುಲೈ30: ಬಿಎಂಟಿಸಿ ಕಂಡಕ್ಟರುಗಳು ಪ್ರಯಾಣಿಕರ ಪುಂಡಾಟಿಕೆಗೆ ಗುರಿಯಾಗುವ ಪ್ರಕರಣಗಳು ನಗರದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಕಳೆದ 15 ದಿನಗಳಲ್ಲಿ ಇಂತಹ ನಾಲ್ಕಾರು ಪ್ರಕರಣಗಳು ವರದಿಯಾಗಿವೆ.

BMTC ಬಸ್ಸೇರುವ ಬಿಸಿರಕ್ತದ ಪರೋಡಿಗಳು ಸೀದಾ ಕಂಡಕ್ಟರ್ ಮೇಲೆ ದಾಳಿ ಮಾಡುತ್ತಿದ್ದಾರೆ. ಮೊನ್ನೆ ಮಹಿಳಾ ಟೆಕ್ಕಿಯೊಬ್ಬರು ಕಂಡಕ್ಟರ್ ಮಂಜಯ್ಯನನ್ನು ಥಳಿಸಿ, ಆತನ ಕಿವಿ ಕಿತ್ತುಹೋಗುವಂತೆ ಬಾರಿಸಿದ್ದಾಳೆ.

ಶನಿವಾರ ವೋಲ್ವೋ ಬಸ್ ಏರಿದ ಉತ್ತರ ಪ್ರದೇಶದ ಸ್ವಾತಿ ನಿಗಮ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ Accenture ಕಂಪನಿಯ ಮಹಿಳಾ ಟೆಕ್ಕಿ. ಶಾರ್ಟ್ ಟೆಂಪರಿಂದ ತಾಳ್ಮೆ ಕಳೆದುಕೊಂಡ ಸ್ವಾತಿ ನಿಗಮ್ ಕಂಡಕ್ಟರಿಗೆ ಬಾರಿಸುವ ಮೂಲಕ ತಮ್ಮ ಗಮ್ಯ ತಲುಪಿಕೊಳ್ಳುವ ಬದಲು ಸೀದಾ ಜೈಲು ಸೇರಿದ್ದಾರೆ.

ಉತ್ತರ ಪ್ರದೇಶದ ಸ್ವಾತಿ ಮಾರತ್ ಹಳ್ಳಿಗೆ ಹೋಗಲು ಸರ್ಜಾಪುರದ ಈಕೋ ಸ್ಪೇಸ್ ನಿಲ್ದಾಣದಲ್ಲಿ 500D ವೋಲ್ವೋ ಬಸ್ ಹತ್ತಿದ್ದಾಳೆ. ಕಂಡಕ್ಟರ್ ಮಂಜಯ್ಯನನ್ನು ಟಿಕೆಟ್ ನೀಡುವಂತೆ ಕೇಳಿದ್ದಾಳೆ. ಆತ 25 ರೂ ಕೇಳಿದ್ದಾನೆ. ಏನು, 4 ಕಿಮೀ ದೂರಕ್ಕೆ 25 ರೂಪಾಯಿಯ ಎಂದು ಮಂಜಯ್ಯನನ್ನು ದಬಾಯಿಸಿದ್ದಾಳೆ. ಕಂಡಕ್ಟರ್ ಬಸ್ ಪ್ರಯಾಣ ದರದ ವಿವರ ನೀಡಿದ್ದಾನೆ. ಅದಕ್ಕೆ ಸ್ವಾತಿ 100 ರೂ. ನೋಟು ನೀಡಿ, ಚಿಲ್ಲರೆಗಾಗಿ ಪೀಡಿಸಿದ್ದಾಳೆ.

ಮಂಜಯ್ಯ ಕನ್ನಡದಲ್ಲಿ ವಿವರಣೆ ನೀಡುತ್ತಿದ್ದಾಗ ಆತ ತನ್ನನ್ನು ಅಪಮಾನ ಮಾಡುತ್ತಿದ್ದಾನೆ ಎಂದು ಅನುಮಾನಗೊಂಡ ಸ್ವಾತಿ ಕಂಡಕ್ಟರ್ ಮೇಲೆ ಮುಗಿಬಿದ್ದಿದ್ದಾಳೆ. ಏನೋ ಯಡವಟ್ಟಾಗುತ್ತಿದೆ ಎಂದು ಸಹ ಪ್ರಯಾಣಿಕರು ಮತ್ತು ಡ್ರೈವರ್ ಗಮನಕ್ಕೆ ಬರುತ್ತಿದ್ದಂತೆ ಆತ ಬಸ್ಸಿನ ಬಾಗಿಲುಗಳನ್ನು ಭದ್ರ ಪಡಿಸಿ, ಸೀದಾ ಎಚ್ಎಎಲ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ.

ಸಹ ಪ್ರಯಾಣಿಕರು ಸಹ ಸ್ವಾತಿಯದ್ದೇ ತಪ್ಪು ಎಂದು ಸಾಕ್ಷಿ ನುಡಿದಿದ್ದರ ಫಲವಾಗಿ ಪೊಲೀಸರು ಆಕೆಯ ವಿರುದ್ಧ ದೂರು ದಾಖಲಿಸಿಕೊಂಡು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಈ ಮಧ್ಯೆ ಕಂಡಕ್ಟರ್ ಮಂಜಯ್ಯನನ್ನು ಆಸ್ಪತ್ರೆಗೆ ದಾಖಿಲಿಸಿದ್ದಾರೆ. ಸ್ವಾತಿ ಈಗ 15 ದಿನಗಳ ನ್ಯಾಯಾಂಗ ಬಂಧನವಾಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. (ಕೃಪೆ- ಬೆಂಗಳೂರು ಮಿರರ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore- Accenture techie Swati Nigam assault BMTC conductor Manjaiah. It was supposed to be a short, uneventful ride on a Bangalore Metropolitan Transport Corporation (BMTC) Volvo bus for Swati Nigam on Saturday. Instead it turned out to be a trip right to prison - all because she allegedly lost her temper over a very trivial issue. 
Please Wait while comments are loading...