ಅವಲಹಳ್ಳಿ : ಮಗಳನ್ನೇ ಬಡಿದುಕೊಂಡ ಪಾಪಿ ತಂದೆ

ಅವಲಹಳ್ಳಿಯ ನಿವಾಸಿ ಸತ್ಯನಾರಾಯಣ ಸಿಂಗ್ (35) ಮಗಳು ನೇಹಾಸಿಂಗ್ (8)ಳನ್ನು ಗುರುವಾರ ರಾತ್ರಿ ಕೊಲೆ ಮಾಡಿದ್ದಾರೆ. ಘಟನೆಯನ್ನು ತಡೆಯಲು ಬಂದ ಹೆಂಡತಿ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಮಗಳಿಗೆ ಹೊಡೆದಿದ್ದರಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ಕತೆ ಹೇಳಿದ್ದ ಪಾಪಿಯನ್ನು ಬಂಧಿಸಿಲಾಗಿದೆ.
ಸತ್ಯನಾರಾಯಣ್ ಉದ್ಯಮಿಯಾಗಿದ್ದು, ಪ್ಲಾಸ್ಟಿಕ್ ಮೌಲ್ಡಿಂಗ್ ಕಾರ್ಖನೆ ಮಾಲೀಕನಾಗಿದ್ದಾರೆ. ಮೃತ ನೇಹಾ ಬ್ಯಾಟರಾಯನಪುರದ ಶಾಲೆಯೊಂದರಲ್ಲಿ ಎರಡನೆ ತರಗತಿ ಓದುತ್ತಿದ್ದಳು. ನೇಹಾ ಸತ್ಯನಾರಾಯಣ್ ಅವರ ಮೊದಲ ಹೆಂಡತಿಯ ಮಗಳು.
ಜೈಲಿಗೆ ಹೋಗಿ ಬಂದಿದ್ದ : ಸತ್ಯನಾರಾಯಣ್ ಶಿವಮೊಗ್ಗ ಮೂಲದ ಆಶಾ ಸಿಂಗ್ ಎಂಬುವವರನ್ನು 2006ರಲ್ಲಿ ಮದುವೆಯಾಗಿದ್ದ. ಆದರೆ, ಗಂಡನ ಕಿರುಕುಳ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ನೇಹಾ ಕೇವಲ ಹತ್ತು ತಿಂಗಳ ಮಗು.
ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಸೇರಿದ್ದ ಸತ್ಯನಾರಾಯಣ್ ಐದು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ. ನೇಹಾಳನ್ನು ಅಜ್ಜ ರಘುನಾಥ ಸಿಂಗ್ ಮತ್ತು ಅಜ್ಜಿ ವಸಂತಾ ಸಿಂಗ್ ಸಾಕುತ್ತಿದ್ದರು. ಇದರಿಂದ ಮಗುವಿನಗೆ ತಂದೆಯೊಡನೆ ಒಡನಾಡವೇ ಕಡಿಮೆಯಾಗಿತ್ತು.
ಕೆಲವು ದಿನಗಳ ಹಿಂದೆ ಭದ್ರಾವತಿ ಮೂಲದ ತೇಜು ಸಿಂಗ್ ಎಂಬುವರನ್ನು ಸತ್ಯನಾರಾಯಣ್ ಎರಡನೇ ಮದುವೆಯಾಗಿದ್ದ. ಅಜ್ಜಿ ಮನೆಯಲ್ಲಿದ್ದ ನೇಹಾಳನ್ನು ಮೂರು ತಿಂಗಳ ಹಿಂದೆ ತಾನೇ ಸಾಕುವುದಾಗಿ ಅತ್ತೆ-ಮಾವನಿಗೆ ಹೇಳಿ ನೇಹಾಳನ್ನು ಕರೆತಂದಿದ್ದ.
ಬ್ಯಾಟರಾಯನಪುರದ ಶಾಲೆಯಲ್ಲಿ ನೇಹಾ 2 ನೇ ತರಗತಿ ಓದುತ್ತಿದ್ದಳು. ಅಜ್ಜಿ-ತಾತನ ಜೊತೆ ಬೆಳೆದಿದ್ದ ನೇಹಾಗೆ ತಂದೆ ತಾಯಿಯ ಜೊತೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಆದ್ದರಿಂದ ಅಜ್ಜಿಯ ಮನೆಗೆ ಹೋಗುವುದಾಗಿ ಹಠ ಮಾಡುತ್ತಿದ್ದಳು.
ಗುರುವಾರವೂ ಹೀಗೆ ಹಠ ಮಾಡಿದ ನೇಹಾಳಿಗೆ ಲಟ್ಟಣಿಯಿಂದ ಸತ್ಯನಾರಾಯಣ್ ಹೊಡೆದಿದ್ದಾನರೆ. ಇದನ್ನು ಬಿಡಿಸಲು ಬಂದ ಹೆಂಡತಿ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಶವವನ್ನು ಮಂಚದ ಮೇಲೆ ಮಲಗಿಸಿ, ತಡರಾತ್ರಿ ಒಂದು ಗಂಟೆ ಸುಮಾರಿಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಕರೆ ಮಾಡಿ ನನ್ನ ಮಗಳು, ಸತ್ತು ಹೋಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಸುಳ್ಳು ಹೇಳಿದ್ದ : ನೇಹಾ ಸಿಂಗ್ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಗೆ ಹೋಗಿದ್ದಳು. ಆಗ ಅಪರಿಚಿತರು ಅಪಹರಿಸಿ, ಆಕೆಗೆ ಹೊಡೆದಿದ್ದಾರೆ. ಮನೆಗೆ ಬಂದ ತಕ್ಷಣ ಆಕೆ ಮೃತಪಟ್ಟಿದ್ದಾಳೆ ಎಂದು ಸತ್ಯನಾರಾಯಣ್ ಪೊಲೀಸರಿಗೆ ಕತೆ ಹೇಳಿದ್ದರು.
ಮಗುವಿನ ಮೈಮೇಲಿನ ಬಾಸುಂಡೆ ಗುರುತುಗಳು ಹಾಗೂ ಸತ್ಯನಾರಾಯಣ್ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು, ಸತ್ಯನಾರಾಯಣ್ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.












Click it and Unblock the Notifications