BMTC ಕಂಡಕ್ಟರ್ ಆಗಲು ಇಲ್ಲಿದೆ ಸದಾವಕಾಶ
ಬೆಂಗಳೂರು, ಜುಲೈ 27: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು BMTC ಮತ್ತೊಂದು ಸುತ್ತಿನ ನೇಮಕಾತಿ ಮಾಡಿಕೊಳ್ಳಲು ಸಜ್ಜಾಗಿದೆ. ಸಂಸ್ಥೆಗೆ ಸುಮಾರು 500 ಕಂಡಕ್ಟರುಗಳ ಅಗತ್ಯವಿದ್ದು, ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕ (ದರ್ಜೆ-3) ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿಗೊಳಿಸಲು ಜುಲೈ 25ರಂದು ಜಾಹೀರಾತು ನೀಡಲಾಗಿದೆ. ಅದರಂತೆ ಅರ್ಹ ಅಭ್ಯರ್ಥಿಗಳು ಜುಲೈ 27ರಿಂದ ಆಗಸ್ಟ್ 17 ರವರೆಗೆ ಆನ್ ಲೈನ್ (Online) ಮುಖಾಂತರ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಹತೆ, ವಯೋಮಿತಿ, ದೇಹ ದಾರ್ಢ್ಯತೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇನ್ನಿತರ ಸಂಪೂರ್ಣ ಮಾಹಿತಿಗಳನ್ನು ಸಂಸ್ಥೆಯ ಸೂಚನಾ ಫಲಕ ಅಥವಾ ಸಂಸ್ಥೆಯ ವೆಬ್ ಸೈಟ್ www.bmtccareers.comನಲ್ಲಿ ನೀಡಲಾಗಿದೆ. ಹುದ್ದೆಗಳ ವರ್ಗಾವಾರು ವರ್ಗೀಕರಣ ಜಾಹೀರಾತನ್ನು ನೋಡಿ ವಿವರ ಪಡೆಯುವುದು.













Click it and Unblock the Notifications