ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲೀವ್ ಲೆಸ್ ಟಾಪ್ ಧರಿಸೋ ಹುಡುಗಿಯರಿಗೆ ನಿಷೇಧ

By Mahesh
|
Google Oneindia Kannada News

ಇಂದೋರ್, ಜು.26: ಭಾರತದಲ್ಲಿ ಮಹಿಳೆಯರಿಗೆ ಎಲ್ಲಾ ವಿಷಯದಲ್ಲಿ ಸಮಾನ ಹಕ್ಕು, ಗೌರವ ನೀಡುವ ಬಗ್ಗೆ ಹತ್ತು ಹಲವು ಭಾಷಣಗಳಲ್ಲಿ ಕೇಳಿರಬಹುದು. ಆದರೆ, ವಸ್ತ್ರಸಂಹಿತೆ ವಿಷಯಕ್ಕೆ ಬಂದರೆ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಲಿ ದೂರದ ಇಂದೋರ್ ಆಗಲಿ ಎಲ್ಲವೂ ಒಂದೇ 'ರೂಲ್ಸ್' ಟೀ ಶರ್ಟ್ ಟೈಟ್ಸ್, ಮಿಡ್ಡಿ, ಮಿನಿ, ಮೈಕ್ರೋ ಸ್ಕರ್ಟ್ ಎಲ್ಲಾ ಬ್ಯಾನ್ ನಂತರ ಈಗ ಸ್ಲೀವ್ ಲೆಸ್ ಟಾಪ್ ಧರಿಸಿದವರಿಗೆ ಕಾಲೇಜು ಪ್ರವೇಶ ನಿಷೇಧಿಸಲಾಗಿದೆ.

ಮಧ್ಯಪ್ರದೇಶ ರಾಜ್ಯದ ಇಂದೋರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್(IMS) ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಲಗತ್ತಿಸಿರುವ ಆದೇಶದ ಪ್ರಕಾರ ವಿದ್ಯಾರ್ಥಿನಿಯರು ಸ್ಲೀವ್ ಇಲ್ಲದ ಮೇಲ್ವಸ್ತ್ರ ಧರಿಸಿ ಕಾಲೇಜಿಗೆ ಬರುವಂತಿಲ್ಲ. ಇದರ ಜೊತೆಗೆ ಡಬ್ಬಲ್ ಮೀನಿಂಗ್ ಇರುವ ಡೈಲಾಗ್ಸ್ ಟೀ ಶರ್ಟ್ ಮೇಲಿದ್ದರೆ ತಕ್ಷಣ ಮನೆಗೆ ಕಳಿಸಲಾಗುವುದು. ಕಾಲೇಜು ಅವರಣದಲ್ಲಿ ಸಭ್ಯ ವಸ್ತ್ರಧಾರಿಗಳಿಗೆ ಮಾತ್ರ ಪ್ರವೇಶ ಎಂದು ಹೇಳಲಾಗಿದೆ.

ಕಾಲೇಜು ನೋಟಿಸ್ ಬೋರ್ಡ್ ಪ್ರಕಟಣೆ ನಂತರ ವಿದ್ಯಾರ್ಥಿಗಳಲ್ಲಿ ದ್ವಂದ್ವ ಶುರುವಾಗಿದೆ. ಕಾಲೇಜು ಆರಂಭದಲ್ಲೇ ಮ್ಯಾನೇಜ್ಮೆಂಟ್ ವಿರುದ್ಧ ತಿರುಗು ಬೀಳುವುದು ಬೇಕಾ? ವಸ್ತ್ರ ಸಂಹಿತೆ ಹೆಸರಲ್ಲಿ ಆಡಳಿತ ಮಂಡಳಿಯ ಅವೈಜ್ಞಾನಿಕ ನಿಯಮಗಳಿಗೆ ತಲೆಬಾಗಬೇಕಾ? ಎಂಬ ಜಿಜ್ಜಾಸೆಯಲ್ಲಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಹೇರಲಾಗಿರುವ ವಸ್ತ್ರ ಸಂಹಿತೆ ಕುರಿತ ಇನ್ನಷ್ಟು ಮಾಹಿತಿ ಚಿತ್ರ ಸರಣಿಯಲ್ಲಿ ನೋಡಿ...

ವಿದ್ಯಾರ್ಥಿನಿಯರು ಕಂಗಾಲು

ವಿದ್ಯಾರ್ಥಿನಿಯರು ಕಂಗಾಲು

ದೆಹಲಿ ವಿವಿ ಸೇರಿದಂತೆ ವಿವಿಧೆಡೆ ಕಾಲೇಜು ಆರಂಭ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯರಿಗೆ ಈ ರೀತಿ ನೋಟಿಸ್ ನೋಡಿ ಕಂಗಾಲಾಗಿದ್ದಾರೆ.

 ಎಬಿವಿಪಿ ಖಂಡನೆ

ಎಬಿವಿಪಿ ಖಂಡನೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಕಾಲೇಜಿನ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ವಿದ್ಯಾರ್ಥಿನಿಯರ ಸ್ವತಂತ್ರಕ್ಕೆ ಧಕ್ಕೆ ತರುವಂಥ ಕ್ರಮ ಕೈಬಿಡಬೇಕು ಇಲ್ಲವೇ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ವಿದ್ಯಾರ್ಥಿ ನಾಯಕಿ ಹೇಳಿಕೆ

ವಿದ್ಯಾರ್ಥಿ ನಾಯಕಿ ಹೇಳಿಕೆ

ವಿದ್ಯಾರ್ಥಿ ಸಂಘದ ನಾಯಕಿ ಮಧು ಅವರು ಹೇಳಿಕೆ ನೀಡಿ, ಕಾಲೇಜು ನಿರ್ದೇಶಕರ ನಿರ್ಣಯ ಅಸಂಪ್ರದಾಯಿಕ ಹಾಗೂ ಅನವಶ್ಯಕ, ಸಂಸ್ಕೃತಿಗೂ ಕಾಲೇಜು ವಸ್ತ್ರ ಸಂಹಿತೆಗೂ ತಳಕು ಹಾಕುವುದು ಸರಿಯಲ್ಲ ಎಂದಿದ್ದಾರೆ.

ಎಲ್ಲಾ ವರ್ಗಕ್ಕೂ ಅನ್ವಯ

ಎಲ್ಲಾ ವರ್ಗಕ್ಕೂ ಅನ್ವಯ

ಜಾತಿ ಮತ ಪಂಥ ಎನ್ನದೆ ಕಟ್ಟುನಿಟ್ಟಾಗಿ ಈ ಆದೇಶವನ್ನು ಪಾಲಿಸುವಂತೆ ಸೂಚಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಸಂಸ್ಕೃತಿ ಬೆಳವಣಿಗೆ ನಡೆ ನುಡಿಯಲ್ಲಿ ಕಾಣಿರಿ ಬರೀ ವಸ್ತ್ರಗಳಲ್ಲಿ ಅಲ್ಲ ಎಂದಿದ್ದಾರೆ.

ವಸ್ತ್ರ ಸಂಹಿತೆ ಬೇಕೆ?

ವಸ್ತ್ರ ಸಂಹಿತೆ ಬೇಕೆ?

ಕಾಲೇಜು ಆರಂಭಕ್ಕೆ ಮುನ್ನವೇ ವಸ್ತ್ರ ಸಂಹಿತೆ ನೀಡಿದ್ದರೆ ಚೆನ್ನಾಗಿತ್ತು. ಅದರೂ ಕಾಲೇಜು ಹಾಗೂ ಸ್ಕೂಲಿಗೂ ವ್ಯತ್ಯಾಸವೇ ಇಲ್ಲದ್ದಂತೆ ವಸ್ತ್ರ ಸಂಹಿತೆ ಸಮವಸ್ತ್ರ ಇದ್ದರೆ ಏನು ಚೆನ್ನ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

ವಸ್ಸ್ತ ಸಂಹಿತೆ ಸಮಸ್ಯೆ

ವಸ್ಸ್ತ ಸಂಹಿತೆ ಸಮಸ್ಯೆ

ವಸ್ತ್ರ ಸಂಹಿತೆ ಸಮಸ್ಯೆ ವ್ಯಾಪಕವಾಗಿದೆ. ಕರ್ನಾಟಕದಲ್ಲಿ ಬುರ್ಖಾಧಾರಿಗಳಿಗೆ ನಿಷೇಧ ಹೇರಲಾಗಿತ್ತು. ಇನ್ನೊಮ್ಮೆ ಹಿಂದೂ ಸಂಪ್ರದಾಯದಂತೆ ಹಣೆಗೆ ಕುಂಕುಮ, ಬಳೆ ತೊಡುವುದನ್ನು ಕಡ್ಡಾಯಗೊಳಿಸಲಾಯಿತು. ಎಲ್ಲಾ ನಿರ್ಬಂಧಗಳು ನಮಗೆ ಮಾತ್ರ ಏಕೆ? ವಿದ್ಯಾರ್ಥಿಗಳಿಗೂ ಹೇರಬಾರದೇ ಎಂದು ಕೆಲ ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ.

ನಿರ್ಬಂಧ, ನಿಷೇಧ ಹೇರಿಕೆ ಸಲ್ಲ

ನಿರ್ಬಂಧ, ನಿಷೇಧ ಹೇರಿಕೆ ಸಲ್ಲ

ವಸ್ತ್ರ ಸಂಹಿತೆ ಜಾರಿಗೆ ವಿದ್ಯಾರ್ಥಿಗಳ ಒಪ್ಪಿಗೆ ಇಲ್ಲದಿದ್ದಾಗ ಅನಗತ್ಯವಾಗಿ ನಿಯಮಗಳನ್ನು ಹೇರಬಾರದು. ವಿದ್ಯಾರ್ಥಿಗಳ ಭವಿಷ್ಯತ್ತಿಗೆ ವಿದ್ಯೆ ಮುಖ್ಯ ಹೊರತು ಕಟ್ಟು ನಿಟ್ಟಾದ ಶಿಕ್ಷೆಯಿಂದ ಅಲ್ಲ ಎಂದು ಎಬಿವಿಪಿ ಹೇಳಿದೆ.

English summary
The reports of colleges banning revealing clothes fro girls is not new. The latest college to bar girls from wearing sleeveless tops, is Institute of Management Studies (IMS), Indore that has reportedly banned wearing of sleeveless and double meaning slogan T-shirts at college premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X