ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ!
ಲಂಡನ್, ಜು.24 : ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲಟನ್ ಸೋಮವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನೂತನ ರಾಜಕುಮಾರನಿಗೆ ವಿಶ್ವದೆಲ್ಲೆಡೆಯಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ನೂತನ ರಾಜಕುಮಾರ ಆಸ್ಪತ್ರೆಯಿಂದ ಅರಮನೆಗೆ ತೆರಳಿದ್ದಾನೆ. ಈಗ ಮಗುವಿನ ಹೆಸರಿನ ಬಗ್ಗೆ ಕುತೂಹಲ ಪ್ರಾರಂಭವಾಗಿದೆ.
ಮಂಗಳವಾರ ಸಂಜೆ ಸೇಂಟ್ ಮೇರಿಸ್ ಆಸ್ಪತ್ರೆಯಿಂದ ಕೇಟ್ ಮಿಡ್ಲ್‌ಟನ್ ಮತ್ತು ವಿಲಿಯಮ್ಸ್ ನೂತನ ರಾಜಕುಮಾರನೊಂದಿಗೆ ಕಿಂಗ್ ಸ್ಟನ್ ಅರಮನೆಗೆ ತೆರಳಿದರು. ಮಗುವಿಗೆ ಇಡುವ ಹೆಸರಿನ ಬಗ್ಗೆ ಈಗ ಬ್ರಿಟನ್ ನಲ್ಲಿ ಭಾರಿ ಬೆಟ್ಟಿಂಗ್ ಆರಂಭವಾಗಿದೆ.
ರಾಜಕುಟುಂಬದ ಬಗ್ಗೆ ಬ್ರಿಟನ್ ಜನರಿಗೆ ಭಾರೀ ಕುತೂಹಲವಿದೆ. ಅದರಲ್ಲೂ ಹೆರಿಗೆಗಾಗಿ ಕೇಟ್ ಆಸ್ಪತ್ರೆಗೆ ದಾಖಲಾದ ತಕ್ಷಣ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲದಲ್ಲಿ ಬ್ರಿಟನ್ ಜನರಿದ್ದರು. ಮಗು ಹುಟ್ಟಿದ ನಂತರ, ಅದಕ್ಕೆ ಇಡುವ ಹೆಸರಿನ ಕುತೂಹಲ ಎದ್ದಿದೆ.
ಬ್ರಿಟನ್ ಮಲ್ಲಿ ಮಗುವಿನ ಹೆಸರಿನ ಬಗ್ಗೆ ಭಾರೀ ಬೆಟ್ಟಿಂಗ್ ನಡೆಯುತ್ತಿದ್ದು, ಮಗುವಿಗೆ ಅಲೆಕ್ಸಾಂಡರ್, ಜೇಮ್ಸ್, ಜಾರ್ಜ್ ಅಥವಾ ಲೂಯಿಸ್ ಎಂದು ಹೆಸರಿಡಬಹುದು ಎಂದು ಜನರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ನಾವು ಮಗುವಿಗೆ ಹೆಸರಿಡುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ಹೇಳುವ ಮೂಲಕ ವಿಲಿಯಮ್ಸ್ ಜನರ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ.

ಅರಮನೆಗೆ ರಾಜಕುಮಾರ
ಬ್ರಿಟನ್ ನ ನೂತನ ರಾಜಕುಮಾರ ಸೇಂಟ್ ಮೇರಿಸ್ ಆಸ್ಪತ್ರೆಯಿಂದ ಕಿಂಗ್ ಸ್ಟನ್ ಅರಮನೆಗೆ ತೆರಳಿದ್ದಾನೆ. ಮಗು 3.8 ಕೆ.ಜಿ.ತೂಕವಿದ್ದು, ತಾಯಿ ಮತ್ತು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದಾಗ ರಾಜಕುಮಾರ ಕ್ಯಾಮರಾ ಕಣ್ಣಿನಲ್ಲಿ ಸೆರೆ ಸಿಕ್ಕಿದ್ದಾನೆ.

ಮೂರನೇ ವಾರಸುದಾರ
ಬ್ರಿಟನ್ ನಲ್ಲಿ ಸೋಮವಾರ ಜನಿಸಿರುವ ರಾಜಕುಮಾರ ಇಂಗ್ಲೆಂಡ್ ಅರಸೊತ್ತಿಗೆಯ ಸಿಂಹಾಸನಕ್ಕೆ ಮೂರನೇ ಉತ್ತರಾಧಿಕಾರಿಯಾಗಲಿದ್ದಾನೆ. ಅಜ್ಜ ಪ್ರಿನ್ಸ್ ಚಾರ್ಲ್ಸ್ ಹಾಗೂ ಅಪ್ಪ ಪ್ರಿನ್ಸ್ ವಿಲಿಯಮ್ ಈಗಾಗಲೇ ಸಿಂಹಾಸನದ ಉತ್ತರಾಧಿಕಾರಿಯಾಗಿದ್ದಾರೆ. ಈ ಸಾಲಿಗೆ ನೂತನ ರಾಜಕುಮಾರನು ಸೇರಿಕೊಂಡಿದ್ದು,ಈಗ ಮೂರನೇ ವಾರಸುದಾರನಾಗಿದ್ದಾನೆ.

ಬ್ರಿಟನ್ ಜನರ ಬೆಟ್ಟಿಂಗ್
ರಾಜಕುಮಾರಿ ಕೇಟ್ ಸಹೋದರಿ ಪಿಪ್ಪಾ ಮಿಡ್ಲಟನ್, ಅಕ್ಕನ ಮಗನನ್ನು ನೋಡಲು ತೆರಳುವಾಗ ಯಾವ ಬಣ್ಣದ ಉಡುಪು ಧರಿಸುತ್ತಾಳೆ ಎಂಬುದರ ಬಗ್ಗೆಯೂ ಬ್ರಿಟನ್ ನಲ್ಲಿ ಸಾವಿರಾರು ಪೌಂಡ್ ಬೆಟ್ಟಿಂಗ್ ಕಟ್ಟಲಾಗಿದೆಯಂತೆ.

ನಾಮಕರಣ ಯಾವಾಗ?
ಬ್ರಿಟನ್ ಜನರು ನೂತನ ರಾಜಕುಮಾರನ ಹೆಸರಿನ ಮೇಲೆ ಎಷ್ಟು ಬೆಟ್ಟಿಂಗ್ ಕಟ್ಟಿದರೂ, ರಾಜಮನೆತನದವರು ಬೇಗ ನಾಮಕರಣ ಮಾಡುವುದಿಲ್ಲ ಎಂಬ ಮಾತುಗಳು ಇವೆ. ಮಹಾರಾಣಿ ಎಲಿಜಬೆತ್-2 ಹಾಗೂ ಪ್ರಿನ್ಸ್ ಫಿಲಿಪ್ ದಂಪತಿಗೆ ಪ್ರಿನ್ಸ್ ಚಾರ್ಲ್ಸ್ ಹುಟ್ಟಿದಾಗ ಮಗುವಿಗೆ ತಿಂಗಳುಗಳ ಕಾಲ ಹೆಸರು ಇಡದೆ ಜನರನ್ನು ಸತಾಯಿಸಿದ್ದರು.

ಭಾರತೀಯರಿಗೂ ಸಂತಸ
ಇಂಗ್ಲೆಂಡ್ ರಾಜಕುಮಾರನ ಆಗಮನದಿಂದ ಭಾರತೀಯರು ಸಂತಸ ಪಡಬೇಕು. ಆಂಗ್ಲರು ನಮ್ಮನ್ನು ಶತಮಾನಗಳ ಕಾಲ ಆಳಿದ್ದು, ಒಂದು ಕಡೆಯಾದರೆ, ಕೇಟ್ ಅವರು ಪ್ರಸವ ವೇದನೆಯಿಂದ ನರಳುತ್ತಿದ್ದಾಗ ಅವರನ್ನು ಹಾರೈಕೆ ಮಾಡಿದ್ದ ವೈದ್ಯರ ತಂಡದಲ್ಲಿ ಭಾರತೀಯ ಮೂಲದ ವೈದ್ಯ ಡಾ.ಸುನೀತ್ ಗೊಡಾಂಬೆ ಇದ್ದರು. ಆದ್ದರಿಂದ ನಮಗೆ ಹೆಚ್ಚು ಸಂತಸ ಅಲ್ಲವೆ.

ರಾಯಲ್ ಬೇಬಿ ಭವಿಷ್ಯ ಹೇಗಿದೆ?
ರಾಯಲ್ ಬೀಬಿ ದೃಢವಾದ ಇಚ್ಛಾಶಕ್ತಿ ಹೊಂದಿರುವ ಉತ್ತಮ ನಾಯಕನಾಗುತ್ತಾನೆ ಎಂದು ಬ್ರಿಟನ್ ಪ್ರಸಿದ್ಧ ಜ್ಯೋತಿಷಿ ಪಾಟ್ರಿಕ್ ರುಂಡೆಲ್ ಹೇಳಿದ್ದಾರೆ. ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಒಬ್ಬ ರಾಜನಿಗೆ ಇರಬೇಕಾದ ಎಲ್ಲಾ ನಾಯಕತ್ವ ಗುಣಗಳು ಇರುತ್ತವೆ. ಈ ಮಗುವಿನಲ್ಲಿಯೂ ಉತ್ತಮ ನಾಯಕನಾಗುವ ಗುಣವಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.

ರಾಜಮನೆತನದಲ್ಲಿ ಭಾರೀ ಸಂಭ್ರಮ
ನೂತನ ರಾಜಕುಮಾರನನ್ನು ಎಲ್ಲರೂ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಪತ್ನಿ ಸಮೇತರಾಗಿ, ಸೇಂಟ್ ಮೇರಿಸ್ ಆಸ್ಪತ್ರೆಗೆ ಭೇಟಿ ನೀಡಿ ನೂತನ ರಾಜಕುಮಾರನಿಗೆ ಸ್ವಾಗತ ಕೋರಿದರು.

ಅಜ್ಜ ಅಜ್ಜಿಯರಿಗೂ ಸಂತಸ
ರಾಜಕುಮಾರಿ ಕೇಟ್ ತಂದೆ ಕರೋಲ್ ಮತ್ತು ಮಿಚೆಲ್ ಮಿಡ್ಲಟನ್ ಅವರಿಗೂ ಮೊಮ್ಮಗನ ಆಗಮನ ಸಂತಸ ತಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗನನ್ನು ನೋಡಿ ಮಗಳ ಸಂತಸದಲ್ಲಿ ಭಾಗಿಯಾದರು.

ನೆನಪಾದರು ಡಯಾನ
ಸಂಗ್ರಹ ಚಿತ್ರ : 1982, ಜೂನ್ 22ರಂದು ಪ್ರಿನ್ಸ್ ಗೆ ಡಯಾಣ ಜನ್ಮ ನೀಡಿದ ಸಂದರ್ಭದಲ್ಲಿ ತೆಗೆದ ಚಿತ್ರವಿದು. ಅಪಘಾತದಲ್ಲಿ ದುರಂತ ಅಂತ್ಯ ಕಂಡ ರಾಜಕುಮಾರಿ ಡಯಾನ ಮತ್ತೊಮ್ಮೆ ನೆನಪಾಗುತ್ತಾಳೆ.

ರಾಜಕುಮಾರನ ರಾಯಲ್ ಸವಾರಿ
ಬ್ರಿಟನ್ ನೂತನ ರಾಜಕುಮಾರ ಆಸ್ಪತ್ರೆಯಿಂದ ಅರಮನೆಗೆ ಹೊರಟಿದ್ದು ದುಬಾರಿ ರೇಂಜ್ ರೋವರ್ ಕಾರಿನಲ್ಲಿ. ವಿಲಿಯಮ್ಸ್ ಅರಮನೆಗೆ ತೆರಳುವ ಮುನ್ನ ಜನರಿಗೆ ಕೈ ಬೀಸಿದ್ದು ಹೀಗೆ.

ಮೊದಲ ಜಾಲಿ ರೈಡ್ ಮುಗಿಸಿ ಬಂದಾಗ
ಬ್ರಿಟನ್ ನೂತನ ರಾಜಕುಮಾರ ದುಬಾರಿ ರೇಂಜ್ ರೋವರ್ ಕಾರಿನಲ್ಲಿ ಆಸ್ಪತ್ರೆಯಿಂದ ಅರಮನೆಗೆ ಆಗಮಿಸಿದಾಗ ಕಂಡು ಬಂದಿದ್ದು ಹೀಗೆ. ರಾಯಲ್ ಬೇಬಿ ಹೆಸರಿಗೆ ತಕ್ಕಂತೆ ರೇಂಜ್ ರೋವರ್ ಕಾರಿನಲ್ಲಿ ಓಡಾಡುತ್ತಿದ್ದಾನೆ.












Click it and Unblock the Notifications