ಭಾರತದಲ್ಲಿ ಬ್ಯಾಂಕ್ ಆರಂಭಿಸಲು ಬಿ.ಆರ್.ಶೆಟ್ಟರು ರೆಡಿ!

ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿರುವ ಬಿ.ಆರ್.ಶೆಟ್ಟಿ, ದೇಶದಲ್ಲಿ ಬ್ಯಾಂಕ್ ಸ್ಥಾಪಿಸಲು ಅವಕಾಶ ದೊರೆಯುವ ವಿಶ್ವಾಸದಲ್ಲಿದ್ದಾರೆ. ಅನುಮತಿ ದೊರೆತರೆ ಶೆಟ್ಟರು, 800 ಶಾಖೆಗಳನ್ನು ತೆರೆಯಲು ಸಿದ್ಧತೆ ಆರಂಭಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ವಿದೇಶಿ ವಿನಿಮಯ ವರ್ಗಾವಣೆ ಸೇವೆ ಒದಗಿಸುತ್ತಿರುವ ಯುಎಇ ಎಕ್ಸ್‌ಚೇಂಜ್ ಕಂಪನಿಯ ಸಂಸ್ಥಾಪಕರಾಗಿರುವ ಬಿ.ಆರ್. ಶೆಟ್ಟಿ, ಇದೀಗ ಅದೇ ಕಂಪೆನಿಯ ಹೆಸರಲ್ಲಿ ಬ್ಯಾಂಕಿಂಗ್ ಲೈಸೆನ್ಸ್ ಕೋರಿ ರಿಸರ್ವ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಬ್ಯಾಂಕಿಗ್ ಉದ್ಯಮ ಆರಂಭಿಸುವ ಕುರಿತು ಮಾತನಾಡಿರುವ ಶೆಟ್ಟರು, ನಮ್ಮ ಯುಎಐ ಎಕ್ಸ್ ಚೇಂಜ್ ಸಮೂಹ, ಜಾಗತಿಕವಾಗಿ ಒಂದು ಲಕ್ಷ ಮಂದಿಗೆ ನಿತ್ಯ ಸೇವೆ ಒದಗಿಸುತ್ತಿದೆ. ಬ್ಯಾಂಕಿಗ್ ಲೈಸೆನ್ಸ್ ಸಿಕ್ಕರೆ, ಗ್ರಾಮೀಣ ಪ್ರದೇಶಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ. (ಗಲ್ಫ್ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗ ಬಿ.ಆರ್ ಶೆಟ್ಟಿ)
ಯಾರು ಅರ್ಜಿ ಹಾಕಿದ್ದಾರೆ : ಉದ್ಯಮಿ ಬಿ.ಆರ್.ಶೆಟ್ಟಿ ಜೊತೆಗೆ ಅನಿಲ್ ಅಂಬಾನಿ, ಕುಮಾರ ಮಂಗಳಂ ಬಿರ್ಲಾ, ರತನ್ ಟಾಟಾ ಒಡೆತನದ ಕಂಪೆನಿಗಳು ಸಹ ಭಾರತದಲ್ಲಿ ಬ್ಯಾಂಕಿಂಗ್ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಿವೆ.
ಲೈಸೆನ್ಸ್ ಪಡೆಯಲು ಬಹುದೊಡ್ಡ ಕಂಪನಿಗಳ ಜೊತೆಗೆ ಶೆಟ್ಟರು ಸ್ಪರ್ಧೆ ಎದುರಿಸಬೇಕಾಗುತ್ತದೆ. ನನ್ನ ಪ್ರತಿಸ್ಪರ್ಧಿಗಳು ದೊಡ್ಡವರೇ ಇರಬಹುದು. ಆದರೆ, ನನ್ನ ಸಮೂಹವೇನು ಸಣ್ಣದಲ್ಲ. ನಮಗೆ ಬ್ಯಾಂಕಿಂಗ್ ಲೈಸೆನ್ಸ್ ಸಿಗುತ್ತದೆ ಎಂಬ ವಿಶ್ವಾಸವನ್ನು ಶೆಟ್ಟರು ವ್ಯಕ್ತಪಡಿಸಿದ್ದಾರೆ.
ಶೆಟ್ಟರ ಕುರಿತು : ಕರ್ನಾಟಕದಲ್ಲಿ ಜನಿಸಿದ ಶೆಟ್ಟರು, ಕ್ಲಿನಿಕಲ್ ಫಾರ್ಮಾಸಿಸ್ಟ್ ಶಿಕ್ಷಣ ಪಡೆದು, ಅರಬ್ ಸಂಯುಕ್ತ ಸಂಸ್ಥಾನದಲ್ಲಿ 70ರ ದಶಕದಲ್ಲಿ ಹೆಲ್ತ್‌ಕೇರ್ ವ್ಯವಹಾರ ಆರಂಭಿಸಿದರು. 1980ರಲ್ಲಿ ಯುಎಇ ಎಕ್ಸ್‌ಚೇಂಜ್ ಪ್ರಾರಂಭಿಸಿದರು. (ಬುರ್ಜ್ ಖಲೀಫಾದಲ್ಲಿ ಕನ್ನಡ ಡಿಂಡಿಮ)












Click it and Unblock the Notifications