ಚಿತ್ರಗಳಲ್ಲಿ: ಭಾರತದೆಲ್ಲೆಡೆ ಮಳೆಯೋ ಮಳೆ

ನವದೆಹಲಿ, ಜು.21: ರಾಜಧಾನಿ ಮಳೆ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ. ನವದೆಹಲಿಯ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಮುಂದುವರೆದಿದೆ. ಕಳೆದೆರಡು ದಿನಗಳು ಬಿದ್ದ ಮಳೆ ಭಾನುವಾರ ಕೂಡಾ ಕಾಟ ನೀಡುತ್ತ್ತಿದೆ. ಉತ್ತರಭಾರತ ವಿವಿಧ ಭಾಗಗಳಲ್ಲಿ ಮಳೆ ನರ್ತನವಾಡುತ್ತಿದೆ.

ದೆಹಲಿಯ ಐಟಿಒ, ಲಕ್ಷ್ಮಿನಗರ, ಮೋತಿ ಬಾಗ್, ಕಾಶ್ಮೀರಿ ಗೇಟ್, ಮುನಿರ್ಕಾ, ದ್ವಾರಕ, ಧಔಲ್ ಕಾನ್ ಮುಂತಾದ ಪ್ರದೇಶಗಳು ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ ಪರಿಣಾಮ ರಸ್ತೆ ಸಂಚಾರ ಕಷ್ಟವಾಗಿತ್ತು. ಎಷ್ಟೊ ಕಡೆ ಟ್ರಾಫಿಕ್ ಪೊಲೀಸರಿಗೆ ಸಾರ್ವಜನಿಕರು ನೆರವಾಗಿ ವಾಹನಗಳಿಗೆ ದಾರಿ ತೋರಿಸುತ್ತಿದ್ದರು. ಈ ನಡುವೆ ಹಲವು ಪಾರ್ಕ್ ಗಳಲ್ಲಿ ಯುವ ಜೋಡಿಗಳು ಮಳೆಯ ಆನಂದ ಅನುಭವಿಸುತ್ತಿದ್ದರು.

ಉಳಿದಂತೆ ಗುರ್ ಗಾಂವ್, ಫರಿದಾಬಾದ್, ವಿದರ್ಭ, ಜಮ್ಮು ಮತ್ತ್ತು ಕಾಶ್ಮೀರ, ಚೆನ್ನೈ, ಬೆಂಗಳೂರಿನಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ವಿದರ್ಭದಲ್ಲಿ ಮಳೆ ಅಬ್ಬರಕ್ಕೆ ರೈಲ್ವೆ ಹಳಿಗಳು ಜಖಂಗೊಂಡಿದೆ. ಉತ್ತರ ಭಾರತದ ಮಳೆ ಚಿತ್ರಗಳು ಇಲ್ಲಿವೆ ನೋಡಿ

ಮಳೆಯಲ್ಲೇ ಮನೆಗೆ ಕಡೆಗೆ

ಮಳೆಯಲ್ಲೇ ಮನೆಗೆ ಕಡೆಗೆ

ಗುರ್ ಗಾಂವ್ ನಲ್ಲಿ ಮಕ್ಕಳು ಶಾಲೆಯಿಂದ ಮನೆ ಕಡೆಗೆ ತೆರಳುತ್ತಿರುವ ದೃಶ್ಯ

ಪೂಂಚ್ ನಲ್ಲಿ ಅಪಘಾತ

ಪೂಂಚ್ ನಲ್ಲಿ ಅಪಘಾತ

ಪೂಂಚ್ ಜಿಲ್ಲೆಯಲ್ಲಿ ಮಳೆ ಅಬ್ಬರದಿಂದ ಭೂ ಕುಸಿತ ಉಂಟಾಗಿ ಕಂದಕಕ್ಕೆ ಉರುಳಿದ ಖಾಸಗಿ ಬಸ್

ಚೆನ್ನೈ ನಲ್ಲಿ ಮಳೆ

ಚೆನ್ನೈ ನಲ್ಲಿ ಮಳೆ

ಚೆನ್ನೈ : ಶನಿವಾರ ಅವಧಿಗೂ ಮುನ್ನ ಮನೆ ಸೇರಲು ಅಜ್ಜಿ ಜೊತೆ ಹೊರಟ ಮಕ್ಕಳು

ಶ್ರೀನಗರದ ಚಿತ್ರ

ಶ್ರೀನಗರದ ಚಿತ್ರ

ಶ್ರೀನಗರ: ಪ್ರವಾಸಿಗಳು ದಾಲ್ ಸರೋವರದಲ್ಲಿ ತುಂತುರು ಮಳೆ ನಡುವೆ ವಿಹಾರ ಮುಗಿಸಿಕೊಂಡು ಬಂದ ಕ್ಷಣ

ದೆಹಲಿಯ ಯುವತಿಯರು

ದೆಹಲಿಯ ಯುವತಿಯರು

ನವದೆಹಲಿ: ಶನಿವಾರ ಪಾರ್ಕೊಂದರಲ್ಲಿ ಮಳೆಯನ್ನು ಆನಂದಿಸುತ್ತಾ ಆಟವಾಡುತ್ತಿದ್ದ ಯುವತಿಯರು

ಶ್ರೀನಗರ ಚಿತ್ರ

ಶ್ರೀನಗರ ಚಿತ್ರ

ಜಮ್ಮು ಮತ್ತು ಕಾಶ್ಮೀರ: ಮಳೆಯಿಂದಾಗಿ ಕುಸಿತ ಕಟ್ಟಡ

ಕಾಂಗ್ರೆಸ್ ಕಚೇರಿಗೆ ನೀರು

ಕಾಂಗ್ರೆಸ್ ಕಚೇರಿಗೆ ನೀರು

ಶನಿವಾರದ ಭಾರಿ ಮಳೆಯ ಪರಿಣಾಮ ದೆಹಲಿಯ ಯುವ ಕಾಂಗ್ರೆಸ್ ಕಚೇರಿಗೆ ನೀರು ನುಗ್ಗಿತ್ತು

ದೆಹಲಿಯ ಮಳೆ

ದೆಹಲಿಯ ಮಳೆ

ನವದೆಹಲಿಯ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಮುಂದುವರೆದಿದೆ.

ದೆಹಲಿಯ ಮಳೆ

ದೆಹಲಿಯ ಮಳೆ

ರಾಜಧಾನಿ ಮಳೆ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ. ನವದೆಹಲಿಯ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಮುಂದುವರೆದಿದೆ. ಕ

ದೆಹಲಿ ಟ್ರಾಫಿಕ್ ಜಾಮ್

ದೆಹಲಿ ಟ್ರಾಫಿಕ್ ಜಾಮ್

ಶನಿವಾರ ರಾತ್ರಿ ಕಂಡ ದೆಹಲಿ ಟ್ರಾಫಿಕ್ ಜಾಮ್

ದೆಹಲಿಯ ಮಳೆ

ದೆಹಲಿಯ ಮಳೆ

ನವದೆಹಲಿ: ಮಳೆ ನಡುವೆ ಅಲ್ಲಲ್ಲಿ ನಿಂತ ವಾಹನ ಸವಾರರು

ಫರಿದಾಬಾದ್ ಮಳೆ

ಫರಿದಾಬಾದ್ ಮಳೆ

ಭಾರಿ ಮಳೆಯ ನಡುವೆ ಸಂಚರಿಸುತ್ತಿರುವ ವಾಹನ ಸವಾರರು

ದೆಹಲಿಯ ಟ್ರಾಫಿಕ್

ದೆಹಲಿಯ ಟ್ರಾಫಿಕ್

ದೆಹಲಿಯ ಐಟಿಒ, ಲಕ್ಷ್ಮಿನಗರ, ಮೋತಿ ಬಾಗ್, ಕಾಶ್ಮೀರಿ ಗೇಟ್, ಮುನಿರ್ಕಾ, ದ್ವಾರಕ, ಧೌಲ್ ಕಾನ್ ಮುಂತಾದ ಪ್ರದೇಶಗಳು ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ ಪರಿಣಾಮ ರಸ್ತೆ ಸಂಚಾರ ಕಷ್ಟವಾಗಿತ್ತು

ನಾಗಾಂವ್ ಚಿತ್ರ

ನಾಗಾಂವ್ ಚಿತ್ರ

ಪ್ರವಾಹದ ನಡುವೆ ಬಾಳೆ ದಿಂಡಿನ ಸಹಾಯದಿಂದ ತಾತ್ಕಾಲಿಕ ಯಾನದಲ್ಲಿ ತೊಡಗಿರುವ ವ್ಯಕ್ತಿ

ವಿದರ್ಭದಲ್ಲಿ ರೈಲು

ವಿದರ್ಭದಲ್ಲಿ ರೈಲು

ವಿದರ್ಭದಲ್ಲಿ ಹಲವೆಡೆ ರೈಲು ಹಳಿಗಳು ಜಖಂಗೊಂಡಿದೆ. ರೈಲು ಸೇತುವೆಗಳು ಕುಸಿದಿವೆ.

ವಿದರ್ಭದಲ್ಲಿ ರೈಲು ಸಂಚಾರ

ವಿದರ್ಭದಲ್ಲಿ ರೈಲು ಸಂಚಾರ

ವಿದರ್ಭದಲ್ಲಿ ರೈಲು ಸಂಚಾರ ಕಷ್ಟಕರವೆನಿಸಿದೆ. ವಾರ್ಧದಲ್ಲಿ ಹಳಿಗಳಲ್ಲಿ ನೀರು ತುಂಬಿ ರೈಲುಗಳು ನಿಂತಲ್ಲೇ ನಿಲ್ಲಿಸಬೇಕಾಯಿತು

ಫರಿದಾಬಾದ್ ನಿಂದ ಬಂದ ಚಿತ್ರ

ಫರಿದಾಬಾದ್ ನಿಂದ ಬಂದ ಚಿತ್ರ

ಭಾರಿ ಮಳೆಯಿಂದ ಸಂಚಾರ ಕಷ್ಟವಾದ ಸಂದರ್ಭದಲ್ಲಿ ಫರಿದಾಬಾದಿನಲ್ಲಿ ವ್ಯಕ್ತಿಯೊಬ್ಬರು ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ.

ಹೌರಾದಿಂದ ಬಂದಚಿತ್ರ

ಹೌರಾದಿಂದ ಬಂದಚಿತ್ರ

ಕೋಲ್ಕತ್ತಾ :ಮಳೆಯಲ್ಲಿ ಮೊದಲೇ ಶಿಥಿಲಗೊಂಡಿದ್ದ ಮಳೆಗಳ ಮೇಲೆ ರಾಜಕೀಯ ದ್ವೇಷದಿಂದ ಇನ್ನಷ್ಟು ಹಾನಿಯಾಗಿದೆ

ದೆಹಲಿಯ ಮಳೆ

ದೆಹಲಿಯ ಮಳೆ

ಗುರ್ ಗಾಂವ್ ನಲ್ಲಿ ದೆಹಲಿ- ಗುರ್ ಗಾಂವ್ ಎಕ್ಸ್ ಪ್ರೆಸ್ ವೇ ನಲ್ಲಿ ಸಂಚಾರ ದಟ್ಟಣೆ ತಿಳಿಗೊಳಿಸಿತ್ತಿರುವ ಪೊಲೀಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+