ಮೂಡಬಿದಿರೆ ವಿಗ್ರಹ ಕಳವು: ಆರೋಪಿಯ ಪತ್ನಿ ಜೈಲಿಗೆ

ಆದರೆ ಅವನ ಪತ್ನಿ, ಪದವೀಧರೆ ದೀಪ್ತಿಮಯಿ ಮತ್ತು ಆಕೆಯ ತಂದೆಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದು, ಇಬ್ಬರಿಗೂ ಜುಲೈ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ದೀಪ್ತಿಮಯಿ ಮತ್ತು ಆಕೆಯ ತಂದೆ ಕಳ್ಳತನದ ಬಗ್ಗೆಯಾಗಲಿ ಅಥವಾ ಸಂತೋಷದಾಸ ಎಲ್ಲಿದ್ದಾನೆ ಎಂಬುದರ ಬಗ್ಗೆಯಗಾಲಿ ಪೊಲೀಸರ ಬಳಿ ಒಂಚೂರು ಬಾಯ್ಬಿಟ್ಟಿಲ್ಲ.
ಆದರೆ, ಸಂತೋಷದಾಸ್ ಮತ್ತು ದೀಪ್ತಿಮಯಿ ದಂಪತಿಗೆ 10 ತಿಂಗಳ ಮಗು ಇರುವುದರಿಂದ ದೀಪ್ತಿಮಯಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಜೈನಕಾಶಿಯಲ್ಲಿ ಜು. 5ರಂದು ಸಿದ್ಧಾಂತ ದರ್ಶನ ಮಂದಿರದಿಂದ ಕೋಟ್ಯಂತರ ರೂ ವೌಲ್ಯದ ವಿಗ್ರಹಗಳನ್ನು ದೋಚಿದ್ದ ಪ್ರಮುಖ ಆರೋಪಿ, ಛತ್ತೀಸ್ ಗಡದ ಸಂತೋಷದಾಸ್ ಯಾನೆ ಘನಶ್ಯಾಮದಾಸನಿಗೆ ಸಹಕಾರ ನೀಡಿದ ಆರೋಪದಲ್ಲಿ ಆತನ ಪತ್ನಿ ದೀಪ್ತಿಮಯಿ ಮೊಹಂತಿ ಮತ್ತು ಮಾವ ದಿಗಂಬರ್ ಮೊಹಂತಿಯನ್ನು ಬಂಧಿಸಲಾಗಿದೆ.
ಅಂತಾರಾಜ್ಯ ಚೋರ ಘನಶ್ಯಾಂ ದಾಸನ ಬಗ್ಗೆ ಸುಳಿವು ಪಡೆದ ಮಂಗಳೂರು ಪೊಲೀಸರು ಒರಿಸ್ಸಾಕ್ಕೆ ತೆರಳಿದ್ದರು. ದಿಗಂಬರ್ ಮೊಹಂತಿಯ ಮನೆಯ ಮೇಲೆ ದಾಳಿ ನಡೆಸಿ 1.12 ಕೆಜಿ ತೂಕದ ಗಟ್ಟಿ ಬಂಗಾರ, ರತ್ನದ ಹರಳುಗಳು ಮತ್ತು 2 ಲಕ್ಷ ರೂ. ನಗದು, ಬೆಲೆಬಾಳುವ ವಿಗ್ರಹಗಳು ಸೇರಿ ಸುಮಾರು 3 ಕೋಟಿ ರೂ. ಬೆಲೆಯ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.
ದಿಗಂಬರ ಮೊಹಂತಿ ಒರಿಸ್ಸಾ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ 4ನೆ ದರ್ಜೆಯ ನೌಕರ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಘನಶ್ಯಾಮ್ ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.












Click it and Unblock the Notifications