ಬಾಲಾಪರಾಧಿಗಳ ವಯೋಮಿತಿ ಇಳಿಕೆ ಇಲ್ಲ : ಸುಪ್ರೀಂ

ಬಾಲಾಪರಾಧಿ ಕಾಯ್ದೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬುಧವಾರ ಹೇಳಿರುವ ನ್ಯಾಯಾಲಯ, ಬಾಲಾಪರಾಧ ನ್ಯಾಯ ಮಂಡಳಿಯೇ ಅಮಾನುಷವಾದ ಮತ್ತು ಹೀನವಾದ ಅಪರಾಧಗಳ ವಿಚಾರಣೆಯನ್ನು ನಡೆಸುವುದೇ ಸೂಕ್ತವಾಗಿದೆ ಎಂದು ಹೇಳಿದೆ.
ಕಮಲ್ ಕುಮಾರ್ ಪಾಂಡೆ ಮತ್ತು ಸುಕುಮಾರ್ ಎಂಬ ವಕೀಲರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಬಾಲಾಪರಾಧ ಕಾಯಿದೆ ಸೆಕ್ಷನ್ 2 (ಕೆ), 10 ಮತ್ತು 17 ಬಾಲಾಪರಾಧಿಗಳ ವಯಸ್ಸಿಗೆ ಸಂಬಂಧಿಸಿದ್ದು.
ಐಪಿಸಿಯ ಸೆಕ್ಷನ್ 82 ಮತ್ತು 83ರಲ್ಲಿನ ಬಾಲಾಪರಾಧಿಗಳ ವಯೋಮಿತಿಯ ವ್ಯಾಖ್ಯಾನವು ಬಾಲಾಪರಾಧ ಕಾಯಿದೆಯಲ್ಲಿನ ವ್ಯಾಖ್ಯಾನಕ್ಕಿಂತ ಉತ್ತಮವಾಗಿದೆ. ಆದ್ದರಿಂದ ಬಾಲಾಪರಾಧಿಗಳ ವಯಸ್ಸನ್ನು 18 ರಿಂದ 16ಕ್ಕೆ ಇಳಿಸಬೇಕು ಎಂದು ಮನವಿ ಮಾಡಿದ್ದರು.
ತೀರ್ಪಿನಿಂದ ಏನಾಗಲಿದೆ : 2012ರ ಡಿ.16ರಂದು ದಿಲ್ಲಿಯಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮಾತ್ರವಲ್ಲದೆ ಈ ಬಗೆಯ ಇನ್ನೂ ಅನೇಕ ಪ್ರಕರಣಗಳಲ್ಲಿನ ಬಾಲಾಪರಾಧಿಗಳು ಭಾಗಿಯಾಗಿದ್ದಾರೆ. ಆದರೆ, ಇವರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಬೇಡಿಕೆಗೆ ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಹಿನ್ನಡೆ ಉಂಟಾಗಲಿದೆ.


Click it and Unblock the Notifications
