ಚಿತ್ರಗಳಲ್ಲಿ: ದೆಹಲಿ ಮಳೆ ಬಂದರೆ ನಲಿದಾಟ
ಬೆಂಗಳೂರು, ಜು.16: ಮುಂಗಾರು ಮಳೆ ಉತ್ತರಾಖಂಡ್, ಉತ್ತರ ಪ್ರದೇಶ, ಹರ್ಯಾಣ, ಮುಂಬೈ, ಪುಣೆಯಲ್ಲಿ ಅಬ್ಬರದಿಂದ ಸುರಿದರೆ, ದೆಹಲಿಯಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದೆ. ಮಂಗಳವಾರ ಬಿದ್ದ ಮಳೆಯನ್ನು ದೆಹಲಿ ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ, ಒಂದಷ್ಟು ಮಳೆ ಚಿತ್ರಗಳನ್ನು ಪಿಟಿಐ ಛಾಯಾಗ್ರಾಹಕರು ಕಳಿಸಿದ್ದಾರೆ ತಪ್ಪದೇ ನೋಡಿ...
ಬಿಹಾರದ ಬೋಧ್ ಗಯಾ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ರೇಖಾ ಚಿತ್ರವನ್ನು ಎನ್ ಐಎ ತಂಡ ಮಂಗಳವಾರ ಬಿಡುಗಡೆ ಮಾಡಿದೆ. ಉಳಿಂದರೆ ಗುಜರಾತ್ ಸಿಎಂ ನರೇಂದ್ರ ಮೋದಿ ಹಾಗೂ ಪುರಿ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳ ಭೇಟಿ ಚಿತ್ರ ಇಲ್ಲಿದೆ
ಭಾರತ ಮತ್ತು ರಷ್ಯ ಸರ್ಕಾರಗಳ ಜಂಟಿ ಯೋಜನೆಯಾಗಿರುವ ತಮಿಳುನಾಡಿನ ಕೂಡಂಕುಳಂನ ಪರಮಾಣು ಸ್ಥಾವರಕ್ಕೆ ಇದ್ದ ಎಲ್ಲ ಅಡ್ಡಿ ಆತಂಕಗಳೂ ನಿವಾರಣೆಯಾಗಿದೆ. ವಿದ್ಯುತ್ ಉತ್ಪಾದನೆ ಆರಂಭವಾಗಿ ಎರಡು ಮೂರು ಉರುಳುತ್ತಿದ್ದಂತೆ ವಿದ್ಯು ತ್ ಸ್ಥಾವರ ವಿರೋಧಿಸಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದೆ.
ಪರಮಾಣು ಸ್ಥಾವರಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಗ್ರೀನ್ ಸಿಗ್ನಲ್ ನೀಡಿದ ಮೇಲೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಇದ್ದ ಆತಂಕ ದೂರವಾಗಿತ್ತು.ಆದರೆ, PMANE ಸಂಘಟಕರು ಕೂಡಂಕುಳಂನ ಇದಿಂಥಕರೈ ರಸ್ತೆಗಳಲ್ಲಿ ಸಾಮೂಹಿಕವಾಗಿ ಮಲಗಿಕೊಂಡು ವಿದ್ಯುತ್ ಸ್ಥಾವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕೂಡಂಕುಳಂ ಯೋಜನೆಯಡಿ ಉತ್ಪಾದಿಸಲಾಗುವ 1300 ಮೆಗಾವ್ಯಾಟ್ ವಿದ್ಯುತ್ ಅನ್ನು ತಮಿಳುನಾಡು ಸೇರಿದಂತೆ ಕರ್ನಾಟಕ ಮುಂತಾದ ರಾಜ್ಯಗಳಿಗೆ ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ.
ಉಳಿದಂತೆ, ಯುಪಿಎ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ, ಗಾಲ್ಫ್ ಕಿಂಗ್ ತನ್ನ ಕ್ವೀನ್ ಜೊತೆಗಿನ ಚಿತ್ರ,ರೋಜಾ ನಿರತ ಮುಸ್ಲಿಮ್ ಬಾಲಕರು, ಹೊಚ್ಚ ಹೊಸ ಕಾರು, ಪ್ರಿಯಾಂಕ್ ಛೋಪ್ರಾ ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಲ್ಲಿದೆ

ಚಿಣ್ಣರ ನಲಿದಾಟ
ಮಳೆ ನಡುವೆ ನಿಂತ ನೀರನಲ್ಲಿ ಫುಟ್ಬಾಲ್ ಗೋಲ್ ಹೊಡೆಯುವ ಶೈಲಿಯಲ್ಲಿ ಕಾಲೆತ್ತಿ ನಿಂತ ಪುಟ್ಟ ಪೋರ. ಜೊತೆಗೊಬ್ಬಳು ಗೆಳತಿ

ತಮಿಳುನಾಡಿನಲ್ಲಿ ಪ್ರತಿಭಟನೆ
PMANE ಸಂಘಟಕರು ಕೂಡಂಕುಳಂನ ಇದಿಂಥಕರೈ ರಸ್ತೆಗಳಲ್ಲಿ ಸಾಮೂಹಿಕವಾಗಿ ಮಲಗಿಕೊಂಡು ವಿದ್ಯುತ್ ಸ್ಥಾವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಯುಪಿಎ ವಿರುದ್ಧ ಪ್ರತಿಭಟನೆ
ಭೋಪಾಲ್: ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಕಾರ್ಯಕರ್ತರು ಯುಪಿಎ ಸರ್ಕಾರದ ಬೆಲೆ ಏರಿಕೆ ವಿರುದ್ಧ ದ್ವಿಚಕ್ರವಾಹನಗಳ ಜಾಥ ನಡೆಸಿ ಪ್ರತಿಭಟನೆ ನಡೆಸಿದರು.

ಗಾಲ್ಫ್ ಕಿಂಗ್
ಟೈಗರ್ ವುಡ್ ಹಾಗೂ ಅವರ ಗರ್ಲ್ ಫ್ರೆಂಡ್ ಲಿಂಡ್ಸೆ ವೊನ್ ಬ್ರಿಟಿಷ್ ಓಪನ್ ಗಾಲ್ಫ್ ಚಾಂಪಿಯನ್ ಶಿಫ್ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಹೊಸ ಕಾರು
ಗುರ್ ಗಾಂವ್: ನಿಸ್ಸಾನ್ ಮೋಟರ್ ಕಂಪನಿ ಅಧ್ಯಕ್ಷ ಕಾರ್ಲೊಸ್ ಘೋಸ್ ಅವರು ಡಟ್ಸನ್ ಗೋ ಹೊಸ ಕಾರು ಬಿಡುಗಡೆಗೊಳಿಸಿದ್ದಾರೆ. PTI Photo by Atul Yadav

ಹೈದರಾಬಾದಿನಲ್ಲಿ ರಂಜಾನ್
ಹೈದರಾಬಾದಿನ ಜಮಾ ಮಸೀದಿಯಲ್ಲಿ ರಂಜಾನ್ ಆಚರಣೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪವಿತ್ರ ಕುರಾನ್ ಓದುತ್ತಿದ್ದಾರೆ.

ಪ್ರಿಯಾಂಕಾ ಛೋಪ್ರಾ
ಇಂಫಾಲ್: ಭಾರತದ ಬಾಕ್ಸರ್ ಮೇರಿ ಕೋಮ್ ಅವರ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಏರ್ ಪೋರ್ಟ್ ನಲ್ಲಿ

ಜಗನ್ನಾಥ ದೇಗುಲಕ್ಕೆ ನರೇಂದ್ರ ಮೋದಿ
ಗುಜರಾತ್ ಸಿಎಂ ನರೇಂದ್ರ ಮೋದಿ ಹಾಗೂ ಪುರಿ ಶಂಕರಾಚಾರ್ಯ ಪೀಠದ ಸ್ವಾಮೀಜಿ ನಿಶ್ಚಲಾನಂದ ಸರಸ್ವತಿ ಭೇಟಿ

ಬಾಂಗ್ಲಾದಲ್ಲಿ ಅಪಘಾತ
ಢಾಕಾ: ಆಶುಲಿಯಾ ಸಮೀಪದ ತುರಾಗ್ ನದಿಗೆ ಖಾಸಗಿ ಬಸ್ ಮಂಗಳವಾರ ಉರುಳಿ ಬಿದ್ದಿದ್ದು 7 ಜನ ಮೃತಪಟ್ಟು 20 ಜನಕ್ಕೆ ಗಾಯಗಳಾಗಿರುವ ವರದದಿ ಬಂದಿದೆ.

ಶಂಕಿತರ ಚಿತ್ರ
ಬಿಹಾರದ ಬೋಧ್ ಗಯಾ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ರೇಖಾ ಚಿತ್ರ

ದೆಹಲಿಯ ಮನಮೋಹಕ ಹವೆ
ದೆಹಲಿಯ ಮನಮೋಹಕ ಹವಾಮಾನದಲ್ಲಿ ಪ್ರತಿಷ್ಠಿತ 'ರಾಜ' ರಸ್ತೆ

ಮಳೆ ಎನ್ ಜಾಯ್
ನವದೆಹಲಿ: ಮಳೆ ಎನ್ ಜಾಯ್ ಮಾಡುತ್ತಿರುವ ವ್ಯಕ್ತಿ

ಮಳೆ ಆನಂದ
ನವದೆಹಲಿ: ಮಳೆಯಲ್ಲಿ ಗೆಳತಿಯರು ಜೊತೆಯಲಿ ಓಡಾಟ

ಪೋಸ್ ಹೇಗಿದೆ
ನವದೆಹಲಿ: ಮಳೆ ನಡುವೆ ಸಾಗುತ್ತಿದ್ದ ವ್ಯಕ್ತಿ ಫೋಟೊ ಗಾಗಿ ಕೊಟ್ಟ ಪೋಸ್. ಪಿಟಿಐ ಚಿತ್ರ : ಅತುಲ್ ಯಾದವ್












Click it and Unblock the Notifications