ಈ ಊರಿನಲ್ಲಿ ಕಳ್ಳರೇ ಇಲ್ಲ, ನೋಡಿ ಆನಂದಿಸಿ!

ಬೆಂಗಳೂರು, ಜು. 16 : ಜುಲೈ ತಿಂಗಳ 16, ಮಂಗಳವಾರ, 7 ಗಂಟೆಗೆ, ಬೆಂಗಳೂರಿನ ಜೆಪಿ ನಗರದಲ್ಲಿರುವ ರಂಗಶಂಕರದಲ್ಲಿ ಮೈಸೂರಿನ 'ರಂಗವಲ್ಲಿ' ತಂಡದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಕತೆಯಾಧಾರಿತ 'ಈ ಊರಿನಲ್ಲಿ ಕಳ್ಳರೇ ಇಲ್ಲ' ಎಂಬ ಕನ್ನಡ ನಾಟಕವನ್ನು ಪ್ರದರ್ಶಿಸುತ್ತಿದೆ. ಈ ನಾಟಕವನ್ನು ರಂಗಾಯಣದ ಎಚ್.ಕೆ.ದ್ವಾರಕನಾಥ್ ಅವರು ನಿರ್ದೇಶಿಸಿದ್ದಾರೆ.

ನಾಟಕದ ಬಗ್ಗೆ : ಕಳವು ಅಂದರೆ ಕಳ್ಳತನ. ಇದು ಮುನ್ನಡೆಯುತ್ತಿರುವ ಈ ಇಪ್ಪತ್ತೊಂದನೇ ಶತಮಾನದಲ್ಲಿ ಮನುಷ್ಯರ ಅಸ್ತಿತ್ವವನ್ನೇ ಕೆಣಕಿದೆ, ಕಂಗೆಡಿಸಿದೆ. ಹಾಗೆ ನೋಡಿದರೆ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಈ ಮೂರು ಸಂಗತಿಗಳು ಈ ಕಾಲದ ಜನ ಜೀವನದಲ್ಲಿ ಬೆರೆತು, ಇವುಗಳಿಗಾಗಿಯೇ ಜಗತ್ತಿನ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಈ ಹೊತ್ತಿನಲ್ಲಿ ಇದರ ಹೊಟ್ಟೆಯಿಂದಲೇ ಹುಟ್ಟಿ ಬಂದಿರುವುದು ಈ ಕಳವು.

Kannada play at Rangashankara

ಜಗತ್ತಿನಾದ್ಯಂತ ಅನೇಕ ಕೃತಿಗಳು ಬೆಳಕಿಗೆ ಬಂದದ್ದು; ಕತ್ತಲಿನಲ್ಲಿ ಕಳೆದು ಹೋಗಿರುವ, ಅಂತೆಯೇ ತೋರುವ ಕಳವಿನ ಕುರಿತು ಬರೆದ ಆನಂತರವೇ ಯಾವುದು ಕಳವು? ಕಳವು, ಹಾಗೆಂದರೇನು? ಕಳವಿಗೆ ಕಾರಣಗಳೇನು? ಕಳವಿನಿಂದಾಗುವ ಪರಿಣಾಮವೇನು? ಈ ಪ್ರಶ್ನೆಗಳನ್ನು ಎತ್ತಿಕೊಂಡಿರುವ ಕೃತಿಗಳು ಉಂಟು. ಮುಖ್ಯವಾಗಿ ಇವು ಕಾನೂನಿನ ಕಣ್ಣಿನಲ್ಲಿ ನಾವು ಹಾಕಿಕೊಂಡಿರುವ ಸತ್ಯದ ಬಾಗಿಲುಗಳನ್ನು ಮೀಟಿದವು. ಸತ್ಯದ ಬಗೆಗೆ ನಮ್ಮ ನಂಬಿಕೆಯನ್ನು ಅಲುಗಾಡಿಸಿದವು.

ಇಲ್ಲಿ ಪ್ರೇಮಚಂದ್ರರ ಕಫನ್, ಬೇಂದ್ರೆಯವರ ಸಾಯೋ ಆಟ, ಲಂಕೇಶರ ರೊಟ್ಟಿ, ದೇವನೂರರ ಕುಸುಮಬಾಲೆ, ಅಮರೇಶ ನುಗಡೋಡಿಯವರ ದಿಲ್ ಮಾಂಗೆ ಮೋರ್ ಈ ಮೊದಲಾದ ಕೃತಿಗಳನ್ನು ನೋಡಬಹುದಾಗಿದೆ. ಈ ದಾರಿಯಲ್ಲಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಈ ಊರಿನಲ್ಲಿ ಕಳ್ಳರೇ ಇಲ್ಲ ಕತೆ ಇದೆ. ಮೇಲ್ನೋಟಕ್ಕೆ ಕಥೆಯಂತೆ ಕಂಡರೂ ಇಲ್ಲಿನ ಆಂತರ್ಯದಲ್ಲಿರುವ ಕಥನದ ಗುಣವು ಕಳವಿನ ನಮ್ಮ ಸಿದ್ಧ ಗ್ರಹಿಕೆಯನ್ನು ಒರೆಗೆ ಹಚ್ಚುತ್ತದೆ. ಈ ಮೂಲಕ ನಾವು ನಮ್ಮೊಂದಿಗೆ ಮುಖಾಮುಖಿಯಾಗುವಂತೆ ಉದ್ದೀಪಿಸುತ್ತದೆ.

ತಾಂತ್ರಿಕವರ್ಗ

ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ : ಎಚ್. ಕೆ. ದ್ವಾರಕನಾಥ್
ಸಹ ನಿರ್ದೇಶನ : ಜೀವನ್ ಕುಮಾರ್ ಬಿ. ಹೆಗ್ಗೋಡು
ಬೆಳಕಿನ ವಿನ್ಯಾಸ : ಕೃಷ್ಣಕುಮಾರ್ ನಾರ್ಣಕಜೆ, ಮಹೇಶ್ ನಂಜುಂಡಯ್ಯ
ಹಿನ್ನೆಲೆ ಸಂಗೀತ : ಪ್ರಶಾಂತ್ ಹಿರೇಮಠ್, ವಿಶ್ವಾಸ್ ಕೃಷ್ಣ
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್.
ರಂಗ ನಿರ್ವಹಣೆ : ರಾಜೇಶ್ ಬಿ.

ಪಾತ್ರವರ್ಗ

ದೀಪಕಗ ಕೆ ಅಗಸ್ತ್ಯ
ಮುರಳಿ.ಜಿ
ಶಿಶಿರ
ರಾಘವೇಂದ್ರ ಬೂದನೂರು
ಧನ್ಯಶ್ರೀ
ಭವ್ಯ ಎಂ.ಜೆ
ಶೀವಮೂರ್ತಿ.ಎನ್
ಮೈಸೂರ್ ಸುಧೀರ್
ಸಿಂದೂರ್ ವಿ ಭಟ್
ಗೌತಮ್ ಕೆ.ವಿ
ಬಿ.ಕುಲ್ದೀಪ್ ಎಸ್. ಕುಮಾರ್
ಮಹೇಶ್ ಕುಮಾರ್ ಎನ್.
ಮಂಜು ಎಂ.
ಬಿ.ರಾಜೇಶ್
ಮಂಜುನಾಥ್ ಶಾಸ್ತ್ರೀ
ರವಿಪ್ರಸಾದ್ ಎಚ್.ಆರ್
ಹರಿಪ್ರಸಾದ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+