ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ನ್ ಚಟ ಬೆಳೆಸಿದ 'Apple' ಮೇಲೆ ಕೇಸ್

By Mahesh
|
Google Oneindia Kannada News

Man sues Apple for his porn addiction
ವಾಷಿಂಗ್ಟನ್, ಜು.15: ನನ್ನ ಕೈಗೆ ಆಪಲ್(Apple) ಕಂಪನಿ ಸಾಧಕ ಸಿಗೋ ತನಕ ಚೆನ್ನಾಗಿದ್ದೆ. ಆದರೆ, ಆಪಲ್ ಸಾಧಕಗಳು ಸಿಕ್ಕ ಮೇಲೆ ಸಂಪೂರ್ಣ ಹಾಳಾಗಿ ಬಿಟ್ಟೆ. ಆಪಲ್ ನಿಂದಾಗಿ ನನಗೆ ಪೋರ್ನ್ ನೋಡುವ ಚಟ ಹತ್ತಿಕೊಂಡು ಬೆಳೆದು ಹೆಮ್ಮೆರವಾಗಿದೆ. ನನ್ನನ್ನು ಈ ಸ್ಥಿತಿಗೆ ತಂದ ಆಪಲ್ ಗೆ ಧಿಕ್ಕಾರ ಎಂದು ವ್ಯಕ್ತಿಯೊಬ್ಬ ಕೇಸು ಹಾಕಿರುವ ಘಟನೆ ವರದಿಯಾಗಿದೆ.

ಟೆನ್ನಿಸ್ಸಿ ಪ್ರಾಂತ್ಯದ ನಿವಾಸಿಯೊಬ್ಬರು ಆಪಲ್ ವಿರುದ್ಧ ಕಾನೂನು ಸಮರ ಸಾರಿರುವ ಸುದ್ದಿಯನ್ನು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನನಗೆ ಪೋರ್ನ್ ಚಟ ಇರಲಿಲ್ಲ. ಕಂಪನಿ ನನಗೆ ನೀಡಿದ ಸಾಧಕದಲ್ಲಿದ್ದ ದೋಷದಿಂದ ಇದೆಲ್ಲವೂ ಆಗಿದೆ. ಈ ದೋಷದಿಂದ ಅನಿಯಮಿತ ಇಂಟರ್ನೆಟ್ ಸಂಪರ್ಕ ಸಿಕ್ಕಿದ್ದೆ ಮುಳುವಾಗಿದೆ ಎಂದು ಮಾಜಿ ಅಟರ್ನಿ ಕ್ರಿಸ್ ಸೆವಿಯರ್ ದೂರಿದ್ದಾರೆ.

ಸುಮಾರು 50 ಪುಟಗಳ ದೂರಿನಲ್ಲಿ ತನಗೆ ಉಂಟಾದ ತೊಂದರೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅಮೆರಿಕದಲ್ಲಿ ಸಭ್ಯ ನಾಗರೀಕರನ್ನು ಬೆಳೆಸುವ ಕಾನೂನು ಉತ್ತಮವಾಗಿದೆ ಎನ್ನಲಾಗುತ್ತದೆ. ಆದರೆ, ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಆಪಲ್ ಕಂಪನಿಯಿಂದಾದ ಲೋಪ ದೋಷದಿಂದ ನನ್ನ ಬದುಕು ಸ್ಥಿಮಿತ ಕಳೆದುಕೊಂಡಿದೆ ಎಂದು ಕ್ರಿಸ್ ದೂರಿದ್ದಾರೆ.

ಸಮಸ್ಯೆ ಏನು?: ಸಾಮಾನ್ಯವಾಗಿ ಆಪಲ್ ಸಾಧಕಗಳಾದ ಐಫೋನ್, ಐಪ್ಯಾಡ್ ಮುಂತಾದವುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಮೊದಲು ಸಾಫ್ಟ್ ವೇರ್ ಫ್ಲಿಲ್ಟರ್ ಬಳಸಿ 'ಸೇಫ್' ಮೋಡ್ ನಲ್ಲಿಡಬೇಕಾಗುತ್ತದೆ. ಆದರೆ, ಕ್ರಿಸ್ ಗೆ ಸಿಕ್ಕ ಸಾಧಕದಲ್ಲಿ 'ಸೇಫ್' ಇರಲಿಲ್ಲವಂತೆ.

ಹೀಗಾಗಿ, ಹೊಸ ಸಾಧಕ ಪಡೆದ ತಕ್ಷಣ ಕ್ರಿಸ್ ಸಾಮಾಜಿಕ ಜಾಲ ತಾಣ 'facebook,com' ಬಾಗಿಲು ಬಡಿಯಲು ಯತ್ನಿಸಿದ್ದಾರೆ. ಆದರೆ, ಕೀ ಮಾಡುವಾಗ facebook ಎನ್ನುವುದರ ಬದಲು F**kbook.com ಎಂದು ಕೀ ಮಾಡಿದ್ದಾರೆ. ಇದು ಪೋರ್ನ್ ವೆಬ್ ಸೈಟ್ ಗೆ ಎಂಟ್ರಿ ಕೊಟ್ಟಿದೆ. ಇದರಿಂದ ನನ್ನ ದೈಹಿಕ ಮಾನಸಿಕ ಸ್ಥಿತಿ ಬದಲಾವಣೆಗೊಂಡು ಪೋರ್ನ್ ಸೈಟ್ ನೋಡುವುದೇ ಚಟವಾಗಿ ಬಿಟ್ಟಿದೆ ಎಂದು ಕ್ರಿಸ್ ಹೇಳಿದ್ದಾರೆ.

ಸಾಧಕಗಳು ಸೇಫ್ ಮೋಡ್ ನಲ್ಲಿದ್ದರೆ, ಪೋರ್ನ್ ವೆಬ್ ಸೈಟ್ ಓಪನ್ ಆಗುತ್ತಲೇ ಇರಲಿಲ್ಲ. ಹೀಗಾಗಿ ಆಪಲ್ ಕಂಪನಿಯದ್ದೇ ದೋಷ ಎಂದು ಕ್ರಿಸ್ ದೂರಿದ್ದಾರೆ. ಈ ಚಟ ಹೆಚ್ಚಾಗಿ ಪೋರ್ನ್ ಸೈಟ್ ಹಾಗೂ ನನ್ನ ಹೆಂಡತಿ ನಡುವೆ ಯಾವುದನ್ನು ನೋಡುವುದು ಎಂಬ ಗೊಂದಲದ ಮನಸ್ಥಿತಿ ನನಗೆ ಬಂದು ಬಿಟ್ಟಿತು. ಆಪಲ್ ಉತ್ಪನ್ನಗಳನ್ನು ಬಳಸುವುದೇ ಒಂದು ಚಟ ಅದರಲ್ಲೂ ಇದು ಪೋರ್ನ್ ಸೈಟ್ ಗೆ ದಾರಿ ಮಾಡಿಕೊಂಡರೆ ನಿಯಂತ್ರಣ ಹೇಗೆ ಸಾಧ್ಯ ಎಂದಿದ್ದಾರೆ.

ನನ್ನ ಹೆಂಡತಿ ಅಂಗಾಗಗಳಿಗಿಂತ ಪೋರ್ನ್ ಸೈಟ್ ನ ಯುವ ಹಾಗೂ ಆಕಷಕ ಹುಡುಗಿಯರನ್ನು ನೋಡುವುದೇ ನನಗೆ ಪ್ರಿಯವಾಗಿತ್ತು. ಆಪಲ್ ಸಾಧಕದಿಂದ ಒಟ್ಟಾರೆ ನನ್ನ ಮನಸು, ಸಂಸಾರದ ಸಮತೋಲನ ಕಳೆದುಕೊಂಡಿದೆ ಎಂದು ಕ್ರಿಸ್ ಹೇಳಿದ್ದಾರೆ.

English summary
A resident of Tennessee in the USA has filed a lawsuit against tech giant Apple, accusing it of selling him devices that provided unlimited access to pornographic material on the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X