ಟಿಪ್ಪು ವಿಶ್ವ ವಿದ್ಯಾಲಯಕ್ಕೆ 200 ಎಕರೆ ಭೂಮಿ
ಬೆಂಗಳೂರು, ಜು.15: ಐತಿಹಾಸಿಕ, ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವ ವಿದ್ಯಾಲಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದು ಖಚಿತವಾಗಿದೆ. ಈ ಕುರಿತ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಕೇಂದ್ರ ಸಚಿವ ರೆಹಮಾನ್ ಖಾನ್ ಹೇಳಿದ್ದಾರೆ. ಆದರೆ, ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ನಾಡೋಜ ಎಂ ಚಿದಾನಂದ ಮೂರ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತರ ಇಲಾಖೆ ಸಚಿವ ರೆಹಮಾನ್ ಖಾನ್ ಅವರು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಅಲ್ಪಸಂಖ್ಯಾತರ ವಿವಿ ಆರಂಭಿಸಲಾಗುವುದು ಅದಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದು ಖಚಿತ. ಈ ಕುರಿತು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ 15 ದಿನಗಳ ಕೆಳಗೆ ಪತ್ರ ಕಳಿಸಲಾಗಿದೆ ಎಂದು ಕೇಂದ್ರ ಅಲ್ಪ ಸಂಖ್ಯಾತರ ಸಚಿವ ರೆಹಮಾನ್ ಖಾನ್ ಹೇಳಿದ್ದಾರೆ.
ಕೆಲ ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ವಿವಾದ ಹುಟ್ಟುಹಾಕಿದ್ದಾರೆ. ಬರೀ ಹೆಸರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ಅವರ ಮನಸ್ಥಿತಿ ಎಷ್ಟು ಕಲುಷಿತವಾಗಿದೆ ಎಂಬುದನ್ನು ನೋಡಬಹುದು. ಅಲ್ಪ ಸಂಖ್ಯಾತರ ವಿವಿಗೆ ಬಿಜೆಪಿ ಸರ್ಕಾರವೇ ಒಪ್ಪಿಗೆ ಸೂಚಿಸಿತ್ತು. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ವಿವಿ ಸ್ಥಾಪನೆ ಕಾರ್ಯ ಚುರುಕುಗೊಂಡಿದೆ ಎನ್ನುವುದು ಸರಿಯಲ್ಲ. ಟಿಪ್ಪು ವಿವಿ ಸ್ಥಾಪನೆಗೆ ಶ್ರೀರಂಗಪಟ್ಟಣದಲ್ಲಿ 200 ಎಕರೆ ಭೂಮಿ ಗುರುತು ಮಾಡಲಾಗಿದೆ ಎಂದು ರೆಹಮಾನ್ ಖಾನ್ ಹೇಳಿದರು.

ಅಲ್ಪಸಂಖ್ಯಾತರ ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕರ್ನಾಟಕ, ಜಮ್ಮುಕಾಶ್ಮೀರ, ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ಅಲ್ಪಸಂಖ್ಯಾತರಿಗಾಗೇ ವಿಶ್ವವಿದ್ಯಾಲಯಗಳನ್ನ ಸ್ಥಾಪಿಸುವ ಯೋಜನೆ ಸರ್ಕಾರಕ್ಕಿದೆ. ಈ ವಿವಿಗಳಲ್ಲಿ ಅಲ್ಪಸಂಖ್ಯಾತರಿಗೆ ಕನಿಷ್ಠ ಶೇ.50ರಷ್ಟು ಮೀಸಲಾತಿ ನೀಡುವ ಪ್ರಸ್ತಾವವಿದೆ.
ಥೋರಟ್ ಸಮಿತಿ: ಈ ಯೋಜನೆಯ ರೂಪುರೇಖೆಗಳ ಪರಿಶೀಲನೆಗಾಗಿ ಸರ್ಕಾರವು ಪ್ರೊ. ಸುಖದೇವ್ ಥೋರಟ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅಲ್ಪಸಂಖ್ಯಾತರಿಗಾಗಿ ಶಿಕ್ಷಣ ಸಂಸ್ಥೆಗಳನ್ನ ಸ್ಥಾಪಿಸಬಹುದೇ ಹೊರತು, ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂವಿಧಾನಲ್ಲಿ ಆಸ್ಪದವಿಲ್ಲವೆಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಆದರೆ, ವಿವಿ ಸ್ಥಾಪನೆಗೆ ಸಾಚಾರ್ ವರದಿಯಲ್ಲಿ ಬೆಂಬಲ ವ್ಯಕ್ತವಾಗಿತ್ತು.
ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಇದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಅಲ್ಪ ಸಂಖ್ಯಾತ ವಿವಿಯಲ್ಲಿ ಶೇ 50 ರಷ್ಟು ಮಾತ್ರ ಒಂದು ಸಮುದಾಯಕ್ಕೆ ಮೀಸಲಾಗಿರುತ್ತದೆ. ಮಿಕ್ಕಂತೆ ಸಾಮಾನ್ಯ ವರ್ಗಕ್ಕೆ ಸೀಟುಗಳ ಹಂಚಿಕೆಯಾಗಲಿದೆ. ವಿವಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಲು ಯಾವುದೇ ಕಾರಣಗಳಿಲ್ಲ. ಟಿಪ್ಪು ಸುಲ್ತಾನ್ ಅವರ ಹೆಸರು ಇಡಲು ಕೆಲವರ ವಿರೋಧವಿದೆ ಅಷ್ಟೇ ಅದು ಕೂಡಾ ಆಧಾರ ರಹಿತವಾಗಿದ್ದು ಮತೀಯ ದ್ವೇಷ, ಕೋಮುವಾದಿ ಹಾಗೂ ಸಾರ್ವಜನಿಕ ಹಿತಾಸಕ್ತಿ ವಿರೋಧಿಯಾಗಿದೆ ಎಂದಿದ್ದಾರೆ.
ಮೈಸೂರು ಹುಲಿಯಲ್ಲ, ನರಭಕ್ಷಕ ಹುಲಿ ಎಂದ ಖ್ಯಾತ ಇತಿಹಾಸ ತಜ್ಞ ಚಿದಾನಂದ ಮೂರ್ತಿ ಅವರು ಸೋಮವಾರ ನೀಡಿದ ಪ್ರತಿಕ್ರಿಯೆ ಏನು? ಮುಂದೆ ಓದಿ












Click it and Unblock the Notifications