ರಷ್ಯಾಗೆ ಇಂಟರ್ನೆಟ್ ಭಯ: ಟೈಪ್ ರೈಟರಿಗೇ ಶರಣು!

ಈ ಹಿನ್ನೆಲೆಯಲ್ಲಿ ರಷ್ಯಾ ಯಾವ ಪರಿ ಭೀತಿಗೊಂಡಿದೆ ಅಂದರೆ ಪುರಾತನ ಟೈಪ್ ರೈಟರ್ ಗಳಿಗೇ ಮೊರೆ ಹೋಗಲು ನಿರ್ಧರಿಸಿದೆ. ಇಂಟರ್ ನೆಟ್ ಬಳಸುವುದರಿಂದ ಸರಕಾರದ ಗೌಪ್ಯ ಮಾಹಿತಿ ಸೋರಿಕೆಯಾಗುತ್ತಿದೆ. ಆದ್ದರಿಂದ ಸರಕಾರದ ರಹಸ್ಯವನ್ನು ಕಾಯ್ದುಕೊಳ್ಳಲು ಹಳೆಯ ಟೈಪ್ ರೈಟರುಗಳೇ ವಾಸಿ ಎಂದು ತೀರ್ಮಾನಿಸಿದೆ.
ಇದೇ ವೇಳೆ, ಅಂತರ್ಜಾಲದ ಬಳಕೆ ಮತ್ತು ಸುರಕ್ಷತೆ ಕಾಪಾಡುವ ವಿಧಾನಗಳನ್ನು ಬಿಗಿಗೊಳಿಸಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಷ್ಯಾ ಆಡಳಿತವು 20 ಟೈಪ್ ರೈಟರ್ ಗಳನ್ನು ಈಗಾಗಲೇ ಖರೀದಿಸಿದೆ. ರಷ್ಯಾದ ಸರ್ವೋಚ್ಛ ನಾಯಕರ ಭದ್ರತೆಯಲ್ಲಿ ತೊಡಗಿರುವ Federal Guards Service FSO ಈ ಖರೀದಿ ಮಾಡಿದೆ. ಇನ್ನು ಮುಂದೆ ಉನ್ನತಮಟ್ಟದ ರಹಸ್ಯ ದಾಖಲೆಗಳನ್ನು ಈ ಟೈಪ್ ರೈಟರುಗಳಿಂದಲೇ ಸಿದ್ಧಪಡಿಸುವುದಾಗಿ FSO ತಿಳಿಸಿದೆ.
ಕುತೂಹಲಕಾರಿ ಸಂಗತಿಯೆಂದರೆ ರಷ್ಯಾದ ಅನೇಕ ಸಚಿವರು ಮತ್ತು ಉನ್ನತ ಸಂಸ್ಥೆಗಳು ಸೂಕ್ಷ್ಮ ಮಾಹಿತಿಗಳ ಗೌಪ್ಯತೆಯನ್ನು ಕಾಪಾಡಲು ಹಿಂದಿನಿಂದಲೂ ಟೈಪ್ ರೈಟರ್ ಗಳನ್ನೇ ಬಳಸುತ್ತಿದ್ದಾರೆ.
ಭದ್ರತಾ ಪಡೆಗಳು, ರಹಸ್ಯ ಸೇವಾ ಸಂಸ್ಥೆಗಳು ಮತ್ತು ತುರ್ತು ಪರಿಸ್ಥಿತಿಗಳ ಸಚಿವಾಲಯ ಎಂದಿಗೂ ಕಂಪ್ಯೂಟರ್ ಮೊರೆ ಹೋಗಿಲ್ಲ. ಈ ಸಂಸ್ಥೆಗಳು ಸದಾ ಟೈಪ್ ರೈಟರ್ ಗಳನ್ನೇ ಬಳಸುತ್ತಾ ಬಂದಿವೆ.












Click it and Unblock the Notifications