ಕಂದ ಮೊಲೆ ಕಚ್ಚಿದ ಅಂತ ತಾಯಿ 90 ಬಾರಿ ಇರಿದಳು!

ಸಿಟ್ಟಿಗೆದ್ದ ಮಹಾತಾಯಿ ಬರೋಬ್ಬರಿ 90 ಬಾರಿ ಆ ಕಂದನಿಗೆ ಮೂತಿ-ಮುಖ ನೋಡದೆ ಇರಿದು ಬಿಟ್ಟಿದ್ದಾಳೆ. ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಅನ್ನಿ. ಆದರೂ ಆ ಮಹಾತಾಯಿ ಏಕೆ ಹಾಗೆ ಮಾಡಿದಳೋ!?
Xiao Bao ಇನ್ನೂ 8 ತಿಂಗಳ ಮಗು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಇರಬೇಕಾದವನು ಆಗಲೇ ಮುಖ ಸೇರಿದಂತೆ ದೇಹದ ಮತ್ತಿತರ ಭಾಗಗಳಲ್ಲಿ 90 ಇರಿತದ ಗಾಯಗಳು ಅನುಭವಿಸಿ, ಅಷ್ಟೂ ಕಡೆ ಈಗ ಹೊಲಿಗೆ ಹಾಕಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾನೆ.
ಚೀನಾದ ಪೂರ್ವ ಪ್ರಾಂತ್ಯವಾದ ಜಿಯಾಂಗ್ಸುನಲ್ಲಿ ಈ ಹೇಯ ಘಟನೆ ನಡೆದಿದೆ. ಘಟನೆ ನಡೆದ ನಂತರವಾದರೂ ತಪ್ಪಿನ ಅರಿವಾಗಿ ಮಹಾತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿದಳಾ ಅಂದರೆ ಉಹುಃ ಅದನ್ನೂ ಮಾಡಿಲ್ಲ. ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಅವನ ಚಿಕ್ಕಪ್ಪ ತಕ್ಷಣ ಅದನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಅಂದಹಾಗೆ, ಚೀನಾದಲ್ಲಿ ಹುಚ್ಚರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ಚಿಕಿತ್ಸೆ ಕೊಡಲು ಅಲ್ಲಿನ ಆಸ್ಪತ್ರೆಗಳು ಹಿಂದೆಮುಂದೆ ನೋಡುತ್ತವೆ. ಈ ಮಹಾತಾಯಿಯೂ ಹುಚ್ಚೀನಾ? ಗೊತ್ತಿಲ್ಲ! ಆದರೆ ಮಗು ಮಾತ್ರ ನೋವು ಅನುಭವಿಸುತ್ತಿದೆ.












Click it and Unblock the Notifications