9 ಮಕ್ಕಳು ಸೇರಿ 10 ಜನ ಜಲ ಸಮಾಧಿ

ಸುಮಾರು 11 ಜನರಿಂದ ತುಂಬಿದ್ದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 10 ಜನರು ಮೃತಪಟ್ಟಿದ್ದಾರೆ. 10ರಲ್ಲಿ 9 ಮಂದಿ ಮಕ್ಕಳಿದ್ದರು. ಒಬ್ಬ ಹುಡುಗಿಯನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪೇಂದ್ರ ಕುಮಾರ್ ಅವರು ಪಿಟಿಐ ಗೆ ಹೇಳಿದ್ದಾರೆ.
ಈ ದುರ್ಘಟನೆ ಕಳೆದ ರಾತ್ರಿ 10.30 ರ ಸುಮಾರಿಗೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೃತರ ಪೈಕಿ ಐವರು ಬಾಲಕಿಯರು ಹಾಗೂ ನಾಲ್ವರು ಬಾಲಕರಿದ್ದಾರೆ. ಎಲ್ಲರ ಸರಾಸರಿ ವಯೋಮಾನ 8 ರಿಂದ 12 ವರ್ಷ ಇರುವ ಸಾಧ್ಯತೆಯಿದೆ.
ಘಟನೆ ಬಗ್ಗೆ ತಿಳಿದು ಸ್ಥಳೀಯ ಗ್ರಾಮಸ್ಥರು ರಕ್ಷಣೆ ಬರುವಷ್ಟರಲ್ಲಿ 9 ಜನ ಜಲ ಸಮಾಧಿಯಾಗಿದ್ದರು. ಒಬ್ಬ ಹುಡುಗಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ, ಆಕೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪೇಂದ್ರ ಹೇಳಿದ್ದಾರೆ.
ಪಂಡಿತ್ ಬಸಾ ಗ್ರಾಮಕ್ಕೆ ತೆರಳಿದ್ದ ಎರಡು ಕುಟುಂಬಕ್ಕೆ ಸೇರಿದ್ದ ಮಕ್ಕಳು ನದಿಯ ಇನ್ನೊಂದು ಭಾಗದಲ್ಲಿರುವ ಖಾವನ್ ಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳುವ ಆತುರದಲ್ಲಿದ್ದರು ಎಂದು ತಿಳಿದು ಬಂದಿದೆ.
ಮಕ್ಕಳೆಲ್ಲರೂ ಜಿಲ್ಲಾ ಜೆಡಿಯು ನಾಯಕ ಮೋಹನ್ ಶರ್ಮ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದರು. ರಾತ್ವಾರ ಪೊಲೀಸ್ ಔಟ್ ಪೋಸ್ಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಂಗಾರು ಮಳೆ ಆರ್ಭಟದಿಂದ ಕೋಸಿ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು ದೋಣಿ ಸಂಚಾರ ಕಷ್ಟವಾಗಿತ್ತು ಎಂದು ತಿಳಿದು ಬಂದಿದೆ.
ಅಂದ ಹಾಗೆ ಜೆಡಿಯು ರಾಷ್ಟ್ರೀಯ ನಾಯಕ ಶರದ್ ಯಾದವ್ ಅವರ ಸಂಸದೀಯ ಕ್ಷೇತ್ರ ಕೂಡಾ ಇದೇ ಮಾದೇಪುರ ಎಂಬುದನ್ನು ಇಲ್ಲಿ ಸ್ಮರಿಸಬಹುದು.


Click it and Unblock the Notifications
