ತವರು ಜಿಲ್ಲೆಗೂ ಕೈತುಂಬಾ ಕೊಟ್ಟ ಸಿಎಂ!

mysore
ಮೈಸೂರು, ಜು.10 : ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ ಸಿದ್ಧರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಸಿದ್ದರಾಮಯ್ಯ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.

ರಾಜ್ಯದ ಜನತೆಯ ಸಂರಕ್ಷಣೆ ನಮ್ಮ ಪ್ರಥಮ ಕರ್ತವ್ಯ. ಅವರ ಅಗತ್ಯಗಳ ಪೂರೈಕ ನಮ್ಮ ಸರಕಾರದ ಜವಾಬ್ದಾರಿ. ತಲೆಯ ಮೇಲೊಂದು ಸೂರು, ಕುಡಿಯಲು ನೀರು, ಆರೋಗ್ಯ ರಕ್ಷಣೆ, ವಿದ್ಯುತ್, ನೆಮ್ಮದಿ ಜೀವನ. ಇವು ಶ್ರೀಸಾಮಾನ್ಯರ ಜೀವನಕ್ಕೆ ಬೇಕಾದ ಕನಿಷ್ಠ ಅಗತ್ಯಗಳು ಎಂದು ಸಿದ್ದರಾಮಯ್ಯ ಬಜೆಟ್ ಭಾಷಣ ಪ್ರಾರಂಭಿಸಿದರು.

ಸತತವಾರಿ 2 ಗಂಟೆ 45 ನಿಮಿಷಗಳ ಕಾಲ ಬಜೆಟ್ ಭಾಷಣ ಓದಿದ ಸಿದ್ದರಾಮಯ್ಯ ತವರು ಜಿಲ್ಲೆಯನ್ನು ಮರೆಯಲಿಲ್ಲ. ಮೈಸೂರಿಗೆ ಸಿಎಂ ಕೊಟ್ಟ ಯೋಜನೆಗಳು ಕೆಳಗಿನಂತಿವೆ.

* ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ದಟ್ಟಣೆ ಇರುವ ಪಟ್ಟಣಗಳಲ್ಲಿ ಮೇಲ್ಸೇತುವೆ ನಿರ್ಮಾಣ.
* ಮೈಸೂರು ಪೊಲೀಸ್ ಶಾಲೆ ಉನ್ನತೀಕರಣ
* ಮೈಸೂರು ವಕೀಲರ ಭವನಕ್ಕೆ 2 ಕೋಟಿ ರೂ
* ಚಾಮರಾಜನಗರದಲ್ಲಿ 10 ಕೋಟಿ ವೆಚ್ಚದಲ್ಲಿ ಟೆಕ್ಸ್ ಟೈಲ್ ಪಾರ್ಕ್
* 4150 ಕೋಟಿ ನರ್ಮ್ ಅನುದಾನವನ್ನು ಬೆಂಗಳೂರು ಮತ್ತು ಮೈಸೂರಿಗೆ ಹಂಚಿಕೆ
* ಮೈಸೂರಿನಲ್ಲಿ ಪೈಲೆಟ್ ಯೋಜನೆ ಪ್ರಾರಂಭಿಸಿ ಸಾರ್ವಜನಿಕರಿಗೆ ವೈ ಫೈ ಸೌಲಭ್ಯ ಒದಗಿಸಲಾಗುತ್ತದೆ.
* ಮೈಸೂರಿನಲ್ಲಿ ಹಾಲಿನ ಪುಡಿ ತಯಾರಿಸುವ ಮೆಗಾ ಡೈರಿ ಸ್ಥಾಪನೆ
* ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
*ಚಾಮರಾಜನಗರದ ಅಮೃತ ಭೂಮಿ ಟ್ರಸ್ಟ್‌ಗೆ 5 ಕೋಟಿ
* ಹಾಲು ಸಂಸ್ಕರಣಾ ಘಟಕ ಸ್ಥಾಪನೆ ಸಿದ್ದರಾಮನ ಹುಂಡಿಯಲ್ಲಿ
* ಸುತ್ತೂರಿನಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ 5 ಕೋಟಿ
* ಚಾಮರಾಜನಗರದಲ್ಲಿ ಗ್ರಾನೈಡ್ ಪಾರ್ಕ್ ಸ್ಥಾಪನೆ
* ಮೈಸೂರಿನ ಕರ್ನಾಟಕ ಕೈಗಾರಿಕಾ ರೇಷ್ಮೆ ನಿಗಮವನ್ನು 5 ಕೋಟಿ ವೆಚ್ಚದಲ್ಲಿ ಆಧುನೀಕರಣ
* ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಪೀಠವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆ. (ಸಿದ್ದರಾಮಯ್ಯ ಬಜೆಟ್ ಮುಖ್ಯಾಂಶಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+