ಬಜೆಟ್: ಕೈಗಾರಿಕೆ, ವಾಣಿಜ್ಯ, ಉದ್ಯಮ ಪಾಲೇನು?

Karnataka Budget 2013-14: Industry, Trade, IT and BT Share
ಬೆಂಗಳೂರು, ಜು.12: ಕಾರ್ಮಿಕ, ಉದ್ಯೋಗ ಹಾಗೂ ತರಬೇತಿ ಕ್ಷೇತ್ರಗಳು ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಚೊಚ್ಚಲ ಬಜೆಟ್ ನಲ್ಲಿ ಸಿಕ್ಕಿದ್ದೇನು? ವಿವರ ಇಲ್ಲಿದೆ ನೋಡಿ

* ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಮಾಸ್ಟರ್ ಟ್ರೈನರ್ಸ್ ತರಬೇತಿ ಸಂಸ್ಥೆ ಸ್ಥಾಪನೆ
* 50 ಕೋಟಿ ರು ವೆಚ್ಚದಲ್ಲಿ 25 ವರ್ಷ ಹಳೆಯದಾದ 25 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳ ಆಧುನೀಕರಣ
* ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಎರಡು ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
* ಹಿಂದುಳಿದ ತಾಲೂಕುಗಳಲ್ಲಿ 100 ಹೊಸ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ
* ವಿವಿಧ ಕಾರ್ಮಿಕ ಕಾಯ್ದೆಗಳ ಸಂಕಲನ ಹಾಗೂ ಗಣಕೀಕರಣಕ್ಕಾಗಿ 5 ಕೋಟಿ ರು ಮೀಸಲು..
* 2012-13ರ ನೂತನ ಏರೋಸ್ಪೇಸ್ ನೀತಿಯಡಿಯಲ್ಲಿ ಏರೋ ಸ್ಪೇಸ್ ಪಾರ್ಕ್ ಕಾರ್ಯಶೀಲಗೊಳಿಸಲು 10 ಕೋಟಿ ರು

* ಉತ್ಪಾದನಾ ವಲಯವನ್ನು ಉತ್ತೇಜಿಸುವ ಯೋಜನೆಯುಳ್ಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ 5 ಕೋಟಿ ರು
* ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ಕೈಗರಿಕಾ ಎಸ್ಟೇಟ್ ಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು 30 ಕೋಟಿ ರು
* ಏಂಜೆಲ್ ನಿಧಿ: ಹೊಸ ಹಾಗೂ ಆವಿಷ್ಕಾರ ಯೋಜನೆಗಳಿಗೆ ನೆರವಾಗಲು 15 ಕೋಟಿ ರು
* ಕೌಶಲ್ಯ ಅಭಿವೃದ್ಧಿಗಾಗಿ ಹರಿಹರ, ದೇವನಹಳ್ಳಿ ಮತ್ತು ಮಂಗಳೂರಿನಲ್ಲಿ ಮಿನಿ ಟೂಲ್ ರೂಮ್ ಸ್ಥಾಪನೆಗೆ 22 ಕೋಟಿ ರು

* ವಿದೇಶಿ ನೇರ ಬಂಡವಾಳ: ಜಪಾನ್, ತೈವಾನ್, ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಜರ್ಮನಿಗಳಲ್ಲಿ 4 ಹೆಲ್ಪ್ ಡೆಸ್ಕ್ ಸ್ಥಾಪನೆ
* ಖಾದಿ ಮತ್ತು ಸಂಘ ಸಂಸ್ಥೆಗಳ ಪುನಶ್ಚೇತನಕ್ಕಾಗಿ ಉಣ್ಣೆ ಕ್ಲಸ್ಟರ್ ಗಳ ಸ್ಥಾಪನೆ, 114 ಗ್ರಾಮ ಕೈಗಾರಿಕಾ ಘಟಗಳ ಬಂಡವಾಳ ಸಹಾಯಧನ -11 ಕೋಟಿ ರು
* ಖಾದಿ ನೂಲುಗಾರರು, ನೇಕಾರರು, ಖಾದಿ ಕಾರ್ಮಿಕರಿಗೆ ಪ್ರೋತ್ಸಾಹ ಧನ 16 ಕೋಟಿ ರು
* ನೇಕಾರರ ಪ್ಯಾಕೇಜಿಗಾಗಿ 100 ಕೋಟಿರು
* ಯಾದಗಿರಿಯಲ್ಲಿ ಅಂತಾರಾಷ್ಟ್ರೀಯ ಜವಳಿ ಪಾರ್ಕ್ ಸ್ಥಾಪನೆ- ಸ್ಥಳೀಯರಿಗೆ ಉದ್ಯೋಗಾವಕಾಶ
* ರೈತ ಸಹಕಾರ ಸಂಸ್ಥೆಗಳಿಂದ ಪಡೆದ 25,000 ರೂ. ಅಲ್ಪಾವಧಿ ಸಾಲಮನ್ನಾ ಯೋಜನೆಯನ್ನು ನೇಕಾರರಿಗೂ ವಿಸ್ತರಿಸಲಾಗುವುದು
* ಚಾಮರಾಜನಗರದಲ್ಲಿ ಗ್ರಾನೈಟ್ ಪಾರ್ಕ್ ನಿರ್ಮಾಣ
* ಕರಕುಶಲ ಕರ್ಮಿಗಳ ಅಭಿವೃದ್ಧಿಗಾಗಿ 5 ವರ್ಷಗಳ ವಿಶೇಷ ಪ್ಯಾಕೇಜನ್ನು ಪ್ರಸ್ತಾಪಿಸಲಾಗಿದ್ದು ಅದನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯಕ್ಕೆ ಸಿಕ್ಕ ಪ್ರೋತ್ಸಾಹ ಧನದ ವಿವರ ಮುಂದೆ ಓದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+