ಹುದ್ದೆ ತೊರೆದ ದೇಶದ ಪ್ರಭಾವಿ ಸಂಪಾದಕ

ದೇಶದ ಪ್ರತಿಭಾವಂತ ಹಾಗೂ ಶ್ರೀಮಂತ ಪತ್ರಕರ್ತ ಪೈಕಿ ಒಬ್ಬರಾದ ಉದಯನ್ ಮುಖರ್ಜಿ ಸಿಎನ್ ಬಿಸಿ -ಟಿವಿ18 ಸಮೂಹ ಬಿಟ್ಟು ಹೊರ ನಡೆದಿದ್ದಾರೆ.
ಸಿಎನ್ ಬಿಸಿ-ಟಿವಿ18 ಸಮೂಹದ ಸ್ಟಾರ್ ನಿರೂಪಕ, ವ್ಯವಸ್ಥಾಪಕ ಸಂಪಾದಕ ಆಗಿ ಉದಯನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಉದಯನ್ ತಿಂಗಳ ಗಳಿಕೆ ಎಷ್ಟು ಲಕ್ಷ ಇರಬಹುದು? ಎಲ್ಲೆಲ್ಲಿ ಷೇರು ತೊಡಗಿಸಿರಬಹುದು ಎಂಬುದರ ಬಗ್ಗೆ ಅನೇಕ ಕಥೆಗಳು ಚಾಲ್ತಿಯಲ್ಲಿವೆ. ಉದಯನ್ ಸುಮಾರು 6 ಕೋಟಿ ರು ಗೂ ಅಧಿಕ ಆದಾಯ ತೆರಿಗೆ ಕಟ್ಟುತ್ತಾರೆ ಎಂಬ ಸುದ್ದಿಯೂ ಇದೆ.
ದೆಹಲಿ ಮೂಲದ ಶೆರೀನ್ ಭಾನ್ ಅವರು ಉದಯನ್ ಸ್ಥಾನವನ್ನು ತುಂಬಲಿದ್ದಾರೆ. ಸಂಸ್ಥೆಯಲ್ಲಿ ಕಾರ್ಯಕಾರಿ ಸಂಪಾದಕಿಯಾಗಿರುವ ಶೆರೀನ್ ಗೆ ಇದು ಬಡ್ರಿಯಾಗಲಿದೆ ಎಂದು ಸಿಎನ್ ಬಿಎನ್-ಟಿವಿ18 ಹೇಳಿದೆ. ಶೆರೀನ್ ಸೆ.1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
40 ವರ್ಷ ವಯಸ್ಸಿನ ಉದಯನ್ ಅವರು ವೈಯಕ್ತಿಕ ಕಾರಣಕ್ಕೆ ಹುದ್ದೆ ತೊರೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಕಾರಣ ಇನ್ನೂ ತಿಳಿದು ಬಂದಿಲ್ಲ. ಕೋಲ್ಕತ್ತಾ ಮೂಲದ ಉದಯನ್ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ ಎಕನಾಮಿಕ್ಸ್ ಪದವಿ ಪಡೆದ ಮೇಲೆ ದೆಹಲಿಯ ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಎಂಎ ಎಕಾನಾಮಿಕ್ಸ್ ಗಳಿಸಿದರು. ಯುಟಿಇ ಸೇರಿದ ಉದಯನ್ ಸಿಎನ್ ಬಿಸಿ ಇಂಡಿಯಾದಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಬೆಳೆದರು. ಲೈವ್ ಮಾರುಕಟ್ಟೆ ನಿರೂಪಣೆಗೆ ಹೆಸರುವಾಸಿಯಾಗಿದ್ದರು. 2012ರಲ್ಲಿ ಪತ್ರಿಕೋದ್ಯಮ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಮನಾಥ್ ಗೊಯೇಂಕಾ ಪ್ರಶಸ್ತಿ ಗಳಿಸಿದ್ದರು.












Click it and Unblock the Notifications