ಚಿತ್ರಗಳಲ್ಲಿ: ಉದ್ಯಾನ ನಗರಿಯಲ್ಲಿ ಯೋಧರ ಸದ್ದು

ಬೆಂಗಳೂರು, ಜು.10: ಕೇಂದ್ರ ಸಶಸ್ತ್ರ ಮೀಸಲು ಪಡೆ(ಸಿಆರ್ ಪಿಎಫ್) ಯೋಧರು ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ನಗರದ ಮಹಾತ್ಮಾ ಗಾಂಧಿ ರಸ್ತೆಗೆ ಹೊಂದಿಕೊಂಡಂತೆ ಇರುವ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಶಸ್ತ್ರಧಾರಿ ಯೋಧರು ತಾಲೀಮು ನಡೆಸಿದ್ದಾರೆ.

945 ಯೋಧರ ನೇಮಕಾತಿ ಸಮಾರಂಭದ ಅಂಗವಾಗಿ ಪಾಸಿಂಗ್ ಔಟ್ ಪರೇಡ್ ನಡೆಯಲಿದ್ದು ಅದಕ್ಕಾಗಿ ಈ ತಾಲೀಮು ಪ್ರದರ್ಶನ ನಡೆಸಲಾಗುತ್ತಿದೆ. ಈ ಪರೇಡ್ ನಲ್ಲಿ ತಮ್ಮ ಕೌಶಲ್ಯದ ಪ್ರದರ್ಶನದ ಜೊತೆಗೆ ಯುವ ಯೋಧರು ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.

ಉಳಿದಂತೆ ಬಿಹಾರದ ಬೋಧ್ ಗಯಾ ದೇಗುಲಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಭೇಟಿ ನೀಡಿದ್ದರು. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಜಗನ್ನಾಥ ರಥ ಯಾತ್ರೆ ಸಂಭ್ರಮದಲ್ಲಿ ಮುಳುಗಿದ್ದಾರೆ.

ಜೋರ್ಡಾನ್ನಿನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಬಾಕ್ಸರ್ ಶಿವ ಥಾಪ(56 ಕೆಜಿ) ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಡು ಭಾರತಕ್ಕೆ ಹಿಂದುರಿಗಿದ ಚಿತ್ರ ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ಯೋಧರ ತಾಲೀಮು

ಯೋಧರ ತಾಲೀಮು

ಬೆಂಗಳೂರು : ಉದ್ಯಾನ ನಗರಿಯಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ(ಸಿಆರ್ ಪಿಎಫ್) ಯೋಧರು

ಫುಲ್ ಯೂನಿಫಾರಮ್ ನಲ್ಲಿ ಯೋಧರು

ಫುಲ್ ಯೂನಿಫಾರಮ್ ನಲ್ಲಿ ಯೋಧರು

ಬೆಂಗಳೂರು : ಈ ಪರೇಡ್ ನಲ್ಲಿ ತಮ್ಮ ಕೌಶಲ್ಯದ ಪ್ರದರ್ಶನದ ಜೊತೆಗೆ ಯುವ ಯೋಧರು ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ.

ಮೀಸಲು ಪಡೆ ಯೋಧರು

ಮೀಸಲು ಪಡೆ ಯೋಧರು

ಬೆಂಗಳೂರು : ನಗರದ ಮಹಾತ್ಮಾ ಗಾಂಧಿ ರಸ್ತೆಗೆ ಹೊಂದಿಕೊಂಡಂತೆ ಇರುವ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಶಸ್ತ್ರಧಾರಿ ಯೋಧರು

ಪದಕ ವಿಜೇತರು

ಪದಕ ವಿಜೇತರು

ಜೋರ್ಡಾನ್ನಿನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಪದಕ ಗೆದ್ದ ಮನದೀಪ್ ಜಾಂಗ್ರ, ಮನೋಜ್ ಕುಮಾರ್, ಶಿವ ಥಾಪಾ, ಎಲ್ ದೇವೇಂದ್ರೋ ಸಿಂಗ್ Photo by Shahbaz Khan

ಜಗನ್ನಾಥ ರಥಯಾತ್ರೆ

ಜಗನ್ನಾಥ ರಥಯಾತ್ರೆ

ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರ ದೇವಿಯ ಮೂರ್ತಿಯನ್ನು ಬೇರೆ ಬೇರೆ ರಥಗಳಲ್ಲಿ ಕೂರಿಸಿ ರಥಯಾತ್ರೆ ಮಾಡಲಾಗುವುದು. ದೇವ ಜಗನ್ನಾಥನ ರಥ ಹಳದಿ ಬಣ್ಣದಲ್ಲಿ, ಬಲಭದ್ರನ ರಥ ಹಸಿರು ಬಣ್ಣದಲ್ಲಿ, ಸುಭದ್ರ ಮಾತೆಯ ರಥ ಕೆಂಪು ಬಣ್ಣದ್ದಾಗಿರುತ್ತದೆ.

ಜಗನ್ನಾಥ ಯಾತ್ರೆ

ಜಗನ್ನಾಥ ಯಾತ್ರೆ

ಮೋದಿ ನಾಡಿನಲ್ಲಿ ಜಗನ್ನಾಥ ದೇವರ ರಥ ಯಾತ್ರೆ ಚಿತ್ರಗಳು

ಜಗನ್ನಾಥ ಯಾತ್ರೆ

ಜಗನ್ನಾಥ ಯಾತ್ರೆ

ಅಹಮದಾಬಾದ್: ನರೇಂದ್ರ ಮೋದಿ ನಾಡಿನಲ್ಲಿ ಜಗನ್ನಾಥ ದೇವರ ರಥ ಯಾತ್ರೆ ಚಿತ್ರಗಳು

ಜಗನ್ನಾಥ ಯಾತ್ರೆ

ಜಗನ್ನಾಥ ಯಾತ್ರೆ

ಅಹಮದಾಬಾದ್: ಜಗನ್ನಾಥ ದೇವರ ರಥ ಎಳೆದು ಚಾಲನೆ ನೀಡಿದ ನರೇಂದ್ರ ಮೋದಿ

ಉಮ್ಮನ್ ಚಾಂಡಿ ತಲೆದಂಡಕ್ಕೆ ಆಗ್ರಹ

ಉಮ್ಮನ್ ಚಾಂಡಿ ತಲೆದಂಡಕ್ಕೆ ಆಗ್ರಹ

ಕೇರಳ: ಯುಡಿಎಫ್ ಹಾಗೂ ವಿಪಕ್ಷ ಕಾರ್ಯಕರ್ತರು ಸೋಲಾರ್ ಪ್ಯಾನಲ್ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಬೋಧ್ ಗಯಾದಲ್ಲಿ ಸೋನಿಯಾ

ಬೋಧ್ ಗಯಾದಲ್ಲಿ ಸೋನಿಯಾ

ಭಾನುವಾರದ ಬಾಂಬ್ ಸ್ಫೋಟದ ನಂತರ ಮೊದಲ ಬಾರಿಗೆ ಬಿಹಾರದ ಬೋಧ್ ಗಯಾ ದೇಗುಲಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ

ಬೋಧ್ ಗಯಾ ದೇಗುಲ

ಬೋಧ್ ಗಯಾ ದೇಗುಲ

ಬಾಂಬ್ ಸ್ಫೋಟದ ನಂತರ ಬೋಧ್ ಗಯಾ ದೇಗುಲಕ್ಕೆ ಭಿಕ್ಷುಗಳಿಂದ ಸಾಮೂಹಿಕ ಪ್ರಾರ್ಥನೆ

ಬೋಧ್ ಗಯಾ ದೇಗುಲ

ಬೋಧ್ ಗಯಾ ದೇಗುಲ

ಬಿಹಾರದ ಬೋಧ್ ಗಯಾ ದೇಗುಲಕ್ಕೆ ಭಿಕ್ಷುಗಳಿಂದ ಸಾಮೂಹಿಕ ಪ್ರಾರ್ಥನೆ

ಬಿಡುಗಡೆ ಭಾಗ್ಯ

ಬಿಡುಗಡೆ ಭಾಗ್ಯ

ಪಾಕಿಸ್ತಾನದಿಂದ ಬಿಡುಗಡೆಗೊಂಡ ಏಳು ಭಾರತೀಯ ಖೈದಿಗಳು ಅಮೃತಸರದಿಂದ 35 ಕಿ.ಮೀ ದೂರದಲ್ಲಿರುವ ಭಾರತ/ ಪಾಕಿಸ್ತಾನದ ಅಟ್ಟಾರಿ/ ವಾಘಾ ಗಡಿ ಭಾಗದಲ್ಲಿ ನಿಂತಿದ್ದಾರೆ.

ಬೋಧ್ ಗಯಾದಲ್ಲಿ ಸೋನಿಯಾ

ಬೋಧ್ ಗಯಾದಲ್ಲಿ ಸೋನಿಯಾ

ಬೋಧ್ ಗಯಾದಲ್ಲಿ ಸೋನಿಯಾ ಗಾಂಧಿ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗೋಷ್ಠಿ

ಜಮ್ಮು ಮಳೆಯಲ್ಲಿ

ಜಮ್ಮು ಮಳೆಯಲ್ಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ನಡುವೆ ಚಿಣ್ಣರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+