ಸೌದಿಯಲ್ಲಿ ಚ್ಯೂಯಿಂಗ್ ಗಮ್ ಕೂಡ ಅಗಿಯುವಂತಿಲ್ಲ!

Saudis to expel foreigners if they break Ramzan rule
ರಿಯಾದ್, ಜು. 9 : ರಂಜಾನ್ ತಿಂಗಳು ಬುಧವಾರ, ಜು.10ರಿಂದ ಆರಂಭ. ಇಡೀ ತಿಂಗಳು ಮುಸ್ಲಿಂ ಬಂಧುಗಳು ರೋಜಾ (ಉಪವಾಸ ವ್ರತ) ಆಚರಿಸುವುದು ವಾಡಿಕೆ. ಸೌದಿ ಅರೇಬಿಯಾದಲ್ಲಿ ರೋಜಾಗೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳು ಮುಸ್ಲಿಂರಿಗೆ ಮಾತ್ರವಲ್ಲ, ಅಲ್ಲಿ ನೆಲೆಸಿರುವ ವಿದೇಶಿಯರಿಗೆ ಕೂಡ ಅನ್ವಯವಾಗುವಂತೆ ಆದೇಶ ಹೊರಡಿಸಿರುವುದು ವಿದೇಶಿಯರಿಗೆ ಭಾರೀ ತಲೆಬಿಸಿ ತಂದಿದೆ.

"ಬೆಳಗಿನಿಂದ ರಾತ್ರಿಯವರೆಗೆ ಇರುವ ಉಪವಾಸದ ಸಮಯದಲ್ಲಿ ಯಾರಾದರೂ ತಿಂಡಿತಿನಿಸುಗಳನ್ನು ಬಹಿರಂಗವಾಗಿ ತಿನ್ನುವುದು ಕಂಡುಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು" ಎಂದು ಸೌದಿ ಅರೇಬಿಯಾದ ಆಂತರಿಕ ವ್ಯವಹಾರಗಳ ಸಚಿವ ಎಚ್ಚರಿಕೆ ನೀಡಿದ್ದಾರೆ.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಮುಸ್ಲಿಂ ಬಾಂಧವರು ಮಾತ್ರವಲ್ಲ ಇಲ್ಲಿ ನೆಲೆಸಿರುವ ವಿದೇಶಿಯರು ಕೂಡ ಕಟ್ಟುನಿಟ್ಟಾಗಿ ಪಾಲಿಸಬೇಕು. ಬಹಿರಂಗವಾಗಿ ತಿಂದು ಮುಸ್ಲಿಂರ ಭಾವನೆಗಳಿಗೆ ಧಕ್ಕೆಯುಂಟು ಮಾಡಬಾರದು ಎಂದು ಎಚ್ಚರಿಸಲಾಗಿದೆ. ಈ ಸಮಯದಲ್ಲಿ ಏನನ್ನೂ ತಿನ್ನುವಂತಿಲ್ಲ, ಕುಡಿಯುವಂತಿಲ್ಲ, ಸಿಗರೇಟು ಸೇದುವಂತಿಲ್ಲ. ಕಡೆಗೆ ಚ್ಯೂಯಿಂಗ್ ಗಮ್ ಅಗಿಯುವಂತೆಯೂ ಇಲ್ಲ.

ಇದಕ್ಕೆ ಶಿಕ್ಷೆಯೇನು ಗೊತ್ತೆ? ಜೈಲು ಶಿಕ್ಷೆ ಅಥವಾ ಛಡಿಯೇಟು ಅಥವಾ ಎರಡೂ. ಉಪವಾಸದ ನಿಯಮವನ್ನು ಮೀರಿದ ವಿದೇಶಿಯರನ್ನು ಗಡಿಪಾರು ಕೂಡ ಮಾಡುವುದಾಗಿ ಕಟ್ಟೆಚ್ಚರ ನೀಡಲಾಗಿದೆ. ಈ ನಿಯಮವನ್ನು ವಿದೇಶಿಯರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದ್ದು, ನಾಗರಿಕರು ಮೈಯೆಲ್ಲ ಕಣ್ಣಾಗಿ ಇರಬೇಕಾಗಿದೆ.

"ಈ ನಿಮಯಗಳು ಮುಸ್ಲಿಂರು, ಮುಸ್ಲಿಂ ಅಲ್ಲದವರು ಎಲ್ಲರಿಗೂ ಅನ್ವಯವಾಗುತ್ತವೆ. ಸೌದಿ ಅರೇಬಿಯಾ ವಿಧಿಸಿರುವ ಯಾವುದೇ ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರುವಂತಿಲ್ಲ. ನಿಷೇಧವನ್ನು ಉಲ್ಲಂಘಿಸುವಂತಿಲ್ಲ. ರಂಜಾನ್ ಉಪವಾಸದ ನೀತಿನಿಯಮ ಪಾಲಿಸಿ ಮುಸ್ಲಿಂ ಬಾಂಧವರ ಭಾವನೆಗಳಿಗೆ ಸ್ಪಂದಿಸತಕ್ಕದ್ದು" ಎಂಬ ಸಂದೇಶ ರವಾನಿಸಲಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕ ಸಚಿವಾಲಯ ಖಾಸಗಿ ಮತ್ತು ಸರಕಾರಿ ಕಚೇರಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಖಾಸಗಿ ವಲಯದ ನೌಕರರಿಗೆ ಎರಡು ಗಂಟೆಗಳ ರಿಯಾಯಿತಿ ಕೊಡಲಾಗಿದ್ದರೆ, ಸರಕಾರಿ ನೌಕರ ಕೆಲಸದ ಅವಧಿ ಬೆಳಿಗ್ಗೆ 9ರಿಂದ 2 ಗಂಟೆಯವರೆಗೆ ಇರುತ್ತದೆ. (ಒನ್ಇಂಡಿಯಾ ನ್ಯೂಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+