ಮೆಟ್ರೋ ಟ್ರೈನ್ ಅಶ್ಲೀಲ ವಿಡಿಯೋ: FIR ದಾಖಲು

intimate-couple-delhi-metro-videos-uploaded-to-websites
ನವದೆಹಲಿ, ಜುಲೈ9: ರಾಜಧಾನಿಯ ಮೆಟ್ರೋ ರೈಲಿನಲ್ಲಿ ಆತ್ಯಾಪ್ತ ಸನ್ನಿವೇಶದಲ್ಲಿ ತೊಡಗುವ ಯುವ ಜೋಡಿಗಳ ವಿಡಿಯೋ ತುಣುಕಗಳು ಅಶ್ಲೀಲ ವೆಬ್ ಸೈಟುಗಳಿಗೆ upload ಮಾಡುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ Delhi Metro ದೂರು ದಾಖಲಿಸಿದ್ದು, ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಹಿಂದಿನ ಸುದ್ದಿ: ರಾಜಧಾನಿಯ ಮೆಟ್ರೋ ರೈಲಿನಲ್ಲಿ ಆತ್ಯಾಪ್ತ ಸನ್ನಿವೇಶದಲ್ಲಿ ತೊಡಗುವ ಯುವ ಜೋಡಿಗಳ ವಿಡಿಯೋ ತುಣುಕಗಳು ಅಶ್ಲೀಲ ವೆಬ್ ಸೈಟುಗಳಲ್ಲಿ ರಾರಾಜಿಸುತ್ತಿವೆ!

ಹೌದು ಇಂತಹ ಒಂದು ಹೀನ ದಂಧೆ ದೆಹಲಿಯ ಮೆಟ್ರೋ ರೈಲಿನಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು Delhi Metro ಭದ್ರತೆಯ ಹೊಣೆ ಹೊತ್ತ ಕೇಂದ್ರ ಔದ್ಯಮಿಕ ಭದ್ರತಾ ಪಡೆಯ (CISF) ಉನ್ನತಾಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

Delhi Metro ಟ್ರೈನುಗಳು ಖಾಲಿ ಸಂಚರಿಸುವಾಗ ಯುವ ದಂಪತಿ/ ಜೋಡಿಗಳು ಆಪ್ತ ಸನ್ನಿವೇಶಗಳಲ್ಲಿ ತೊಡಗುತ್ತವೆ. ಅದನ್ನು ವಿಡಿಯೋ ಚಿತ್ರೀಕರಣವಾಗಿ ಅಂತಾರಾಷ್ಟ್ರೀಯ ಮಟ್ಟದ ಅಶ್ಲೀಲ ವೆಬ್ ಸೈಟುಗಳಿಗೆ upload ಮಾಡುತ್ತಾರೆ.

2011ರಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿ ನಡೆದಿವೆ. ಸುಮಾರು 2 ರಿಂದ 8 ನಿಮಿಷಗಳ 250ಕ್ಕೂ ಹೆಚ್ಚು ಲೈಂಗಿಕ ವಿಡಿಯೋಗಳು ಪಾರ್ನ್ ಸೈಟ್ ಗಳಿಗೆ ನುಸುಳಿವೆ ಎಂದು ಅವರು ತಿಳಿಸಿದ್ದಾರೆ.

ಮೆಟ್ರೋ ಟ್ರೈನುಗಳು ಒಳಗೂ ಹೊರಗೂ CCTVಗಳು ಇರುತ್ತವೆ. ಅವು ಸದಾ ಕಾಲ ಚಿತ್ರೀಕರಣದಲ್ಲಿ ತೊಡಗಿರುತ್ತವೆ. ಹಾಗಾಗಿ ಸಿಸಿಟಿವಿಗಳಲ್ಲಿ ಇಂತಹ ಲೈಂಗಿಕ ದೃಶ್ಯಗಳೂ ದಾಖಲಾಗಿಬಿಡುತ್ತವೆ.

ಆದರೆ CISFನಲ್ಲಿ ಅನಾಮಿಕರು ಯಾರೂ ಆ ವಿಡಿಯೋಗಳನ್ನು ಸಂಸ್ಕರಿಸಿ ಅಶ್ಲೀಲ ವೆಬ್ ಸೈಟುಗಳಿಗೆ upload ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕೆ DMRC ಸಹ ಬಾಧ್ಯಸ್ಥವಾಗುತ್ತದೆ ಎಂದು ಮತ್ತೊಬ್ಬ CISF ಅಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+