ಬೆಂಗಳೂರಿನ ಟೆಕ್ಕಿ ಅಶ್ವಿನಿ ಮಾದಾಪುರದಲ್ಲಿ ಆತ್ಮಹತ್ಯೆ

Bangalore based techie Ashwini commits suicide at Oracle
ಹೈದರಾಬಾದ್, ಜು.9: ಬೆಂಗಳೂರು ಮೂಲದ 23 ವರ್ಷ ವಯಸ್ಸಿನ ಸಾಫ್ಟ್ ವೇರ್ ಉದ್ಯೋಗಿ ಅಶ್ವಿನಿ ನಾಯರ್ ಅವರು ಇಲ್ಲಿನ ಮಾದಾಪುರದಲ್ಲಿ ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಆರೇಕಲ್(oracle) ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅಶ್ಚಿನಿ ಅವರು ಮಂಗಳವಾರ ಎಂದಿನಂತೆ ಮಂಗಳವಾರ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ, ಮಧ್ನಾಹ್ನ ಲಂಚ್ ಬ್ರೇಕ್ ನಲ್ಲಿ ಸಂಸ್ಥೆಯ 8ನೇ ಮಹಡಿ ತಲುಪಿ ಮೇಲಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

ಅಶ್ವಿನಿ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ಅಶ್ವಿನಿ ತಂದೆ ಕೆನೆರಾ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಗೃಹಿಣಿಯಾಗಿದ್ದು, ತಂಗಿಯೊಬ್ಬರಿದ್ದಾರೆ ಎಂಬುದು ತಿಳಿದು ಬಂದಿದೆ.

'ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಈ ನಿರ್ಧಾರ ಕೈಗೊಂಡಿದ್ದೇನೆ' ಎಂದು ಅಶ್ವಿನಿ ಬರೆದಿರುವ ಡೆತ್ ನೋಟ್ ಆಕೆ ಬಳಸುತ್ತಿದ್ದ ಡೈರಿಯಲ್ಲಿ ಸಿಕ್ಕಿದೆ. ಸದ್ಯಕ್ಕೆ ರುಕ್ಮಿಣಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಹೆಚ್ಚಿನ ವಿವರಗಳು ನಂತರ ತಿಳಿಯಲಿದೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ.

ಜೂ.24ರಂದು ಹೈದರಾಬಾದಿನ ಆರೇಕಲ್ ಕಂಪನಿ ಸೇರಿದ್ದ ಅಶ್ವಿನಿ ನಾಯರ್ ಸದಾ ಕಾಲ ಒಂಟಿಯಾಗಿರುತ್ತಿದ್ದರು. ಯಾರೊಟ್ಟಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ತುಂಬಾ ಬೇಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಳು. ಈ ಹಿಂದೆ ಕೂಡಾ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಶ್ಚಿನಿ ಸ್ನೇಹಿತರು, ಆರೇಕಲ್ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಮುಂದುವರೆದಿದೆ.

ಟೆಕ್ಕಿ ಸಾವು ಪ್ರಕರಣಗಳು: ಜುಲೈ ಮೊದಲ ವಾರ 23 ವರ್ಷದ ಷಣ್ಮುಗಂ ಎಂಬ ಟೆಕ್ಕಿ ನಗರದ ರಾಯಪೇಟದಲ್ಲಿರುವ Express Avenue Mallನಲ್ಲಿ ಮೂರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷಣ್ಮುಗಂ Cognizant Technologies ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ವಿವರ ಓದಿ

ಇನ್ಫೋಸಿಸ್ ಕಂಪನಿಯ ಸಾಫ್ಟ್ ವೇರ್ ಇಂಜಿನಿಯರ್ 23 ವರ್ಷ ವಯಸ್ಸಿನ ಪುಣೆಯ ಸ್ವಪ್ನೀಲ್ ಬದ್ರಿನಾರಾಯಣ್ ಮಲ್ಪಾಣಿ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿರುವ ಕಂಪನಿಯ ಗೆಸ್ಟ್ ಹೌಸ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು.

ಹೈದರಾಬಾದಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ನೀಲಿಮಾ ಆತ್ಮಹತ್ಯೆಯ ನಿಗೂಢತೆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗುವ ಮುನ್ನವೇ ಮತ್ತೊಬ್ಬ ಇನ್ಫೋಸಿಸ್ ಟೆಕ್ಕಿ ಸಾವನ್ನಪಿರುವ ಘಟನೆ ನಡೆದಿತ್ತು. ನಂತರ 30 ವರ್ಷ ವಯಸ್ಸಿನ ಟೆಕ್ಕಿ ಗುಂಟೂರು ಮೂಲದ ಅನಿಲ್ ಕುಮಾರ್ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದಾದ ನಂತರ ಕಳೆದ ವರ್ಷ ನವೆಂಬರ್ ನಲ್ಲಿ ಕಾಂಗ್ನಿಜೆಂಟ್ ಟೆಕ್ನಾಲಜೀಸ್ ಸಲ್ಯೂಷನ್ಸ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಸಾವಿಗೆ ಶರಣಾಗಿದ್ದ ಘಟನೆ ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+