ಬಿಹಾರದಲ್ಲಿ ಮೋದಿ ಭಾಷಣ, ಬೋಧಗಯಾದಲ್ಲಿ ಸ್ಪೋಟ

ಬಿಜೆಪಿಯ ಉತ್ತರಪ್ರದೇಶ ಘಟಕದ ಜವಾಬ್ದಾರಿ ಹೊತ್ತಿರುವ ಅಮಿತ್ ಶಾ ಅಯೋಧ್ಯೆಗೆ ತೆರಳಿ ಅಲ್ಲಿ ರಾಮ ಮಂದಿರ ನಿರ್ಮಿಸುವುದು ಶತ ಸಿದ್ದ ಎಂದು ಹೇಳಿಕೆ ನೀಡುತ್ತಾರೆ. ಇದರ ಬೆನ್ನಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಇದಾದ ಮರುದಿನವೇ ಮಹಾಭೋದಿ ದೇವಾಲಯದಲ್ಲಿ ಬಾಂಬ್ ಸ್ಪೋಟ ನಡೆಯುತ್ತದೆ. ಇದನ್ನೆಲ್ಲಾ ಗಮನಿಸಿದರೆ ಸ್ಪೋಟಕ್ಕೂ ಮತ್ತು ಬಿಜೆಪಿಗೂ ಏನಾದರೂ ಸಂಬಂಧವಿದೆಯೇ ಎನ್ನುವ ಸಂಶಯ ಮೂಡುತ್ತದೆ.
ಮೇಲಿನ ಹೇಳಿಕೆ ನೀಡಿ "ALLOW NIA TO COMPLETE INVESTIGATION PLEASE!," ಎಂದು ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಸ್ಪೋಟವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳಲೂ ಅವರು ಮರೆಯಲಿಲ್ಲ.
1500 ಸಾವಿರ ವರ್ಷ ಇತಿಹಾಸವಿರುವ ಬೌದ್ಧರ ಧಾರ್ಮಿಕ ಕ್ಷೇತ್ರವಾದ ಬಿಹಾರದ ಬೋಧಗಯಾದಲ್ಲಿರುವ, ಭಗವಾನ್ ಬುದ್ಧ ಜ್ಞಾನೋದಯ ಪಡೆದ ವಿಶ್ವಪ್ರಸಿದ್ಧ ಮಹಾಬೋಧಿ ಮಂದಿರದಲ್ಲಿ ಭಾನುವಾರ (ಜು 7) ಸ್ಪೋಟ ಸಂಭಿಸಿತ್ತು.
ಇದಾದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸ್ಪೋಟಕ್ಕೆ ಸಂಬಂಧಿಸಿದಂತೆ ಭದ್ರಾತಾ ವಿಚಾರದಲ್ಲಿ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.












Click it and Unblock the Notifications