ಬೋಧಗಯಾ ದೇವಸ್ಥಾನದ ಬಳಿ ಸರಣಿ ಬಾಂಬ್ ಸ್ಪೋಟ

ಬೋಧಗಯಾ, ಜು. 7 : ಬೌದ್ಧರ ಧಾರ್ಮಿಕ ಕ್ಷೇತ್ರವಾದ ಬಿಹಾರದ ಬೋಧಗಯಾದಲ್ಲಿರುವ, ಭಗವಾನ್ ಬುದ್ಧ ಜ್ಞಾನೋದಯ ಪಡೆದ ವಿಶ್ವಪ್ರಸಿದ್ಧ ಮಹಾಬೋಧಿ ಮಂದಿರದಲ್ಲಿ ಜು.7ರ ಬೆಳಗಿನ ಜಾವ ಸರಣಿ ಸ್ಪೋಟಗಳು ಸಂಭವಿಸಿದ್ದು, ಭಯೋತ್ಪಾದನೆಯ ಕರಿನೆರಳು ಭಾರತದ ಮೇಲೆ ಮತ್ತೆ ಆವರಿಸಿಕೊಂಡಿದೆ. ಇದೀಗ ಬಂದಿರುವ ವರದಿಗಳ ಪ್ರಕಾರ ಒಟ್ಟು 9 ಸ್ಫೋಟಗಳು ಸಂಭವಿಸಿವೆ.

ಬೆಳಗಿನ ಜಾವ 5.25ರ ಸುಮಾರಿಗೆ ಮಹಾಬೋಧಿ ದೇವಸ್ಥಾನದ ಆವರಣದಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ನಂತರ ಎರಡು ನಿಮಿಷಗಳ ಅಂತರದಲ್ಲಿ ಒಟ್ಟು ಒಂಬತ್ತು ಸ್ಫೋಟಗಳು ಸಂಭವಿಸಿವೆ. ಗಯಾದಿಂದ 11 ಕಿ.ಮೀ. ದೂರದಲ್ಲಿರುವ ದೇವಸ್ಥಾನದ ಆವರಣದಲ್ಲಿ ನಾಲ್ಕು ಸ್ಫೋಟಗಳಾಗಿವೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ವಿದೇಶಿ ಬೌದ್ಧ ಭಿಕ್ಷುಗಳಿದ್ದಾರೆ. ಒಂದು ಜೀವಂತ ಬಾಂಬನ್ನು ಪತ್ತೆಹಚ್ಚಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಅದನ್ನು ನಿಷ್ಕ್ರಿಯಗೊಳಿಸಿದೆ.

Serial bomb blasts near Bodh Gaya temple, Bihar

ಕಡಿಮೆ ಇಂಟೆನ್ಸಿಟಿ ಇರುವ ಸ್ಫೋಟಗಳು ಸಂಭವಿಸಿರುವುದರಿಂದ ಮತ್ತು ಆ ಹೊತ್ತಿನಲ್ಲಿ ದೇವಸ್ಥಾನದಲ್ಲಿ ಹೆಚ್ಚಿನ ಜನರು ಇರದಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ, ವಿದೇಶಿಯರೇ ಹೆಚ್ಚಾಗಿರುವ ದೇವಸ್ಥಾನದ ಆವರಣದೊಳಗೇ ಸ್ಫೋಟಗಳು ಸಂಭವಿಸಿರುವುದು ಪ್ರಮುಖ ದೇವಸ್ಥಾನಗಳಿಗೆ ನೀಡಲಾಗಿರುವ ಭದ್ರತೆಯ ಬಗ್ಗೆ ಅನುಮಾನ ಮೂಡಿಸುವಂತಾಗಿದೆ. ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಸ್ಫೋಟಗಳ ಬಗ್ಗೆ ಒಂದು ವಾರದ ಹಿಂದೆಯೇ ಕೇಂದ್ರ ಜಾಗೃತ ದಳ ಎಚ್ಚರಿಕೆ ನೀಡಿತ್ತೆಂದು ವರದಿಗಳು ಹೇಳುತ್ತಿವೆ. ಆದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಪೊಲೀಸರು ಮಹಾಬೋಧಿ ಕರ್ಮಾಪಾ ಮಂದಿರವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆಕೊಂಡಿದ್ದಾರೆ. ದೇವಸ್ಥಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಬೋಧಗಯಾಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+