ಸಲಿಂಗರತಿ ಸಿಡಿ ಬಹಿರಂಗ:ಕ್ಯಾಬಿನೆಟ್ ಸಚಿವ ರಾಜೀನಾಮೆ

Madhya Pradesh Finance Minister resigns
ಭೋಪಾಲ, ಜು 6: ಮನೆ ಕೆಲಸದವನ ಮೇಲೆ ಸಲಿಂಗರತಿ ನಡೆಸಿದ ಅಶ್ಲೀಲ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಹಣಕಾಸು ಸಚಿವ 79 ವರ್ಷದ ರಾಘವಜೀ ಶುಕ್ರವಾರ (ಜು 5) ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಖಾಯಂ ಸರಕಾರೀ ನೌಕರಿ ನೀಡುವುದಾಗಿ ಭರವಸೆ ನೀಡಿ ಸಚಿವರು ಮತ್ತು ಅವರ ಇಬ್ಬರು ಸ್ನೇಹಿತರೂ ನನ್ನ ಮೇಲೆ ಸಲಿಂಗರತಿ (ಗುದಮೈಥುನ) ನಡೆಸುತ್ತಿದ್ದರು ಎಂದು ಸೇವಕ ಆರೋಪಿಸಿದ್ದ.

ಆರೋಪಕ್ಕೆ ಭಲವಾದ ಸಾಕ್ಷಿಯಾಗಿ ಈ ಹಿಂದೆ ಸಚಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೇವಕನೊಬ್ಬ ಇದನ್ನು ಚಿತ್ರೀಕರಿಸಿದ ಸಿಡಿ ಮಾಧ್ಯಮಗಳ ಮುಂದೆ ಬಹಿರಂಗವಾಗಿದೆ.

ರಾಜಕುಮಾರ್ ದಂಗಿ ಎನ್ನುವಾತ ಸಚಿವರ ಮನೆಯಲ್ಲಿ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದ. ಸಚಿವರು ತಮ್ಮ ಕಾಮತೃಷೆಗಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದರು. ಇದಲ್ಲದೇ ಸಚಿವರಿಗೆ ಬೇರೆ ಮಹಿಳೆಯ ಜೊತೆ ಕೂಡಾ ಸಂಬಂಧವಿದೆ.

ಮಹಿಳೆಯ ಜೊತೆ ನಡೆಸುತ್ತಿದ್ದ ರಾಸಲೀಲೆಯ ಸಿಡಿ ಕೂಡಾ ನನ್ನ ಬಳಿಯಿದೆ. ಸಚಿವರ ಜೊತೆ ಅವರ ಸ್ನೇಹಿತರೂ ನನ್ನನ್ನು ಬಳಸಿಕೊಳ್ಳುತ್ತಿದ್ದರು ಎಂದು ಸೇವಕ ದಂಗಿ ಆರೋಪಿಸಿದ್ದಾನೆ.

ಸಚಿವರ ಮೇಲಿನ ಆರೋಪ ಮತ್ತು ಸಿಡಿ ಬಹಿರಂಗವಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಚಿವ ರಾಘವಜೀ ಅವರ ರಾಜೀನಾಮೆ ಕೇಳಿದ್ದಾರೆ.

ಸಿಎಂ ಆದೇಶದಂತೆ ಸಚಿವರು ರಾಜೀನಾಮೆ ನೀಡಿದ್ದು, ನನ್ನ ಸೇವಕರ ಆರೋಪ ಸತ್ಯಕ್ಕೆ ದೂರವಾಗಿದ್ದು, ನಾನು ನಿರ್ದೋಷಿಯೆಂದು ರಾಜಕಾರಣಿಗಳು ಹೆಚ್ಚಾಗಿ ಹೇಳುವ standard dialogue ಹೊಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+