ಮಣಿಪಾಲ್ ರೇಪ್: ಆಸ್ಪತ್ರೆಯಿಂದ ವಿದ್ಯಾರ್ಥಿನಿ ಡಿಸ್ ಚಾರ್ಜ್

ಜೂ. 20 ರಂದು ರಾತ್ರಿ ಮೂವರು ಆಟೋ ಚಾಲಕರು ಸದರಿ ವಿದ್ಯಾರ್ಥಿನಿಯನ್ನು KMC ಆವರಣದಲ್ಲಿ ಅಪಹರಣ ಮಾಡಿ, ಸಾಮೂಹಿಕ ಅತ್ಯಾಚಾರಕ್ಕೀಡುಮಾಡಿದ್ದರು. ಬಳಿಕ
ಅತ್ಯಾಚಾರಿಗಳು ಆಕೆಯನ್ನು ಅಂದು ರಾತ್ರಿ ತಾವು ಅಪಹರಣ ಮಾಡಿದ್ದ ಸ್ಥಳದಲ್ಲಿ ಬಿಟ್ಟುಬಂದಿದ್ದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಾಗಿತ್ತು.
ಅತ್ಯಾಚಾರ ಸಂದರ್ಭ ಕಾಲು ಮುರಿತವಾಗಿದ್ದ ಈಕೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಇದೀಗ ಈಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಈ ಮಧ್ಯೆ, ಬಾಧಿತ ವಿದ್ಯಾರ್ಥಿನಿ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಆರೋಪಿಗಳ ಪತ್ತೆ ಹಚ್ಚಲು ಮತ್ತು ತನಿಖೆಗೆ ಅಗತ್ಯಬಿದ್ದಾಗ ಖುದ್ದಾಗಿ ಬಂದು ಪೊಲೀಸರಿಗೆ ಸಹಕರಿಸಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಸಂಬಂಧ ಪೊಲೀಸರು ಇನ್ನೂ ಆರೋಪಪಟ್ಟಿ ದಾಖಲಿಸಿಲ್ಲ. ಬಹುಶಃ ಮುಂದಿನ ವಾರ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸುವ ಸಾಧ್ಯತೆಯಿದೆ.
ಒಬ್ಬ ಆರೋಪಿ ಹರಿಪ್ರಸಾದನನ್ನು ಶಿವಮೊಗ್ಗ ಜೈಲಿನಲ್ಲಿರಿಸಿದ್ದರೆ ಪ್ರಮುಖ ಆರೋಪಿ ಯೋಗೀಶ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೇರಳ ಮೂಲದ ಈಕೆ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ 4ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.












Click it and Unblock the Notifications