ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಕಂತಿನಲ್ಲಿ IPS ಅಧಿಕಾರಿಗಳ ಭಾರಿ ವರ್ಗ

By Srinath
|
Google Oneindia Kannada News

Karnataka- 25 IPS officers transferred - Chief Minister Siddaramaiah
ಬೆಂಗಳೂರು, ಜುಲೈ 5: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ತನ್ನ ಆಡಳಿತ ಯಂತ್ರಕ್ಕೆ ಗುರುವಾರ ಭಾರಿ ಪ್ರಮಾಣದಲ್ಲಿ ಸರ್ಜರಿ ನಡೆಸಿದೆ. ಬರೋಬ್ಬರಿ 22 ಐಪಿಎಸ್‌ ಹಾಗೂ 25 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

ಬೆಂಗಳೂರು ಉತ್ತರ ವಿಭಾಗಕ್ಕೆ ಸಂದೀಪ್‌ ಪಾಟೀಲ್‌ ಅವರು ಡಿಸಿಪಿಯಾಗಿ ಬಂದಿದ್ದಾರೆ. ಡಾ ಪಿ ಎಸ್ ಹರ್ಷ - ಡಿಸಿಪಿ ಬೆಂಗಳೂರು ಪೂರ್ವ, ಡಾ ಟಿಡಿ ಪವಾರ್ ಅವರು ಬೆಂಗಳೂರು ಆಗ್ನೇಯ ವಿಭಾಗಕ್ಕೆ ಹೊಸ ಡಿಸಿಪಿಯಾಗಿದ್ದಾರೆ. ಬಿ ರಮೇಶ್‌ ಅವರು ನೂತನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠರು. ಪವಾರ್‌ ಪ್ರವೀಣ್‌ ಮಧುಕರ್‌ - ಡಿಸಿಪಿ (ಆಡಳಿತ) ಬೆಂಗಳೂರು ನಗರ.

ಆಂತರಿಕ ಭದ್ರತೆ ವಿಭಾಗದ ಎಸ್‌ಪಿಯಾಗಿದ್ದ ಡಿ ರೂಪ ಅವರನ್ನು ಸಿಐಡಿ- ಸೈಬರ್‌)) ವಿಭಾಗದ ಎಸ್‌ಪಿಯನ್ನಾಗಿ ಮಾಡಲಾಗಿದೆ.

ಉದ್ಯಮಿ ರಿಪ್ಪನ್‌ ಮಲ್ಹೋತ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಗುರಿಯಾಗಿದ್ದ ಬೆಂಗಳೂರು ಸಿಸಿಬಿ ಡಿಸಿಪಿ ದೇವರಾಜ್‌ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ದಾವಣಗೆರೆ ಎಸ್‌ಪಿ ಲಾಬೋರಾಮ್‌ ಅವರನ್ನು ನಿಯೋಜಿಸಲಾಗಿದೆ. ಕೆಪಿಎಸ್‌ಸಿ ಹಗರಣದ ತನಿಖಾ ತಂಡದಲ್ಲಿ ಸಿಐಡಿ (ಸೈಬರ್‌ ಎಸ್‌ಪಿ) ರವಿ ಡಿ ಚನ್ನಣ್ಣನವರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಪಿಕೆ ಗರ್ಗ್‌ - ಎಡಿಜಿಪಿ ಸಿಐಡಿ (ಆರ್ಥಿಕ ಅಪರಾಧ), ಎಚ್‌ಎಸ್ ವೆಂಕಟೇಶ್‌ - ಎಸ್‌ಪಿ ಗುಪ್ತದಳ, ಟಿಜಿ ಕೃಷ್ಣ ಭಟ್‌ - ಎಸ್‌ಪಿ ಸಿಐಡಿ, ಎನ್‌ ಸತೀಶ್‌ ಕುಮಾರ್‌ - ಎಐಜಿಪಿ (ಕೇಂದ್ರ ಕಚೇರಿ), ಕೆಪಿ ಪುಟ್ಟಸ್ವಾಮಿ - ಎಸ್‌ಪಿ ಸಿಐಡಿ, ಡಿ ಪ್ರಕಾಶ್‌ - ಎಸ್‌ಪಿ ದಾವಣಗೆರೆ, ಎಂಎನ್ ನಾಗರಾಜ್‌ - ಎಐಜಿಪಿ ಅಪರಾಧ (ಕೇಂದ್ರ ಕಚೇರಿ).

ಆರ್ ಎಚ್ ನಾಯಕ್‌ - ಎಸ್‌ಪಿ ಚಿಕ್ಕಮಗಳೂರು, ಎಸ್‌ಎನ್ ಸಿದ್ದರಾಮಪ್ಪ - ಎಸ್‌ಪಿ ರೈಲ್ವೆ, ಡಾ. ಚಂದ್ರಗುಪ್ತ - ಎಸ್‌ಪಿ ಬೆಳಗಾವಿ, ಚೇತನ್‌ ಸಿಂಗ್‌ ರಾಥೋಡ್‌ - ಎಸ್‌ಪಿ ಬಳ್ಳಾರಿ, ಎನ್ ಶಶಿಕುಮಾರ್‌ - ಎಸ್‌ಪಿ ಹಾವೇರಿ, ಡಾ ವೈ ಎಸ್ ರವಿಕುಮಾರ್‌ - ಎಸ್‌ಪಿ ಚಿತ್ರದುರ್ಗ, ಅಮಿತ್‌ ಸಿಂಗ್‌ - ಎಸ್‌ಪಿ ಗುಲ್ಬರ್ಗ, ರವಿ ಡಿ ಚೆನ್ನನವರ್‌ - ಎಸ್‌ಪಿ ಹಾಸನ.

English summary
Karnataka- 22 IAS- 25 IPS officers transferred - Chief Minister Siddaramaiah. Senior IPS Officer Padam Kumar Garg was appointed Additional Director General of Police, CID, Economic Offences in a reshuffle of 22 IPS officers on Thursday. Now Sandeep Patil is the new DCP, Bangalore North division and P S Harsha DCP, Bangalore East division.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X