22 IAS ಅಧಿಕಾರಿಗಳ ವರ್ಗಾವಣೆ

ನಾಲ್ಕು ದಿನಗಳ ಹಿಂದಷ್ಟೇ 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಗೃಹ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು ಸೇರಿದಂತೆ ಆಯಕಟ್ಟಿನ ಹಲವು ಹುದ್ದೆಗಳಿಗೆ ಬೇರೆಯವರನ್ನು ತರಲಾಗಿದೆ.
ಮುಖ್ಯವಾಗಿ ಸಚಿವ ಶಿವರಾಜ್ ತಂಗಡಗಿ 'ತಮ್ಮ' ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಂದು ಒತ್ತಡ ಹೇರಿ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮುದ್ದಿನೇನಿ ಅವರನ್ನು ತಕ್ಷಣ ಎತ್ತಂಗಡಿ ಮಾಡಿಸಿದ್ದರು. ಅವರಿಗೆ ಯಾವುದೇ ಹುದ್ದೆಯನ್ನು ನೀಡಿರಲಿಲ್ಲ. ಹುದ್ದೆಯ ನಿರೀಕ್ಷೆಯಲ್ಲಿದ್ದ ತುಳಸಿ ಅವರನ್ನು ಈಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ.
ಉಳಿದಂತೆ, ಸಕಾಲ ಯೋಜನೆಯ ರೂವಾರಿ ಡಾ ಶಾಲಿನಿ ರಜನೀಶ್ ಅವರನ್ನು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ಮೈಸೂರಿನ ಆಡಳಿತಾತ್ಮಕ ತರಬೇತಿ ಕೇಂದ್ರದ ಮಹಾ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಪಿ ಮಣಿವಣ್ಣನ್ ಅವರನ್ನು ಮುಖ್ಯ ಯೋಜನಾ ಅಧಿಕಾರಿ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆ ಸ್ಥಾನಕ್ಕೂ ಡಾ ಸಿ ಸೋಮಶೇಖರ್ - ವ್ಯವಸ್ಥಾಪಕ ನಿರ್ದೇಶಕರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಸ್ಥಾನಕ್ಕೂ ವರ್ಗಗೊಂಡಿದ್ದಾರೆ. ಇನ್ನು, ಪಂಕಜ್ ಕುಮಾರ್ ಪಾಂಡೆ ಅವರು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು.
ಅಭಿವೃದ್ಧಿ ಆಯುಕ್ತ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸೀಮಿತಗೊಳಿಸಿ, ಅಭಿವೃದ್ಧಿ ಆಯುಕ್ತರ ಹುದ್ದೆಗೆ ಈ ಹಿಂದೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ವಿ ಉಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಎಸ್ ಕೆ ಪಟ್ಟಾನಾಯಕ್ ಅವರನ್ನು ವರ್ಗಾಯಿಸಲಾಗಿದೆ.
ಇತರೆ ಐಎಎಸ್ ವರ್ಗಾವರ್ಗಿ:
ಎಚ್ ಭಾಸ್ಕರ್ - ಸಾರ್ವಜನಿಕ ಉದ್ದಿಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪರಮೇಶ್ ಪಾಂಡೆ - ಪ್ರಧಾನ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಜನಸ್ಪಂದನ), ಡಾ. ಅಮಿತಾಪ್ರಸಾದ್- ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜೀವ್ ಚಾವ್ಲಾ - ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಪಿ ಎನ್ ಶ್ರೀನಿವಾಸಾಚಾರಿ - ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ದಿ ಇಲಾಖೆ, ಡಾ ಎನ್ ನಾಗಾಂಬಿಕಾ ದೇವಿ - ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ).
ಎಸ್‌ಆರ್ ಉಮಾಶಂಕರ್ - ಕಾರ್ಯದರ್ಶಿ, ಹಣಕಾಸು ಇಲಾಖೆ (ವೆಚ್ಚ), ಎಂಬಿ ದ್ಯಾಬೇರಿ - ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ಎಂಎಸ್ ರವಿಶಂಕರ್ - ಪ್ರಾದೇಶಿಕ ಆಯುಕ್ತ, ಬೆಂಗಳೂರು ವಿಭಾಗ, ಟಿಕೆ ಅನಿಲ್ ಕುಮಾರ್ - ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಪುರಸಭೆಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳು), ಮೊಹಮ್ಮದ್ ಮೊಹಸಿನ್ - ಆಯುಕ್ತರು, ಸಾರ್ವಜನಿಕ ಶಿಕ್ಷಣ, ಕೆ ಅಮರನಾರಾಯಣ - ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಕೆಆರ್ ನಿರಂಜನ್ - ಆಯುಕ್ತರು, ಉದ್ಯೋಗ ಮತ್ತು ತರಬೇತಿ, ಪಿಎಸ್ ವಸ್ತ್ರದ್ - ನಿರ್ದೇಶಕರು, ಕೃಷಿ ಮಾರುಕಟ್ಟೆ ಮತ್ತು ಹೆಚ್ಚುವರಿ ಹೊಣೆ ಆಯುಕ್ತರು, ಪ್ರಾಚ್ಯವಸ್ತು ಸಂಗ್ರಹಾಲಯ ಮೈಸೂರು.
ಚಕ್ರವರ್ತಿ ಮೋಹನ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೆಐಎಡಿಬಿ, ಎಸ್ ಶಂಕರನಾರಾಯಣ - ವಿಶೇಷ ಆಯುಕ್ತರು, ಬಿಬಿಎಂಪಿ.












Click it and Unblock the Notifications