ಚಾಲಕ ಪ್ರಯಾಣಿಕರೆಲ್ಲ ಪ್ರಜ್ಞೆ ತಪ್ಪಿದ್ದರೂ ಬಸ್ ಸೇಫ್

ಆದರೆ ಪ್ರಜ್ಞೆ ತಪ್ಪಿದವರ ಪೈಕಿ 35 ಮಂದಿಯ ಸ್ಥಿತಿ ಗಂಭೀರವಾಗಿದೆ. ಎಲ್ಲ ಪ್ರಯಾಣಿಕರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಬೆಳಗ್ಗೆ ಈ ವಿಚಿತ್ರ ಘಟನೆ ನಡೆದಿದೆ.
ಬಿಜ್ನೂರಿನಿಂದ ಗಂಗೋಹ್ ನತ್ತ ಬಸ್ ಸಂಚರಿಸುತ್ತಿತ್ತು. ಬಸ್ ಶಹರಾನಪುರ ಚೆಕ್ ಪೋಸ್ಟ್ ಬಳಿ ಬಂದಿದ್ದಾಗ ದಾರಿಹೋಕರೊಬ್ಬರು ಬಸ್ಸಿನಲ್ಲಿದ್ದವರ ಅವಸ್ಥೆಯನ್ನು ಕಂಡು ದಂಗಾಗಿದ್ದಾರೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವ್ಯಕ್ತಿಯೊಬ್ಬ ಮಾದಕ ಔಷಧ ಬೆರೆತ ತಿಂಡಿಯನ್ನು ನೀಡಿ ಎಲ್ಲರನ್ನೂ ಪ್ರಜ್ಞೆ ತಪ್ಪಿಸಿರಬಹುದು ಎಂದು ಶಂಕಿಸಲಾಗಿದೆ. ಮತ್ತು ಈ ಸಂಬಂಧ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.












Click it and Unblock the Notifications