ಭೂ ಅಕ್ರಮ: ರಾಜ್ಯಪಾಲರ ಆಣಿಮುತ್ತು ಕೇಳಿಸಿಕೊಳ್ಳಿ

ಕಾವೇರಿ ತವರಾದ ಕೊಡಗು ಜಿಲ್ಲೆಯಾದ್ಯಂತ ಅರಣ್ಯಗಳಲ್ಲಿ ಹಣವಂತರು ಬಂದು ರೆಸಾರ್ಟ್, ಗಣಿಗಾರಿಕೆ ಇತ್ಯಾದಿ ನಡೆಸುತ್ತಿದ್ದಾರೆ. ಅರಣ್ಯ ಹಾಗೂ ನೀರಿನ ಮೇಲೆ ಪ್ರಮುಖವಾಗಿ ಅವಲಂಬಿತವಾಗಿರುವ ರಾಜ್ಯಕ್ಕೆ ಇದರಿಂದ ಆಪತ್ತು ಉಂಟಾಗುತ್ತಿದೆ. ಹೀಗೆ ಪ್ರಕೃತಿ ವಿರುದ್ಧ ನಡೆದುಕೊಂಡರೆ ಪ್ರಕೃತಿ ಸೇಡು ತೀರಿಸಿಕೊಳ್ಳುವುದು ಖಚಿತ ಎಂಬುದಕ್ಕೆ ಉತ್ತರಾಖಂಡ ದುರಂತವೇ ಸಾಕ್ಷಿ.
ರಾಜಭವನ ರಸ್ತೆಯಲ್ಲಿ ಕಟ್ಟಡ! ನಗರದಲ್ಲೂ ಕೆರೆಗಳೆಲ್ಲ ಒತ್ತುವರಿಯಾಗಿ ಮಾಲ್ ಗಳು ಸೃಷ್ಟಿಯಾಗುತ್ತಿವೆ. ಮತ್ತೊಂದೆಡೆ ವಸತಿ ಯೋಗ್ಯ ಭೂಮಿಗಳಲ್ಲಿ ವಾಣಿಜ್ಯ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಭೂಕಬಳಿಕೆ ನಿರಾತಂಕವಾಗಿ ನಡೆಯುತ್ತಿದೆ.
ರಾಜಭವನ ರಸ್ತೆಯಲ್ಲೇ ಅತಿ ಎತ್ತರದ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ಆ ಬಗ್ಗೆ ತಾವು ದೂರು ನೀಡಿದ್ದರೂ ಯಾರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತೀವ್ರ ಅಸಮಾಧಾನ/ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಜತೆಗೆ ಇಂತಹ ಅಕ್ರಮಗಳನ್ನು ಪತ್ರಕರ್ತರು ಸಾರ್ವಜನಿಕರ ಗಮನಕ್ಕೆ ತರಬೇಕು ಎಂದೂ ರಾಜ್ಯಪಾಲರು ಉಚಿತ ಸಲಹೆ ನೀಡಿದ್ದಾರೆ.












Click it and Unblock the Notifications