ಮುಂಬೈ : ಲಾರಿಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

ಮಂಗಳವಾರ ಮುಂಜಾನೆ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದ ಬಳಿ ನಾಲ್ಕು ಲಾರಿಗಳಲ್ಲಿ ಸಾಗಿಸುತ್ತಿದ್ದ, ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡ ಅಧಿಕಾರಿಗಳು, ಲಾರಿಗಳಲ್ಲಿ ಇದ್ದ 47 ಜನರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಎರಡೂ ಸಂಸ್ಥೆಯ ನೂರಕ್ಕೂ ಹೆಚ್ಚು ಅಧಿಕಾರಿಗಳು ಲಾರಿಗಳಲ್ಲಿ ಸಿಕ್ಕಿರುವ ಹಣ ಮತ್ತು ಚಿನ್ನಾಭರಣಗಳ ಮೌಲ್ಯವನ್ನು ಲೆಕ್ಕಹಾಕುತ್ತಿದ್ದು, ಇದುವರೆಗೂ ಸುಮಾರು 200 ಕೋಟಿ ರೂ.ಮೌಲ್ಯದ ಮಾಹಿತಿಗಳು ಮಾತ್ರ ದೊರಕಿವೆ.
ಈ ಹಣ ಮತ್ತು ಆಭರಣಗಳನ್ನು ಗುಜರಾತ್ ಗೆ ಸಾಗಿಸಲಾಗುತ್ತಿತ್ತು. ಪ್ರತಿ ಲಾರಿಯಲ್ಲಿ 35 ಕ್ಕಿಂತ ಹೆಚ್ಚು ಹಣದ ಚೀಲಗಳಿದ್ದವು ಮತ್ತು 15 ಜನರಿದ್ದರು ಎಂಬ ಮಾಹಿತಿಯನ್ನು ಐಟಿ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ರೈಲಿನ ಮೂಲಕ ಹಣ ಮತ್ತು ಆಭರಣಗಳನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಸಾಗಿಸಲು ಯೋಚನೆ ರೂಪಿಸಿದ್ದರು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದು ಹವಾಲ ಹಣ ವಾಗಿರಬಹುದು ಎಂದು ಐಟಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಎಣಿಕೆ ಮುಗಿದಿಲ್ಲ : ಚಿನ್ನಾಭರಣಗಳ ಮೌಲ್ಯ ಲೆಕ್ಕ ಹಾಕುವುದಕ್ಕಿಂತ, ನೋಟುಗಳನ್ನು ಎಣಿಸುವ ಕೆಲಸವೇ ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ. ಮಧ್ಯಾಹ್ನದವರೆಗೆ 200 ಕೋಟಿಗಳಷ್ಟು ಹಣವನ್ನು ಮಾತ್ರ ಲೆಕ್ಕಹಾಕುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬಿಗಿಭದ್ರತೆ : ದಕ್ಷಿಣ ಮುಂಬೈ ಪೊಲೀಸರು ವಿಪಿ ರಸ್ತೆಯಯಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಹಣ ಮತ್ತು ಚಿನ್ನಾಭರಣವನ್ನು ಸುರಕ್ಷಿತವಾಗಿಟ್ಟಿದ್ದಾರೆ. ಬಲ್ಲಾರ್ಡ್ ಎಸ್ಟೇಟ್‌ನ ಸಿಂಧ್ಯಾ ಹೌಸ್‌ನಲ್ಲಿ ಬಂಧಿತ 47 ಜನರನ್ನು ವಿಚಾರಣೆ ನಡೆಸಲಾಗುತ್ತಿದೆ.
ಲಾರಿ ಮಾಲೀಕರ ಪತ್ತೆಗಾಗಿ ಪೊಲೀಸರ ನೆರವು ಕೇಳಿರುವ ಐಟಿ ಅಧಿಕಾರಿಗಳು, ಅವರ ನೆರವಿನಿಂದ ಹಣದ ಆದಾಯದ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಬುಧವಾರ ಹಣದ ಮತ್ತು ಚಿನ್ನಾಭರಣದ ಮೌಲ್ಯ ಎಷ್ಟು ಎಂದು ತಿಳಿಯವ ಸಾಧ್ಯತೆ ಇದೆ.












Click it and Unblock the Notifications