ವೆಬ್ ನಲ್ಲಿ ಸೋನಿಯಾ ಗಾಂಧಿ ವಿರೂಪ ಚಿತ್ರ

Complaint against BJP member for uploading Sonia Gandhi's morphed picture on website
ಜಲಂಧರ್, ಜು.2: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಚಿತ್ರವೊಂದನ್ನು ವಿರೂಪಗೊಳಿಸಿ ಅಂತರ್ಜಾಲದಲ್ಲಿ ತೇಲಿ ಬಿಟ್ಟಿರುವ ಬಿಜೆಪಿ ಕಾರ್ಯಕರ್ತ ಸಂದೀಪ್ ಭಲ್ಲಾ ವಿರುದ್ದ ದೂರು ದಾಖಲಾಗಿದೆ.

ಕಾಂಗ್ರೆಸ್ಸಿನ ಸಂಜಯ್ ಸೆಹಗಾಲ್ ಎಂಬುವವರು ಜಲಂಧರ್ ನ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವೆಬ್ ಸೈಟ್ ವೊಂದರಲ್ಲಿ ಅಪ್ ಲೋಡ್ ಮಾಡಿರುವ ಸೋನಿಯಾ ಗಾಂಧಿ ಅವರ ಚಿತ್ರ ಅತ್ಯಂತ ಕೆಟ್ಟ ಅಭಿರುಚಿಯಿಂದ ಕೂಡಿದೆ. ಇದರಿಂದ ಪಕ್ಷ ಹಾಗೂ ಸೋನಿಯಾಜೀ ಅವರ ಮಾನ ಹಾನಿಯಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಬಿಜೆಪಿ ಖಂಡನೆ: ಬಿಜೆಪಿ ಕಾರ್ಯಕರ್ತನ ಈ ಕಿಡಿಗೇಡಿತನವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಮಲ್ ಶರ್ಮಾ ಅವರು, ನಮ್ಮ ಪಕ್ಷವು ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದೆ. ಕಾರ್ಯಕರ್ತನ ಈ ಕೃತ್ಯ ಅಕ್ಷಮ್ಯವಾಗಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇತ್ತೀಚೆಗೆ ಬಿಜೆಪಿ ಯುವ ಘಟಕದ ಮುಖ್ಯಸ್ಥ ಅನುರಾಗ್ ಮೇಲೆ ಟಿವಿ ಮಾಧ್ಯಮಗಳ ಟಾರ್ಗೆಟ್ ಆಗಿದ್ದರು. ಅನುರಾಗ್ ಠಾಕೂರ್ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸೋನಿಯಾ ಗಾಂಧಿ ಅಷ್ಟೇ ಅಲ್ಲದೆ, ಮಹೇಶ್ ಭಟ್, ಶರ್ಲಿನ್ ಛೋಪ್ರಾ, ಸನ್ನಿ ಲಿಯೋನ್ ಹಾಗೂ ಪೂನಂ ಪಾಂಡೆ ಅವರಿಗೂ ಚುರುಕು ಮುಟ್ಟಿಸುವಂಥ ಕಾಮೆಂಟ್ ಗಳನ್ನು ಹಾಕಿದ್ದರು ಎಂಬ ಆರೋಪವಿದೆ. ಸೋನಿಯಾ ಗಾಂಧಿ ಅವರ ಬಗ್ಗೆ ಬಂದ "India is the place where the top leaders of the country are puppets in the hands of a (dayan) witch," ಕಾಮೆಂಟ್ ಕಾಂಗ್ರೆಸ್ಸಿಗರನ್ನು ಕೆರಳಿಸಿತ್ತು.

2010ರಲ್ಲಿ ಸೋನಿಯಾ ಗಾಂಧಿ ಅವರನ್ನು ದುರ್ಗಾಮಾತೆಯಂತೆ ಚಿತ್ರಿಸಲಾಗಿರುವ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ರೀತಾ ಬಹುಗುಣ ಅವರಿಗೆ ಬಿಹಾರದ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

2007ರಲ್ಲಿ ಸೋನಿಯಾ ಗಾಂಧಿ ಅವರನ್ನು ದುರ್ಗಾಮಾತೆಗೆ ಹೋಲಿಸಿ ಉತ್ತರ ಪ್ರದೇಶದ ಅನೇಕ ಕಡೆಗಳಲ್ಲಿ ಹಾಕಲಾಗಿದ್ದ ಚಿತ್ರಗಳಿಗೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಹಿಂದೂಗಳ ಆರಾಧಿಸುವ ದೇವತೆಯನ್ನು ಪೋಸ್ಟರ್ ಗಳಲ್ಲಿ ಬಳಸಿಕೊಳ್ಳುವುದು ಖಂಡನೀಯ ಎಂದು ಬಿಹಾರದ ಹಿರಿಯ ವಕೀಲ ಸುಧೀರ್ ಓಝಾ ನ್ಯಾಯಾಲಯದ ಮೆಟ್ಟಿಲು ಏರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+