ಪ್ರತ್ಯೇಕ ಏರ್ ಪೋರ್ಟ್ ಕೊಡಿ: ಇನ್ಫೋಸಿಸ್ ಮೂರ್ತಿ

infosys-ceo-narayanmurthy-wants-electronic-city-airport
ಬೆಂಗಳೂರು, ಜೂನ್ 29: ಆರ್ಥಿಕವಾಗಿ ಶೋಚನೀಯ ಸ್ಥಿತಿಗೆ ತಲುಪಿರುವ ದೇಶದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ನ ಚುಕ್ಕಾಣಿಯನ್ನು ಮತ್ತೆ ತಮ್ಮ ಹೆಗಲಿಗೇರಿಸಿಕೊಂಡಿರುವ ಕಂಪನಿಯ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ರಾಜ್ಯ ಸರಕಾರದ ಮುಂದೆ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಏನಪ್ಪಾ ಅಂದರೆ 'ನಾವೇನು ಕೇಳಬಾರದ್ದೇನು ಕೇಳುತ್ತಿಲ್ಲ. Electronics Cityಯಲ್ಲಿರುವ ಐಟಿ ಉದ್ಯಮಕ್ಕೆ ನೆರವಾಗಲು ಈ ಭಾಗದಲ್ಲಿ ಒಂದು ಚಿಕ್ಕ airport ನಿರ್ಮಿಸಿಕೊಡಿ ಸಾಕು. ಇದರಿಂದ ನಾವು ಟೆಕ್ಕಿಗಳು ಮಂದಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಾಗವಾಗಿ ಸಂಚರಿಸಬಹುದು' ಎಂದು ಇನ್ಫಿ ಮೂರ್ತಿ ಸರಕಾರಕ್ಕೆ ಅಲವತ್ತುಕೊಂಡಿದ್ದಾರೆ.

ಅಂದಹಾಗೆ Electronics Cityಯು Infosys ಪ್ರಧಾನ ಕಚೇರಿ ಸೇರಿದಂತೆ ಬೆಂಗಳೂರಿನ ಅನೇಕ ಐಟಿ ಕಂಪನಿಗಳಿಗೆ ಆಶ್ರಯತಾಣವಾಗಿದೆ. ಇಲ್ಲಿ ಮೂಲಸೌಕರ್ಯದ ಕೊರತೆಯಿದೆ ಎಂಬುದು ಐಟಿ ಉದ್ಯಮಿಗಳ ಪುರಾತನ ಕೂಗು/ಕೊರಗು.

'ನಾವೇನೂ ವಿಶೇಷ ಸವಲತ್ತನ್ನು ಕೇಳುತ್ತಿಲ್ಲ. ಸದುದ್ದೇಶದ ಬೇಡಿಕೆ ನಮ್ಮದು. ಉತ್ತಮ ರಸ್ತೆ, ವಿದ್ಯುತ್, ನೀರು, ಶುದ್ಧ ಗಾಳಿ ಮತ್ತು ಕೆಲವು ಇಂಗ್ಇಷ್ ಶಾಲೆಗಳನ್ನು ಈ ಭಾಗದಲ್ಲಿ ಸ್ಥಾಪಿಸಿ ಎಂದು ಕೇಳುತ್ತಿದ್ದೇವೆ, ಅಷ್ಟೇ' ಎಂದು ಇನ್ಫಿ ಮೂರ್ತಿ ಕೇಳಿದ್ದಾರೆ.

'ಇದರ ಜತೆಗೆ Electronics Cityಯಲ್ಲಿ ಒಂದು ಚಿಕ್ಕ ವಿಮಾನ ನಿಲ್ದಾಣವನ್ನೂ ನಿರ್ಮಿಸಿಕೊಡಿ. ರಾಜ್ಯದ ಆರ್ಥಿಕಾಭಿವೃದ್ಧಿಗೆ ಐಟಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಅದನ್ನು ಮನಗಂಡು/ಮತ್ತಷ್ಟು ಉತ್ತೇಜಿಸಲು ಈ ಬೇಡಿಕೆಯನ್ನು ಪೂರೈಸಿ ಸಾಕು' ಎಂದು ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ರಾಜ್ಯ ಸರಕಾರದ ಮುಂದೆ ಅರ್ಜಿಯಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+