Get Updates
Get notified of breaking news, exclusive insights, and must-see stories!

ಮದುವೆಗೆ ಒಪ್ಪದ ಪ್ರಿಯಕರ, ಪ್ರಿಯತಮೆ ಸಾವು

suicide
ಮೈಸೂರು, ಜೂ.27 : ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದರಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಯನಗರದಲ್ಲಿ ನಡೆದಿದೆ. ಮೃತ ಯುವತಿಯನ್ನು ಚೈತ್ರಾ ಸಾಹೇಬ್ ಎಂದು ಗುರುತಿಸಲಾಗಿದೆ.

ಗುರುವಾರ ಬೆಳಗ್ಗೆ ಚೈತ್ರಾ ಸಾಹೇಬ್(28) ಜಯನಗರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತ್ರಾ ಎರಡು ವರ್ಷದಿಂದ ಪ್ರೇಮ್ ಮ್ಯಾಕ್ಸ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು.

ಚೈತ್ರಾ ಮತ್ತು ಪ್ರೇಮ್ ಸಿಯೋರೋ ಲಿಯೋರಾ ಕಂಪನಿ ಉದ್ಯೋಗಿಗಳಾಗಿದ್ದರು. ಇವರು ಪರಿಚಯ ಪ್ರೇಮಕ್ಕೆ ತಿರುಗಿತ್ತು. ಚೈತ್ರಾ ಮನೆಯಲ್ಲಿ ಪೋಷಕರು ಇವರ ವಿವಾಹಕ್ಕೆ ಅನುಮತಿ ನೀಡಿದ್ದರು. ಪ್ರಿಯಕರನ ಬಳಿ ಚೈತ್ರಾ ಎರಡು ದಿನಗಳ ಹಿಂದೆ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದಾಳೆ.

ಆದರೆ, ಆತ ನಿರಾಕರಿಸಿದ್ದಾನೆ. ಅಲ್ಲದೇ ನಮ್ಮ ಮನೆಯಲ್ಲಿ ಈ ವಿವಾಹಕ್ಕೆ ಒಪ್ಪಿಗೆ ನೀಡುವುದಿಲ್ಲ. ನನ್ನನ್ನು ಮರೆತು ಬಿಡು ಎಂದು ಚೈತ್ರಾಗೆ ಹೇಳಿದ್ದಾನೆ. ಇದರಿಂದ ಮನನೊಂದು ಚೈತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಆಶೋಕಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಚೈತ್ರಾ ಸಾವಿಗೂ ಮುನ್ನ ಎರಡು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಪ್ರಿಯಕರ ತನಗೆ ವಂಚನೆ ಮಾಡಿರುವುದಾಗಿ ಆಕೆ ಆರೋಪಿಸಿದ್ದಾಳೆ. ಆದ್ದರಿಂದ ಪ್ರಿಯಕರ ಪ್ರೇಮ್ ರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+