ಬೆಂಗಳೂರು ರಸ್ತೆ ಸುಧಾರಣೆಗೆ ಸಚಿವ ರೆಡ್ಡಿ ಮಾಸ್ಟರ್ ಪ್ಲಾನ್

ವಿದ್ಯಾರ್ಥಿ ದೆಸೆಯಿಂದಲೂ ಬೆಂಗಳೂರಿನವರೇ ಆದ ಆನೇಕಲ್ ನ ರಾಮಲಿಂಗಾ ರೆಡ್ಡಿ ಅವರಿಗೆ ಬೆಂಗಳೂರು ಸಂಚಾರದಟ್ಟಣೆಯ ದುಃಸ್ಥಿತಿ ಚೆನ್ನಾಗಿ ಗೊತ್ತು. ಹಾಗಾಗಿ ಸಂಚಾರವನ್ನು ಸ್ವಲ್ಪ ಸುಧಾರಿಸಲು ಅವರು ಮನಸು ಮಾಡಿರುವುದು ಸ್ವಾಗತಾರ್ಹ.
ರಸ್ತೆ ಅಗಲೀಕರಣ ಎಂದಾಕ್ಷಣ ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ನಮ್ಮ ಬಿಲ್ಡಿಂಗುಗಳನ್ನು ಕೆಡವುತ್ತಾರಾ? ಎಂದು ಜನ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಈಗಿರುವ ಜಾಗದಲ್, ಅದೂ ಸರಕಾರಿ ಜಾಗದಲ್ಲೇ ರಸ್ತೆ ವಿಸ್ತರಿಸುತ್ತೇವೆ. ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಸಚಿವ ರೆಡ್ಡಿ ಅಭಯ ನೀಡಿದ್ದಾರೆ.
ಅಂದಹಾಗೆ ಈ ಕಾಮಗಾರಿ ಉಸ್ತುವಾರಿಯನ್ನು ಬಿಡಿಎಗೆ ವಹಿಸಲಾಗಿದೆ. ಇದೇ ಮಳೆಗಾಲದಲ್ಲಿ 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
BBMP, BDA, Bangalore traffic police, BWSSB, BMRDA, Bangalore Urban district, BMTC ಮತ್ತು BMRCL ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಸರಕಾರದ ಈ ನಿರ್ಧಾರಗಳನ್ನು ಮಂಗಳವಾರ ಪ್ರಕಟಿಸಿದ್ದಾರೆ.
ಎಲ್ಲೆಲ್ಲಿ ರಸ್ತೆ ವಿಸ್ತರಣೆ? ವಿವರಗಳೇನು?
1) ನಾಗವಾರದ ಥಣಿಸಂದ್ರ ಮೇಲುರಸ್ತೆ ಸಮೀಪ ಸಿಲ್ಕ್ ಬೋರ್ಡ್‌ನಿಂದ ಜಯದೇವ ಹೃದ್ರೋಗ ಆಸ್ಪತ್ರೆಯ ತನಕ (29ನೇ ಮುಖ್ಯರಸ್ತೆ),
2) ಮೇಖ್ರಿ ವೃತ್ತದ ಬಳಿಯಿಂದ ವಿಂಡ್ಸರ್ ಮ್ಯಾನರ್ ಹೋಟೆಲಿನವರೆಗಿನ ರಮಣಶ್ರೀ ರಸ್ತೆ,
3) ಕೆಆರ್ ಪುರದ ಬೆನ್ನಿಗಾನಹಳ್ಳಿಯಿಂದ ಮಹದೇವಪುರ ಮೇಲುರಸ್ತೆ ತನಕ,
4) ಡೈರಿ ವೃತ್ತದಿಂದ ಸಾಗರ್ ಅಪೊಲೊ ಆಸ್ಪತ್ರೆವರೆಗಿನ ಬನ್ನೇರುಘಟ್ಟ ರಸ್ತೆ,
5) ಹಡ್ಸನ್ ಸರ್ಕಲ್‌ನಿಂದ ಮಿಷನ್ ರಸ್ತೆವರೆಗಿನ ದೇವಾಂಗ ಹಾಸ್ಟೆಲ್ ರಸ್ತೆ, ಹಾಗೂ
6) ಹೆಬ್ಬಾಳ ಮೇಲುರಸ್ತೆ ಸುತ್ತಲಿನ ರಸ್ತೆಗಳು
ಬೈಸಿಕಲ್ ಟ್ರ್ಯಾಕ್ ಯೋಜನೆ ವಿಫಲ. ಆದರೂ
'ಜಯನಗರದಲ್ಲಿ ಈಗಾಗಲೇ ಸೈಕಲ್ ಟ್ರ್ಯಾಕ್ (ಪ್ರತ್ಯೇಕ ಸೈಕಲ್ ಪಥ) ಇರುವುದು ಸೈಕಲ್ ಸವಾರರನ್ನು ಬಿಟ್ಟು ಉಳಿದೆಲ್ಲ ವಾಹನ ಸವಾರರಿಗೂ ತಿಳಿದಿರುವುದೇ. ಅದೊಂದು ವಿಫಲ ಯೋಜನೆಯಾಗಿದ್ದು, ಇತರೆ ವಾಹನಗಳಿಗೆ ಪಾರ್ಕಿಂಗ್ ಸ್ಪೇಸ್ ಆಗಿದೆ.
ಆದರೂ ಸರಕಾರ ಆ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದು ಮಡಿವಾಳದಲ್ಲೂ 4.5 ಕೋಟಿ ರೂ. ವೆಚ್ಚದಲ್ಲಿ ಇದೇ ಮಾದರಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸಲು ಮುಂದಾಗಿದೆ. ಮುಂದೆ ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ, ಸದಾಶಿವನಗರದಲ್ಲೂ ಸೈಕಲ್ ಟ್ರ್ಯಾಕ್ ನಿರ್ಮಿಸಲು ಉದ್ದೇಶಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications