ಎಸ್ ಬಿಐನಲ್ಲಿ 10 ಸಾವಿರ ಹುದ್ದೆ ನೇಮಕಾತಿ

SBI to appoint 10,000 employees in FY14
ಬೆಂಗಳೂರು, ಜೂ.25: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 10,000 ಹುದೆಗಳು ಸೃಷ್ಟಿಯಾಗಲಿದೆ. ಆಫೀಸರ್ ಗ್ರೇಡ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7500 ಉದ್ಯೋಗಿಗಳು ನಿವೃತ್ತಿ ಹೊಂದುತ್ತಿದ್ದಾರೆ. ಸುಮಾರು 10,000 ಹೊಸ ನೇಮಕಾತಿ ಸಾಧ್ಯತೆಯಿದೆ. ಇದರಲ್ಲಿ 1,500 ಪ್ರೊಬೇಷನರಿ ಅಧಿಕಾರಿಗಳ ಹುದ್ದೆ ಸೇರಿದೆ. ನೇಮಕಾತಿ ಪ್ರಕಿಯೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಆರಂಭಿಸಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೇರ್ಮನ್ ಪ್ರತೀಪ್ ಚೌಧರಿ ವಿವರಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 1200 ಹೊಸ ಬ್ರ್ಯಾಂಚ್ ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಹಾಗೂ ಚೀನಾ, ಯುನೈಟೆಡ್ ಕಿಂಗ್ ಡಮ್ ಸೇರಿದಂತೆ ವಿವಿಧ ದೇಶಗಳಲ್ಲಿ 8 ಬ್ರ್ಯಾಂಚ್ ತೆರೆಯಲಾಗುತ್ತದೆ ಎಂದು ಪ್ರತೀಪ್ ಚೌಧರಿ ಹೇಳಿದ್ದಾರೆ.

ಕಳೆದ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಬ್ಯಾಂಕ್ ಸುಮಾರು 20,000 ಸಹಾಯಕ ಶ್ರೇಣಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಬ್ಯಾಂಕ್ ಕಚೇರಿಗಳನ್ನು ಸುಧಾರಣೆಗೊಳಿಸಿದ್ದು, ಹವಾನಿಯಂತ್ರಿತ ಕೊಠಡಿಗಳನ್ನು ಎಲ್ಲೆಡೆ ನೀಡಲಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ 20,000 ಕ್ಲರ್ಕ್ ಸಿಬ್ಬಂದಿ ಹಾಗೂ 1200 ಅಫೀಸರ್ ಶ್ರೇಣಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 2012-13 ಆರ್ಥಿಕ ವರ್ಷದಲ್ಲಿ ಒಟ್ಟಾರೆ 22,000 ಅಧಿಕಾರಿಗಳು, 20,000 ಕ್ಲರ್ಕ್ ಸಿಬ್ಬಂದಿಗಳ ನೇಮಕವಾಗಿದೆ.

ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 9,500 ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಕಟಿಸಿತ್ತು. ಕನಿಷ್ಠ ವಿದ್ಯಾರ್ಹತೆ ಅಗತ್ಯ ಮಿತಿಯನ್ನು ಇಳಿಸುವ ಮೂಲಕ ಲಕ್ಷಾಂತರ ಪದವೀಧರರಿಗೆ ಶುಭ ಸುದ್ದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+