ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಶಿಕ್ಷಣ: ಪೈ ಸಲಹೆಗೆ ಒಕ್ಕೂಟ ವಿರೋಧ

By Mahesh
|
Google Oneindia Kannada News

outfit opposes Ashok Pai suggestion on Sex Education
ಬೆಂಗಳೂರು, ಜೂ, 24: ಹೈಸ್ಕೂಲು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಕುರಿತು ಸರ್ಕಾರದ ಮಾನಸಿಕ ಆರೋಗ್ಯ ಪಡೆ ಅಧ್ಯಕ್ಷ ಡಾ.ಅಶೋಕ್ ಪೈ ನೀಡಿರುವ ಹೇಳಿಕೆಯನ್ನು ಎಐಎಂಎಸ್ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ) ಹಾಗೂ ಎಐಡಿಎಸ್ ಒ (ಅಖಿಲ ಭಾರತ ಪ್ರಜಾ ಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ) ಖಂಡಿಸಿವೆ.

ಈ ಹಿಂದಿನ ಬಿಜೆಪಿ ಸರ್ಕಾರ 6ನೇ ತರಗತಿಯಿಂದ ಲೈಂಗಿಕ ಶಿಕ್ಷಣದ ಬೋಧನೆ ಆರಂಭಿಸುವ ಯೋಜನೆ ಹಮ್ಮಿಕೊಂಡಾಗ ಸಮಾಜದ ವಿವಿಧ ಸ್ತರಗಳ ಗಣ್ಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಲೈಂಗಿಕ ಶಿಕ್ಷಣದ ಬೋಧನೆಯ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಲಾಗಿದ್ದು, ಲೈಂಗಿಕ ಶಿಕ್ಷಣ ಬೋಧನೆ ಅವಶ್ಯಕತೆ ಇಲ್ಲ ಎಂದು ಸಮಿತಿ ವರದಿಯನ್ನು ನೀಡಿತ್ತು.

ಮಕ್ಕಳಿಗೆ ಲೈಂಗಿಕತೆಯ ಕುರಿತು ತಿಳುವಳಿಕೆಯನ್ನು ಯಾರು, ಯಾವ ಹಂತದಲ್ಲಿ ನೀಡಬೇಕೆಂಬುದರ ಕುರಿತು ಶಿಕ್ಷಣ ತಜ್ಞರು, ಪೋಷಕರು ಹಾಗೂ ಸಾಮಾಜಿಕ ಕ್ಷೇತ್ರಗಳ ಪರಿಣಿತರ ಅಭಿಪ್ರಾಯವನ್ನು ಪರಿಗಣಿಸಬೇಕಾದ ಅವಶ್ಯಕತೆಯನ್ನು ಸ್ಪಷ್ಟ ಪಡಿಸಲಾಗಿತ್ತು. ಆದರೆ, ಈ ಪ್ರಜಾತಾಂತ್ರಿಕ ರೂಢಿಯನ್ನು ಕಡೆಗಣಿಸಿ ಲೈಂಗಿಕ ಶಿಕ್ಷಣವನ್ನು ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಅಮೆರಿಕ, ಯುರೋಪುಗಳಲ್ಲಿ ಲೈಂಗಿಕ ಶಿಕ್ಷಣ ಜಾರಿಗೊಳಿಸಿದ ನಂತರ ಅದು ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ವಿಫಲವಾದದ್ದು, ಅಪಾಯಕಾರಿ ಪರಿಣಾಮ ಉಂಟುಮಾಡಿತು. ಆ ದೇಶಗಳಲ್ಲಿ ಶಾಲೆಗಳಲ್ಲೇ ಗರ್ಭ ನಿರೋಧಕಗಳನ್ನು ಹಂಚಬೇಕಾದ ಆತಂಕಕಾರಿ ಪರಿಸ್ಥಿತಿ ಉಂಟಾಗಿದೆ.

ವಾಸ್ತವ ವಿಚಾರ ಹೀಗಿರುವಾಗ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ತಡೆತಟ್ಟಲು ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದು ಎಳ್ಳಷ್ಟೂ ಹುರುಳಿಲ್ಲದ ವಿಚಾರ. ಅಶ್ಲೀಲತೆಯ ಪ್ರಚಾರ ತಡೆಗಟ್ಟಿ, ಉನ್ನತ ನೀತಿ-ಮೌಲ್ಯಗಳನ್ನು ಬೆಳೆಸುವುದ ರಿಂದ ಅತ್ಯಾಚಾರದಂತಹ ಅಮಾವೀಯ ಕೃತ್ಯಗಳಿಗೆ ಕೊನೆಹಾಕಬಹುದು ಎಂದು ಉಭಯ ಸಂಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿವೆ.

ಯಾವುದೇ ಸಮಾಲೋಚನೆಯಿಲ್ಲದೆ, ಏಕಪಕ್ಷೀಯವಾಗಿ ಜಾರಿಗೊಳಿಸಲು ಹೊರಟಿರುವ ಲೈಂಗಿಕ ಶಿಕ್ಷಣದ ನೀತಿಯನ್ನು ಕೈಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಸರ್ಕಾರದ ಮಾನಸಿಕ ಆರೋಗ್ಯ ಪಡೆಯ ಅಧ್ಯಕ್ಷ ಡಾ.ಅಶೋಕ್ ಪೈ ಅವರು 9, 10, 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಅವರಿಗೆ ಪಾಠ ಮಾಡುವ ಬೋಧಕರಿಗೆ ಸೂಕ್ತ ತರಬೇತಿ ನೀಡಲಾಗುವುದು. ಸೆಕ್ಸ್ ಎಜುಕೇಷನ್ ಬಗ್ಗೆ ಪಠ್ಯ ತಯಾರಾಗುತ್ತಿದೆ ಎಂದು ಡಾ. ಅಶೋಕ್ ಪೈ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಲೈಂಗಿಕ ಶಿಕ್ಷಣ ಜಾರಿಗೆ ತರಲು ಇಚ್ಛಿಸಿದೆ. ಈ ನಡುವೆ ಪ್ರತಿಭಟನೆ, ಪರ-ವಿರೋಧ ಚರ್ಚೆಗಳು ಸಾಕಷ್ಟು ಬಿಸಿಯೇರಿಸುತ್ತಿವೆ.

English summary
AIDSO and AIMSS outfit opposes Ashok Pai suggestion on Sex Education K. Ashok Pai, Chairman of Karnataka State Mental Health Task Force, said on Saturday that sex education will be part of the curriculum at the high school-level in the State from the next academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X