ಚಿತ್ರಗಳಲ್ಲಿ : ಹುಣ್ಣಿಮೆ ಹಬ್ಬ ಗಂಗೆಯಲ್ಲಿ ಮಿಂದೆದ್ದ ಭಕ್ತರು

ಅಹಮದಾಬಾದ್, ಜೂ.23: ಸಬರಮತಿ ನದಿ ಬಳಿ 136ನೇ ರಥ ಯಾತ್ರೆ, ಗುವಾಹತಿ ಬಳಿ ಸಾಧುಗಳ ಭಜನೆ ಕೀರ್ತನೆ ಮೇಳ...ಹುಣ್ಣಿಮೆ ಅಂಗವಾಗಿ ಗಂಗಾನದಿಯಲ್ಲಿ ಮಿಂದೆದ್ದ ಭಕ್ತಾದಿಗಳು, ಜಗನ್ನಾಥ ಮಂದಿರದ ಬಳಿ ಆನೆಗಳಿಗೆ ಅಲಂಕಾರ, 136ನೇ ಜಲ ಯಾತ್ರೆ ಸಂಭ್ರಮ ಎಲ್ಲದರ ಚಿತ್ರ ಇಲ್ಲಿದೆ

ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯಲ್ಲಿ ಈಗ ಪಂಚಾಯಿತಿ ಚುನಾವಣೆ ಕಾವೇರಿದೆ. ಸುರಿವ ಮಳೆ ನಡುವೆ ರಾಜಕೀಯ ನಾಯಕರು ತಮ್ಮ ಭಾಷಣ ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಷಣ ಮಾಡುವಾಗ ಕೊಡೆ ಹಿಡಿದು ನಿಂತ ಜನಸಂದಣಿ ಹೇಗೆ ಕಾಣುತ್ತಿತ್ತು ಚಿತ್ರದಲ್ಲಿ ತಪ್ಪದೇ ನೋಡಿ

ಉಕ್ರೇನ್ನಿನ ಕೀವ್ ನಲ್ಲಿ ಯುವಕರು ಮೈ ಮೇಲೆ ಭೂತ ಬಂದಂತೆ ಹಿಟ್ಟು ಸುರಿದುಕೊಂಡಿದ್ದಾರೆ. ಭುವನೇಶ್ವರದ ಆರ್ಮಿ ವೈದ್ಯ ತನ್ನ ಪತ್ನಿಯನ್ನು ಕತ್ತರಿಸಿ ದೇಹದ ಭಾಗಗಳನ್ನು ತುಂಬಿಟ್ಟಿದ್ದ ಟ್ರಂಕ್ ಚಿತ್ರ ನಿಮಗಾಗಿ ಕಾದಿದೆ.

ಬರ್ಮಿಂಗ್ ಹ್ಯಾಂನಲ್ಲಿ ಇತಿಹಾಸ ಸೃಷ್ಟಿಸಲು ಕಾದಿರುವ ನಾಯಕ ಎಂಎಸ್ ಧೋನಿ ಚಿತ್ರ, ಶ್ರೀನಗರದಲ್ಲಿ ರಕ್ತ ಚೆಲ್ಲಿದ ರಸ್ತೆ, ಕೊರಿಯಾದಲ್ಲಿ ವೈಮಾನಿಕ ಸಾಹಸ ದೃಶ್ಯ, ಏರ್ ಫೋರ್ಸ್ ಅಕಾಡೆಮಿ ಸೇರಿದವರ ಸಂಭ್ರಮ ಎಲ್ಲವೂ ಇಂದಿನ ಚಿತ್ರ ಸುರಳಿಯಲ್ಲಿದೆ.

ಹುಣ್ಣಿಮೆ ಹಬ್ಬ

ಹುಣ್ಣಿಮೆ ಹಬ್ಬ

ಅಹಮದಾಬಾದ್: ಹುಣ್ಣಿಮೆ ಅಂಗವಾಗಿ ಗಂಗಾನದಿಯಲ್ಲಿ ಮಿಂದೆದ್ದ ಭಕ್ತಾದಿಗಳು

ಮಮತಾ ಭಾಷಣಕ್ಕೂ ಜಗ್ಗದ ಮಳೆ

ಮಮತಾ ಭಾಷಣಕ್ಕೂ ಜಗ್ಗದ ಮಳೆ

ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯಲ್ಲಿ ಈಗ ಪಂಚಾಯಿತಿ ಚುನಾವಣೆ ಕಾವೇರಿದೆ. ಸುರಿವ ಮಳೆ ನಡುವೆ ರಾಜಕೀಯ ನಾಯಕರು ತಮ್ಮ ಭಾಷಣ ಮುಂದುವರೆಸಿದ್ದಾರೆ.

ಧೋನಿ ಕಣ್ಣು ಕಪ್ ಮೇಲೆ

ಧೋನಿ ಕಣ್ಣು ಕಪ್ ಮೇಲೆ

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾ ನಾಯಕ ಧೋನಿ

ಕೊಲೆಗಾರ ಅಜ್ಜ

ಕೊಲೆಗಾರ ಅಜ್ಜ

ಭುವನೇಶ್ವರ: ಪತ್ನಿಯನ್ನು ಕೊಂದು 300 ತುಂಡು ಮಾಡಿ ಕಬ್ಬಿಣದ ಟ್ರಂಕ್ ನಲ್ಲಿ ತುಂಬಿದ್ದ ವೃದ್ಧ ವೈದ್ಯ ಪರಿದಾ

ವಾಹ್ ಏನು ಬಣ್ಣ

ವಾಹ್ ಏನು ಬಣ್ಣ

ಚುಂಚೆಯೀನ್: ದಕ್ಷಿಣ ಕೊರಿಯಾದ ವಾಯುಸೇನೆಯ ವೈಮಾನಿಕ ಪ್ರದರ್ಶನ. 1950-53ರ ಕೊರಿಯಾ ಯುದ್ಧದ 63ನೇ ನೆನಪಿನ ವರ್ಷದ ಅಂಗವಾಗಿ ವೈಮಾನಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಲುಟೇರಾಗಳು

ಲುಟೇರಾಗಳು

ಕೋಲ್ಕತ್ತಾ: ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಸೋನಾಕ್ಷಿ ಸಿನ್ಹಾ ಅವರು ಲುಟೆರಾ ಚಿತ್ರದ ಪ್ರಚಾರದಲ್ಲಿ

ಯುವ ದಳ

ಯುವ ದಳ

ಹೈದರಾಬಾದ್: ಏರ್ ಫೋರ್ಸ್ ಅಕಾಡೆಮಿಯಲ್ಲಿ ಪದವಿ ಪಡೆದವರ ಪರೇಡ್ ಸಂದರ್ಭದಲ್ಲಿ ಸಂಭ್ರಮದ ಚಿತ್ರ

ಚೆಲ್ಲಿದ ರಕ್ತ

ಚೆಲ್ಲಿದ ರಕ್ತ

ಶ್ರೀನಗರ: ಹರಿ ಸಿಂಗ್ ಸ್ಟ್ರೀಟ್ ನಲ್ಲಿ ಇಬ್ಬರು ಪೊಲೀಸರನ್ನು ಉಗ್ರರು ಹತ್ಯೆಗೈದ ನಂತರ ರಸ್ತೆಯಲ್ಲಿ ಚೆಲ್ಲಿದ ರಕ್ತವನ್ನು ತೊಳೆಯುತ್ತಿರುವ ಸಿಬ್ಬಂದಿ

ಯುನೆಸ್ಕೋ ಪಟ್ಟಿಗೆ ಕೋಟೆ

ಯುನೆಸ್ಕೋ ಪಟ್ಟಿಗೆ ಕೋಟೆ

ಜೈಪುರ: ಅಂಬೇರ್ ಕೋಟೆ ಸೇರಿದಂತೆ 6 ರಾಜಸ್ಥಾನ ಕೋಟೆಗಳು ಯುನೆಸ್ಕೋದ ವಿಶ್ವ ಪಾರಂಪರಿಕಾ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.

ಹಿಟ್ಟು ಎರಚೋ ಹಬ್ಬ

ಹಿಟ್ಟು ಎರಚೋ ಹಬ್ಬ

ಕೀವ್: ಉಕ್ರೇನ್ನಿನ ಯುವಕರು ತಮ್ಮ ಮೈಮೇಲೆ ಹಿಟ್ಟು ಚೆಲ್ಲಿಕೊಂಡು ನೈಪೆರ್ ನದಿ ಬದಿ ಹೊಸ ಬಗೆ ಹಬ್ಬ ಆಚರಿಸಿದರು. ಸಾಮಾಜಿಕ ಜಾಲ ತಾಣಗಳ ಮೂಲಕ ಗೆಳೆತನ ಬೆಳೆಸಿಕೊಂಡವರು ಒಟ್ಟಾಗಿ ಸೇರಿ ಈ ರೀತಿ ಸಂಭ್ರಮಿಸಿದ್ದಾರೆ.

ಹುಣ್ಣಿಮೆ ಹಬ್ಬ

ಹುಣ್ಣಿಮೆ ಹಬ್ಬ

ಗುವಾಹತಿ ಬಳಿ ಸಾಧುಗಳ ಭಜನೆ ಕೀರ್ತನೆ ಮೇಳ

ಜಲ ಯಾತ್ರೆ

ಜಲ ಯಾತ್ರೆ

ಜಗನ್ನಾಥ ಮಂದಿರದ ಬಳಿ ಆನೆಗಳಿಗೆ ಅಲಂಕಾರ, 136ನೇ ಜಲ ಯಾತ್ರೆ ಸಂಭ್ರಮ

ಕಲಶ ಯಾತ್ರೆ

ಕಲಶ ಯಾತ್ರೆ

ಅಹಮದಾಬಾದ್: ಸಬರಮತಿ ನದಿ ಬಳಿ 136ನೇ ರಥ ಯಾತ್ರೆ ಅಂಗವಾಗಿ ಕಲಶ ಹೊತ್ತು ಸಾಗಿರುವ ಭಕ್ತಾದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+