ಪತ್ನಿಯನ್ನು ಮುನ್ನೂರು ತುಂಡು ಮಾಡಿದ್ದ ವೈದ್ಯನ ಸೆರೆ

ಭುವನೇಶ್ವರ, ಜೂ.23: ತನ್ನನ್ನೇ ನಂಬಿಕೊಂಡು ಮದುವೆಯಾಗಿ ಬಂದಿದ್ದ ಧರ್ಮಪತ್ನಿಯನ್ನೇ ಮುನ್ನೂರು ತುಂಡು ಮಾಡಿ ಕೊಲೆ ಮಾಡಿದ್ದ ಒರಿಸ್ಸಾ ರಾಜಧಾನಿ ಭುವನೇಶ್ವರದ ವೈದ್ಯನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದ ಈ ವೈದ್ಯ ಸೇವೆಯಿಂದ ನಿವೃತ್ತಿ ಹೊಂದಿದ್ದ ಎಂದು ತಿಳಿದು ಬಂದಿದೆ.

ಕೊಲೆ ನಡೆದು ಸುಮಾರು ಎರಡು ವಾರಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಹದಿನೈದು ದಿನಗಳ ಹಿಂದೆ ತನ್ನ ಪತ್ನಿಯನ್ನು ಆರೋಪಿ ನಿವೃತ್ತ ಸೇನಾ ವೈದ್ಯ ತುಂಡರಿಸಿ ಹಾಕಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆಗೆ ಪ್ರಚೋದನೆ ನೀಡಿದ ಸ್ಪಷ್ಟ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಹೊರ ಬೀಳಬೇಕಿದೆ ಎಂದಿದಾರೆ.

ಇತ್ತೀಚೆಗೆ ನಿವೃತ್ತ ಸೇನಾಧಿಕಾರಿಯ ಮನೆಗೆ ಸಂಬಂಧಿಕರು ಬಂದಿದ್ದ ವೇಳೆ ಪತ್ನಿಯ ಕುರಿತು ವಿಚಾರಿಸಿದ್ದಾರೆ. ಅಷ್ಟರಲ್ಲೇ ಕಳ್ಳನಂತೆ ನಟಿಸಿದ ನಿವೃತ್ತ ವೈದ್ಯ, ಏನೇನೋ ಕಥೆ ಕಟ್ಟಿ ಸುಳ್ಳು ಹೇಳಿದ್ದಾನೆ

ಯಾವತ್ತೂ ಖಡಕ್ಕಾಗಿರುವ ಈ ವೈದ್ಯ ಇದೇಕೆ ಇವತ್ತು ಕೊಲೆಗಾರನಂತೆ ನಾಟಕವಾಡುತ್ತಿದ್ದಾನೆಂದು ಸಂಶಯಿಸಿದ ಸಂಬಂಧಿಕರು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಹಾಗೂ ಪತಿಯ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

Odisha doctor hacks wife's body into pieces, arrested

ಈ ದೂರಿನ ಆಧಾರದ ಮೇಲೆ ಒರಿಸ್ಸಾ ಪೊಲೀಸರು, ಶುಕ್ರವಾರ ರಾತ್ರಿ ನಿವೃತ್ತ ಸೇನಾವೈದ್ಯನ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮನೆ ಪೂರ್ತಿ ತಡಕಾಡಿದ ಪೊಲೀಸರಿಗೆ ಕೆಟ್ಟ ವಾಸನೆ ಬಂದಿದೆ. ಅದರ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ಕೋಣೆಯೊಂದರ ಮೂಲೆಯಲ್ಲಿ ಕಬ್ಬಿಣದ ಪೆಟ್ಟಿಗೆಯೊಂದು ಕಂಡಿದೆ.[ಚಿತ್ರದಲ್ಲಿ ನೋಡಿ]

ಹತ್ತಿರ ಹೋದಂತೆ ಕೊಳೆತ ಶವದ ವಾಸನೆ ಮುಖಕ್ಕೆ ಬಡಿದಿದೆ. ಜತೆಗೆ ಪಕ್ಕದಲ್ಲೇ ಶಸ್ತ್ರ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಸಲಕರಣೆಗಳು ಪತ್ತೆಯಾಗಿವೆ. ತಕ್ಷಣಕ್ಕೆ ಹೆಚ್ಚಿಗೆ ಆಲೋಚನೆ ಮಾಡಲು ಹೋಗದ ಪೊಲೀಸರು, ಆ ಕಬ್ಬಿಣದ ಪೆಟ್ಟಿಗೆಯನ್ನು ತೆಗೆದು ನೋಡಿದ್ದಾರೆ.

ಅದರೊಳಗೆ ಮುನ್ನೂರು ತುಂಡಾಗಿ ಬಿದ್ದಿದ್ದ ಪತ್ನಿಯ ಶವ ಪತ್ತೆಯಾಗಿದೆ. ಜತೆಯಲ್ಲೇ ಶಸ್ತ್ರ ಚಿಕಿತ್ಸೆಗೆ ಬಳಸಲಾಗುವ ಬ್ಲೇಡುಗಳು ಪತ್ತೆಯಾಗಿದ್ದರಿಂದ ಅದನ್ನೇ ಬಳಸಿ ಪತ್ನಿಯ ಕೊಲೆ ಮಾಡಿರಬಹುದೆಂದು ಸಂಶಯಿಸಿದ ಒರಿಸ್ಸಾ ಪೊಲೀಸರು, ತಡಮಾಡದೆ ಎಪ್ಪತ್ತು ವರ್ಷದ ನಿವೃತ್ತ ಸೇನಾವೈದ್ಯನನ್ನು ಕೊಲೆ ಆರೋಪದಲ್ಲಿ ಬಂಧಿಸಿ ವಿಚಾರಣೆಗೆ ಮುಂದಾಗಿದ್ದಾರೆ.

ಪತ್ನಿಯೊಂದಿಗೆ ವೈಮನಸ್ಸು : ಇದೇ ವೇಳೆ ಹೇಳಿಕೆ ನೀಡಿರುವ ಸಂಬಂಧಿಕರು, ಪತ್ನಿ ಉಷಾಶ್ರೀ ಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಎಪ್ಪತ್ತೊಂದು ವರ್ಷದ ನಿವೃತ್ತ ಕರ್ನಲ್ ಪತಿ ಸೋಮನಾಥ್ ಪರೀದ, ಇತ್ತೀಚೆಗೆ ಸಾಂಸಾರಿಕ ಕಾರಣಗಳಿಂದ ಪತ್ನಿಯೊಂದಿಗೆ ವೈಮನಸ್ಸು ಬೆಳೆಸಿಕೊಂಡಿದ್ದರು.

ಗಂಡ ಹೆಂಡತಿ ಗಲಾಟೆ ಉಂಡು ಮಲಗುವ ತನಕ ಎಂಬುದನ್ನು ಗಂಭೀರವಾಗಿ ಪರಿಗಣಿಸದ ಈ ನಿವೃತ್ತ ವೈದ್ಯ, ತನ್ನ ತಾಳ್ಮೆ ಕಳೆದುಕೊಂಡು ಕೊಲೆ ಮಾಡುವಷ್ಟು ಹಂತ ತಲುಪಿದ್ದು ಏಕೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಪರಿದಾ ಅವರ ಪುತ್ರ ಹಾಗೂ ಪುತ್ರಿ ವಿದೇಶದಲ್ಲಿ ನೆಲೆಸಿದ್ದಾರೆ. ಕೊಲೆ ವಿಷಯ ಯಾರಿಗೂ ತಿಳಿಯಬಾರದು ಎಂದು ಎರಡು ಕಬ್ಬಿಣದ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಕವರ್ ಗಳಲ್ಲಿ ದೇಹದ ಭಾಗಗಳನ್ನು ಮುಚ್ಚಿಟ್ಟಿದ್ದೆ ಎಂದು ವೈದ್ಯ ತಪ್ಪೊಪ್ಪಿಗೆ ನೀಡಿದ್ದಾನೆ.

ಹದಿನೈದು ದಿನದ ಹಿಂದೆ ನಡೆದ ಕೊಲೆಯ ಮೃತದೇಹ ಮನೆಯಲ್ಲೇ ಇದ್ದು ವಾಸನೆ ಬರುತ್ತಿದ್ದ ವಿಚಾರ ಥಟ್ಟನೆ ಪೊಲೀಸರ ಗಮನಕ್ಕೆ ಬಂದಿದೆ ಆದರೆ, ಈ ಮುಂಚೆ ಮನೆಗೆ ಭೇಟಿ ನೀಡಿದ ಸಂಬಂಧಿಕರಿಗೆ ವಾಸನೆ ಬಂದಿಲ್ಲ ಏಕೆ? ಕೊಲೆ ಮಾಡಿ ಆ ಸಲಕರಣೆಗಳನ್ನು ಕೊಲೆ ಮಾಡಿದ ಸ್ಥಳದಲ್ಲೇ ಉಳಿಸಿದ್ದು ಏಕೆ? ಮುಂತಾದ ಪ್ರಶ್ನೆಗಳ ನಡುವೆ ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+