ಐಐಟಿ ಪ್ರವೇಶಿಸಿದ ಬಿಹಾರದ ಸಾಧಕರು

ಇದರ ಜೊತೆಗೆ ಬಿಹಾರದಲ್ಲಿ ಬಡತನ, ಹಿಂದುಳಿದ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಈ ಬಾರಿ ಶೈಕ್ಷಣಿಕವಾಗಿ ಉನ್ನ್ತತ ಮಟ್ಟಕ್ಕೇರಿದ್ದಾರೆ.
1,50,000 ಅಭ್ಯರ್ಥಿಗಳು ಹಾಜರಾಗಿದ್ದ ಐಐಟಿ ಜೆಇಇ ಪರೀಕ್ಷೆಯಲ್ಲಿ ಸತ್ಯಂ ಕುಮಾರ್ ಅಸಾಮಾನ್ಯ ಸಾಧನೆ ಬರೆದಿದ್ದಾನೆ.ಕಳೆದ ವರ್ಷ ಕ್ಲಾಸ್ 12 ಮುಗಿಸಿದ ಸತ್ಯಂ ಅಖಿಲ ಭಾರತ ಮಟ್ಟದಲ್ಲಿ 679ನೇ ಸ್ಥಾನ ಪಡೆದಿದ್ದ.
ರೈತನ ಮಗನ ಸಾಧನೆ: "ಈ ವಯಸ್ಸಿನಲ್ಲಿ ಆತ ಮಾಡಿರುವ ವಿಶೇಷ ಸಾಧನೆ ಕಂಡು ನಮಗೆ ತುಂಬ ಹೆಮ್ಮೆ ಎನಿಸುತ್ತದೆ" ಎಂದು ಸತ್ಯಂ ತಂದೆ ರೈತ ಸಿಧ್ನಾತ್ ಸಿಂಗ್ ಹೇಳುತ್ತಾರೆ.
ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಕಿರಿಯ ವಯಸ್ಸಿನವನಾಗಿ ಇಂತಹ ಸಾಧನೆ ಮಾಡಿರುವವರಲ್ಲಿ ಬಿಹಾರದಿಂದ ಸತ್ಯಂ ಮೊದಲಿಗನಾಗಿದ್ದಾನೆ. ಈ ಮುಂಚೆ 2010ರಲ್ಲಿ 14 ವರ್ಷದ ದೆಹಲಿ ಮೂಲದ ಸಹಾಲ್ ಕೌಶಿಕ್ ಈ ಸಾಧನೆ ಮಾಡಿದ್ದರು.
ಭೋಜ್ ಪುರ ಜಿಲ್ಲೆಯ ಬಖೋರಪುರ ಗ್ರಾಮದ ವಾಸಿಯಾಗಿರುವ ಸತ್ಯಂ ಕಳೆದ ವರ್ಷ ಹನ್ನೆರಡೂವರೆ ವಯಸ್ಸಿನಲ್ಲಿ ಐಐಟಿ ಪ್ರವೇಶ ಪರೀಕ್ಷೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಿಂದ (ಸಿಬಿಎಸ್ಇ) ವಿಶೇಷ ಅನುಮತಿ ಪಡೆದಿದ್ದ ಸತ್ಯಂ ಅಖಿಲ ಭಾರತ ಮಟ್ಟದಲ್ಲಿ 8,137ನೇ ಸ್ಥಾನ ಗಳಿಸಿದರು.
ಬಿಹಾರದ ಸಾಧಕರು: ಬಿಹಾರದ ಸೂಪರ್ 30 ಉಚಿತ ಕೋಚಿಂಗ್ ಸೆಂಟರ್ ಗೆ ಸೇರಿದ 30 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಐಐಟಿ-ಜೆಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಉತ್ತರ ಪ್ರದೇಶದ ಕೂಲಿ ಕಾರ್ಮಿಕ ರಾಮ್ ಪ್ಯಾರೇ ಪ್ರತಾಪ್ ಪುತ್ರ ಭಾನು ಪ್ರತಾಪ್ ತೇರ್ಗಡೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರ ತಾಯಿ ಗೀತಾದೇವಿ ಅವರು ಉಚಿತ ಕೋಚಿಂಗ್ ಕ್ಲಾಸ್ ನಡೆಸುವ ಅನಂದ್ ಕುಮಾರ್ ಅವರ ಮಾರ್ಗದರ್ಶನವೇ ಕಾರಣ ಎಂದಿದ್ದಾರೆ.
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಭೂಮಿ ಕಳೆದುಕೊಂಡ ರೈತ ಪಂಕಜ್ ಕುಮಾರ್ ಅವರ ಪುತ್ರ ಪ್ರಣವ್ ಕುಮಾರ್ ಓದಿದ್ದೆಲ್ಲ ಸರ್ಕಾರಿ ಶಾಲೆಯಲ್ಲಿ, ಈಗ ಐಐಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾನೆ, ಆನಂದ್ ಕುಮಾರ್ ಅವರು ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದರು ಎಂದಿದ್ದಾನೆ.
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಟೆಲಿಕಾಂ ಇಲಾಖೆಯಲ್ಲಿ ಲೈನ್ ಮೆನ್ ಆಗಿದ್ದ ಅಪ್ಪನನ್ನು ಕಳೆದುಕೊಂಡ ದುಃಖದಲ್ಲೆ ಪರೀಕ್ಷೆ ಬರೆದ ಅಂಕಿತ್ ಕುಮಾರ್ ಅವರು ಉದ್ಯೋಗವಿಲ್ಲದ ತಾಯಿ, ರಸ್ತೆ ಅಪಘಾತದಲ್ಲಿ ಅಪ್ಪ ಸಾವನ್ನಪ್ಪಿದ ನೋವಿನ ನಡುವೆ ಐಐಟಿ ಪರೀಕ್ಷೆಯಲ್ಲಿ ಗೆದ್ದಿದ್ದಾನೆ.
ಕಾನ್ಪುರದಲ್ಲಿ ಮ್ಯಾಗಜೀನ್ ವ್ಯಾಪಾರಿಯೊಬ್ಬರ ಮಗಳು ಶಿವಾಂಗಿ ಗುಪ್ತ ಅವರು ಅಪ್ಪನ ಕಷ್ಟದ ಮುಂದೆ ನಾನು ಕಷ್ಟಪಟ್ಟಿದ್ದು ಏನು ಇಲ ಎನ್ನುತ್ತಾರೆ.ಮೆಕ್ಯಾನಿಕ್ ಘನ್ ಶ್ಯಾಮ್ ಅವರ ಪುತ್ರ ಅಭಿಶೇಕ್ ಕುಮಾರ್ ಅವರು ಎಲೆಕ್ಟ್ರಿಕಲ್ ಇಂಜಿನಿಯರ್ ಆಗುವ ಕನಸು ಹೊತ್ತು ಐಐಟಿ- ಜೆಇಇನಲ್ಲಿ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಎಫ್ಐಐಟಿ ಜೆಇಇ ವಿದ್ಯಾರ್ಥಿ ಅನಂತ್ ಕಾಮತ್ ರಾಜ್ಯದ ಜೆಇಇ ಮೊದಲ ಟಾಪರ್ ಆಗಿದ್ದು,99ನೇ ಸ್ಥಾನಪಡೆದಿದ್ದಾರೆ.


Click it and Unblock the Notifications
