ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನರಂಜಿಸುವ ನರ್ತನದ ಮನಮೋಹಕ ಚಿತ್ರಗಳು

By Prasad
|
Google Oneindia Kannada News

ಜೂನ್ 21ರಂದು ಬೆಂಗಳೂರಿನ ಫ್ರಾಂಚೈಸ್ ಅಲೈಯನ್ಸ್‌ನಲ್ಲಿ ವಿಶ್ವ ಸಂಗೀತ ದಿನಾಚರಣೆ ಮತ್ತು ಭಾರತೀಯ ಸಿನೆಮಾ 100 ವರ್ಷ ಪೂರೈಸಿದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಸಂಸ್ಥೆ ಮತ್ತು ಫ್ರಾಂಚೈಸ್ ಅಲೈಯನ್ಸ್ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಸಂಗೀತವನ್ನು ವಿಶ್ವದಾದ್ಯಂತ ಜನರು ಪ್ರೀತಿಸುತ್ತಿದ್ದು, ಸಂಗೀತವು ವಿವಿಧ ದೇಶಗಳಲ್ಲಿ ಅದರದೇ ಆದ ಪ್ರಕಾರಗಳನ್ನು ಹೊಂದಿದ್ದು, ಜಾತಿ, ಮತ ಭೇದವಿಲ್ಲದೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ದೈವೀಸಾಮರ್ಥ್ಯ ಸಂಗೀತಕ್ಕಿರುತ್ತದೆ. ಈ ಒಂದು ಅನುಭವನವನ್ನು ಶುಕ್ರವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಅನುಭವಿಸಿದರು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ದೇಶದ ನಾನಾ ಭಾಷೆಗಳ ಅಂದರೆ ಕನ್ನಡ, ಹಿಂದಿ, ತಮಿಳು, ಮರಾಠಿ, ಮಲಯಾಳಂ, ಬೆಂಗಾಳಿ ಭಾಷೆಗಳ ಚಲನಚಿತ್ರ ಗೀತೆಗಳಿಗೆ ಅನುರೂಪವಾಗಿ ರೂಪಿತವಾದ ನೃತ್ಯ ಸಂಯೋಜನೆಗಳು ನೋಡುಗರನ್ನು ಬೆರಗುಗೊಳಿಸಿದವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಕಥಕ್, ಕೂಚುಪುಡಿ ಹಾಗೂ ಜಾನಪದ ಶೈಲಿಯ ನೃತ್ಯಗಳು ಮನಸೂರೆಗೊಂಡವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಸಣ್ಣ ನೀನಾದದಿಂದ ಹೊರಟ ತಂತಿಗಳ ಸ್ವರದಿಂದ ಹಿಡಿದು ಮೈನವಿರೇಳಿಸುವ, ನರನಾಡಿಗಳಲ್ಲಿ ರೋಚಕ ಅನುಭವವನ್ನೀಯುವ ಶಬ್ದಗಳು ಪ್ರೇಕ್ಷಕರನ್ನು ಭಾವತನ್ಮಯಗೊಳಿಸಿದವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಬೆಂಗಳೂರಿನ ಅಂತಾರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನಸೂರೆಗೊಂಡ ಕಥಕ್, ಕೂಚುಪುಡಿ ಹಾಗೂ ಜಾನಪದ ಶೈಲಿಯ ನೃತ್ಯಗಳು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಕನ್ನಡ, ಹಿಂದಿ, ತಮಿಳು, ಮರಾಠಿ, ಮಲಯಾಳಂ, ಬೆಂಗಾಳಿ ಭಾಷೆಗಳ ಚಲನಚಿತ್ರ ಗೀತೆಗಳಿಗೆ ಅನುರೂಪವಾಗಿ ರೂಪಿತವಾದ ನೃತ್ಯ ಸಂಯೋಜನೆಗಳು ನೋಡುಗರನ್ನು ಬೆರಗುಗೊಳಿಸಿದವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಕಥಕ್, ಕೂಚುಪುಡಿ ಹಾಗೂ ಜಾನಪದ ಶೈಲಿಯ ನೃತ್ಯಗಳು ಮನಸೂರೆಗೊಂಡವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಭಾರತೀಯ ಚಲನಚಿತ್ರ 100 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಈ ನೃತ್ಯ ಕಾರ್ಯಕ್ರಮ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಅಂತಾರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಸಂಸ್ಥೆ ಮತ್ತು ಫ್ರಾಂಚೈಸ್ ಅಲೈಯನ್ಸ್ ಸಂಸ್ಥೆಗಳು ಜಂಟಿಯಾಗಿ ನೃತ್ಯ ಕಾರ್ಯಕ್ರಮ ಆಯೋಜಿಸಿದ್ದವು.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಜಾತಿ, ಮತ ಭೇದವಿಲ್ಲದೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವ ದೈವೀಸಾಮರ್ಥ್ಯ ಸಂಗೀತಕ್ಕಿದೆ.

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಮನರಂಜಿಸುವ ನರ್ತನದ ಮನಮೋಹಕ ಚಿತ್ರ

ಸಣ್ಣ ನೀನಾದದಿಂದ ಹೊರಟ ತಂತಿಗಳ ಸ್ವರದಿಂದ ಹಿಡಿದು ಮೈನವಿರೇಳಿಸುವ, ನರನಾಡಿಗಳಲ್ಲಿ ರೋಚಕ ಅನುಭವವನ್ನೀಯುವ ಶಬ್ದಗಳು ಪ್ರೇಕ್ಷಕರನ್ನು ಭಾವತನ್ಮಯಗೊಳಿಸಿದವು.


ಈ ಸಂದರ್ಭದಲ್ಲಿ ಸಿನಿಮಾ ವಿಮರ್ಶಕ ವಿ.ಎ.ಕೆ.ರಂಗರಾವ್ ರವರು ಮಾತನಾಡಿ ಸಿನಿಮಾ, ಸಂಗೀತ ಮತ್ತು ನೃತ್ಯಗಳು ಹೇಗೆ ಜನಮಾನಸದಲ್ಲಿ ಹಾಸುಹೊಕ್ಕಾಗಿವೆ ಎಂಬ ಕುರಿತು ಮಾತನಾಡಿದರು. ಭಾವ, ರಸ, ತಾಳ ಇವುಗಳ ಮಿಲನದೊಂದಿಗೆ ಏರ್ಪಡುವ ನಾಟ್ಯಗಳ ರೀತಿಯಲ್ಲಿಯೇ ಸಿನಿಮಾ ಹಾಡುಗಳಿಗೆ ಮಾಡುವಂತಹ ನೃತ್ಯಗಳು ಸಹ ಇರುತ್ತವೆಯಾದ್ದರಿಂದ ಸಿನಿಮಾ ನೃತ್ಯಗಳನ್ನು ಟೀಕಿಸುವ ಮನೋಭಾವವನ್ನು ಯಾರೂ ಹೊಂದಿರಬಾರದೆಂದು ಕಿವಿಮಾತು ಹೇಳಿದರು.

ಅಂತಾರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುವುದು ಸಹ ಬಹುದೊಡ್ಡ ಕಲೆ ಎಂದು ಶ್ಲಾಘಿಸಿದರು.

English summary
Hundred years of Indian Cinema was celebrated on World Music Day on 21st June, 2013 in Bangalore at Alliance Franchise through dance programme. Dances composed for Kannada, Hindi, Tamil, Marathi, Malayalam, Bengal were presented by various artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X