ಬ್ಯಾಂಕಿನಿಂದ ಉಚಿತ ಎಸ್ಎಂಎಸ್ ಇನ್ನಿಲ್ಲ

ಎಚ್ ಡಿಎಫ್ ಸಿ, ಏಕ್ಸಿಸ್, ಐಸಿಐಸಿಐ ಬ್ಯಾಂಕುಗಳು ಸೇರಿದಂತೆ ಇನ್ನಿತರ ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳು ಉಚಿತ ಎಸ್ ಎಂಎಸ್ ಸೇವೆಯನ್ನು ನಿಲ್ಲಿಸಲಿವೆ. ಇನ್ಮುಂದೆ ಬ್ಯಾಂಕ್ ಅಲರ್ಟ್ ಬೇಕಾದರೆ ಅದಷ್ಟು ಇಂತಿಷ್ಟು ಮೊತ್ತವನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ.
ಎಸ್ ಎಂಎಸ್ ಅಲರ್ಟ್ ಬಯಸುವ ಉಳಿತಾಯ ಖಾತೆ ಗ್ರಾಹಕರಿಗೆ ವಾರ್ಷಿಕ 60 ರು ಹಾಗೂ ಚಾಲ್ತಿ ಖಾತೆ ಗ್ರಾಹಕರಿಗೆ 100 ರು ವೆಚ್ಚವನ್ನು ಬ್ಯಾಂಕುಗಳು ನಿಗದಿಪಡಿಸಿವೆ.
ಟೆಲಿಕಾಂ ಸಂಸ್ಥೆ ಹಾಗೂ ಸೇವಾದಾರರ ಖರ್ಚು ವೆಚ್ಚದಲ್ಲಿ ಭಾರಿ ಬದಲಾವಣೆಯಾಗಿದೆ. ಹೀಗಾಗಿ ಐಸಿಐಸಿಐ ಬ್ಯಾಂಕ್ ವಿಧಿ ಇಲ್ಲದೆ ತನ್ನ ಗ್ರಾಹಕರಿಗೆ ಎಸ್ ಎಂಎಸ್ ಅಲರ್ಟ್ ನೀಡಲು ಚಾರ್ಚ್ ಮಾಡಬೇಕಾಗಿದೆ ಎಂದು ಐಸಿಐಸಿಐ ಬ್ಯಾಂಕ್ ವಕ್ತಾರರು ಹೇಳಿದ್ದಾರೆ.
ವ್ಯಾಲ್ಯೂ ಆಡೆಡ್ ಸೇವೆಯಂತೆ ಉಚಿತವಾಗಿದ್ದ ಎಸ್ ಎಂಎಸ್ ಅಲರ್ಟ್ ತ್ವರಿತವಾಗಿ ಗ್ರಾಹಕರಿಗೆ ಬ್ಯಾಂಕ್ ಸಂದೇಶವನ್ನು ಮುಟ್ಟಿಸುತ್ತಿತ್ತು. ಆದರೆ, ಇದು ಮೂಲಭೂತ ಸೇವೆಯಾಗಿದ್ದು ಇದಕ್ಕೂ ಚಾರ್ಚ್ ಮಾಡಿದರೆ ತುಂಬಾ ಕಷ್ಟ ಎಂದು ಗ್ರಾಹಕರು ಗೋಳು ತೋಡಿಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇನ್ನೂ ಕೂಡಾ ಎಸ್ ಎಂಎಸ್ ಅಲರ್ಟ್ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೂಡಾ ಇದೇ ಹಾದಿಯಲ್ಲಿವೆ.


Click it and Unblock the Notifications
