ಬೆಂಗಳೂರು ಪರಿಸರ ಉಳಿಸಲು ಬಿಬಿಎಂಪಿ ಯೋಜನೆ!

tree
ಬೆಂಗಳೂರು, ಜೂ.22: ಮಹಾನಗರ ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಹಚ್ಚ ಹಸಿರಿನ ವಾತಾವರಣವನ್ನು ರಕ್ಷಿಸಲು ಬಿಬಿಎಂಪಿ ಮುಂದಾಗಿದೆ. ಮಹಾನಗರ ಪಾಲಿಕೆ ಅರಣ್ಯ ವಿಭಾಗ ನಗರದ ವ್ಯಾಪ್ತಿಯಲ್ಲಿ ಸುಮಾರು ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಜೂನ್ ಅಂತ್ಯದ ವೇಳೆಗೆ ಚಾಲನೆ ನೀಡಲಿದೆ.

ಜುಲೈ ಮೊದಲ ವಾರದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಿಡ ನೆಡುವ ಕಾರ್ಯಕ್ರಮ ಪ್ರಾರಂಭಿಸಲಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯಸ್ಥ ಬ್ರಿಜೇಶ್ ಕುಮಾರ್ ಹೇಳಿದ್ದಾರೆ. ಈ ವರ್ಷದಲ್ಲಿ 1.6 ಲಕ್ಷ ಸಸಿಗಳನ್ನು ನಗರ ವ್ಯಾಪ್ತಿಯಲ್ಲಿ ನೆಡಲು ಯೋಜನೆ ರೂಪಿಸಲಾಗಿದೆ.

ಬಿಬಿಎಂಪಿಯ ವ್ಯಾಪ್ತಿಯ ಪ್ರದೇಶಗಳನ್ನು ಎಂಟು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲೂ ಹಸಿರೀಕರಣ ಯೋಜನೆ ಜಾರಿಗೆ ಬರಲಿದೆ. ನಗರದ ಸುತ್ತಮತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ ಎಂದು ಕುಮಾರ್ ಹೇಳಿದರು.

ಎಲ್ಲೆಲ್ಲಿ ಗಿಡಗಳು : ಮೊದಲ ಹಂತದಲ್ಲಿ ಕೆಲವು ಉದ್ಯಾನವನಗಳು. ಆಟದ ಮೈದಾನದ ಸುತ್ತಮುತ್ತಲ ಪ್ರದೇಶಗಳು, ಕೆರೆಗಳ ಸುತ್ತಲಿನ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಹೊಸ ರಸ್ತೆಗಳ ಅಕ್ಕ-ಪಕ್ಕದಲ್ಲಿಯೂ ಗಿಡಗಳನ್ನು ನೆಡುವ ಯೋಜನೆ ಸಿದ್ದವಾಗಿದೆ.

ಯಾವ ಗಿಡಗಳು : ಸಂಪಿಗೆ, ವಿವಿಧ ಅಲಂಕಾರಿಕ ಗಿಡಗಳು ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ರಸ್ತೆ ಮತ್ತು ಆಟದ ಮೈದಾನದ ಪಕ್ಕದಲ್ಲಿ ನಡೆಲು ತೀರ್ಮಾನಿಸಲಾಗಿದೆ. ಶಾಲೆಗಳ ಆವರಣದಲ್ಲಿ ನೆಡಲು ಹಣ್ಣಿನ ಗಿಡಗಳನ್ನು ವಿತರಿಸಲು ಬಿಬಿಎಂಪಿ ಯೋಜನೆ ಸಿದ್ಧಪಡಿಸಿದೆ.

ವೆಚ್ಚವೆಷ್ಟು : ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಈ ಬಾರಿಯ ಬಜೆಟ್ ನಲ್ಲಿ 16 ಕೋಟಿ ರೂ. ಅನುದಾನ ನೀಡಲಾಗಿದೆ. ಹಣವನ್ನು ಗಿಡಗಳನ್ನು ನೆಡಲು, ಮರಗಳ ಸಂರಕ್ಷಣೆ ಮುಂತಾದ ಕಾರ್ಯಗಳಿಗೆ ಬಳಸಲು ಅರಣು ವಿಭಾಗ ಸಜ್ಜಾಗಿದೆ. (ಬೆಳಗಾವಿಯಲ್ಲಿ ಹಸಿರೀಕರಣ)

ಬಿಬಿಎಂಪಿಯ ಪ್ರಯತ್ನದಿಂದ ನಗರವ ವ್ಯಾಪ್ತಿಯಲ್ಲಿ ಕಡಿಮೆಯಾಗುತ್ತಿರುವ ಮರಗಳು ಮತ್ತಷ್ಟು ಹೆಚ್ಚಾಗಲಿ. ಉದ್ಯಾನ ನಗರಿ ಎಂಬ ಹೆಸರು ಬೆಂಗಳೂರಿನಗೆ ಶಾಶ್ವತವಾಗಿ ಉಳಿಯಲಿ ಎಂಬುದು ಜನರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+