ಬಾಡಿಗೆ ಮಗು: ಶಾರುಖ್ ಖಾನ್ ವಿರುದ್ಧ ಫತ್ವಾ

Fatwa against Shah Rukh Khan for surrogate baby by Markazi Darul Ifta Dargah Al Hazrat
ಮುಂಬೈ, ಜೂನ್ 19: ಮತ್ತೊಮ್ಮೆ ಅಪ್ಪನಾಗಲು ಹೊರಟಿರುವ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ.

ಈಗಾಗಲೇ ಇಬ್ಬರು ಮಕ್ಕಳಿದ್ದರೂ ಮೂರನೆಯ ಮಗುವಿಗೆ ಹಂಬಲಿಸಿದ ತಾರಾ ದಂಪತಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ಎಂಬ ಸುದ್ದಿ ಹೊರ ಜಗತ್ತಿಗೆ ತಿಳಿದಿದ್ದೇ ತಡ ದಂಪತಿ ಒಂದರಮೇಲೊಂದು ತೊಂದರೆ ಅನುಭವಿಸುವಂತಾಗಿದೆ.

ಮೂರನೇ ಮಗು ಗಂಡು ಎಂದು ತಿಳಿದುಬರುತ್ತಿದ್ದಂತೆ ಗರ್ಭದಲ್ಲಿನ ಮಗುವಿನ ಲಿಂಗ ನಿರ್ಧಾರ ಮಹಾಪರಾಧ ಎಂದು ಶಾರುಖ್ ದಂಪತಿ ವಿರುದ್ಧ ಕಿಡಿಕಾರಲಾಯಿತು. 2009ರಲ್ಲಿ ಪ್ರವಾದಿ ಮೊಹಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಂ ಪ್ರವಾದಿಗಳು ಶಾರುಖ್ ವಿರುದ್ಧ ಗರಂ ಆಗಿದ್ದರು.

ಇದೀಗ ಮರ್ಕಾಜಿ ದಾರುಲ್‌ ಇಫ್ತಾ ದರ್ಗಾ ಅಲ್ ಹಜರತ್ ಫ‌ತ್ವಾ ಹೊರಡಿಸಿದೆ. ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದು ಮುಸ್ಲಿಂ ಷರಿಯತ್‌ ಕಾನೂನಿಗೆ ವಿರುದ್ಧವಾಗಿದೆ ಎಂದು ಫ‌ತ್ವಾದಲ್ಲಿ ಅಭಿಪ್ರಾಯಪಡಲಾಗಿದೆ.

ಜನನ ಪೂರ್ವದಲ್ಲೇ ಲಿಂಗ ತಿಳಿಯುವುದು ಸಹ ಅಪರಾಧ ಎಂದು ಫತ್ವಾದಲ್ಲಿ ಹೇಳಲಾಗಿದೆ. ಹಾಗೆಯೇ, ಬಾಡಿಗೆ ತಾಯಿಯ ವಿರುದ್ಧವೂ ಫತ್ವಾ ಹೊರಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+