ಚಿತ್ರ: ನಡುರಸ್ತೆಯಲ್ಲಿ ಸ್ತನ್ಯಪಾನ, ವಿಶಿಷ್ಟ ಪ್ರತಿಭಟನೆ

ಕೊಪೆನ್ ಹೇಗನ್, ಜೂ.18: ಸ್ತನಪಾನ ಬಗ್ಗೆ ಜಾಗೃತಿ ಮೂಡಿಸಲು ನೂರಾರು ತಾಯಂದಿರು ನಡುರಸ್ತೆಯಲ್ಲಿ ಕುಳಿತು ತಮ್ಮ ಮಕ್ಕಳಿಗೆ ಮೊಲೆಯುಣಿಸಿದರು. ಸೋಮವಾರ ಇಲ್ಲಿನ ಕೆಫೆಯೊಂದರಲ್ಲಿ ತಾಯಿಯೊಬ್ಬರು ತನ್ನ ಮಗುವಿಗೆ ಮೊಲೆಯುಣಿಸಲು ಮುಂದಾದಾಗ ಕೆಫೆಯಲ್ಲಿದ್ದ ಕೆಲ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಈ ರೀತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಎನ್ನಿಸ್ಕಿಲ್ಲೆನ್: ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಇನ್ನೂ ಹತ್ತಿರ ಇನ್ನೂ ಹತ್ತಿರ ಎಂದೇಕೆ ಹೇಳುತ್ತಿದ್ದಾರೆ...ಏರ್ ಇಂಡಿಯಾದ ಕನಸಿನ ಹಕ್ಕಿ ಬೋಯಿಂಗ್ 787 ಡ್ರೀಮ್ ಲೈನರ್ ಹಾರಾಟ ನೋಡಲು ಏನಿತು ಸುಂದರ..

ತೆಹರಾನ್ ನಲ್ಲಿ ಹೊಸ ಪ್ರಧಾನಿ ಹಸನ್ ರೌಹಾನಿ ಮುಂದೆ ಹಿಡಿದಿದ್ದ ಮೈಕುಗಳ ಸಂಖ್ಯೆ ಎಷ್ಟು? ವಾಲ್ ಡಿಸ್ನಿ ಕಲೆಕ್ಷನ್ ಮುಂಬೈನಲ್ಲಿ ಬಂದಾಗ, ಮಳೆ ಕಾರಣ ವಿಮಾನ ಹಾರದೆ ನಿಂತಾಗ, ಪ್ರತಿಭಟನೆ, ನೋವು ಹತಾಶೆಯ ನಡುವೆ ಸಿಲುಕಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬೈಕು ಏರಿದಾಗ ಎಲ್ಲವೂ ಇಂದಿನ ಚಿತ್ರಗಳ ಸುರಳಿಯಲ್ಲಿದೆ.. ತಪ್ಪದೇ ಸುರಳಿ ಸರಿಸಿ ನೋಡಿ..

ಕೊಪೆನ್ ಹೇಗನ್ ತಾಯಂದಿರು

ಕೊಪೆನ್ ಹೇಗನ್ ತಾಯಂದಿರು

ಕೊಪೆನ್ ಹೇಗನ್: ಇಲ್ಲಿನ ಕೆಫೆಯೊಂದರಲ್ಲಿ ತಾಯಿಯೊಬ್ಬರು ತನ್ನ ಮಗುವಿಗೆ ಮೊಲೆಯುಣಿಸಲು ಮುಂದಾದಾಗ ಕೆಫೆಯಲ್ಲಿದ್ದ ಕೆಲ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಖಂಡಿಸಿ ಈ ರೀತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಡೇವಿಡ್- ಏಂಜೆಲಾ

ಡೇವಿಡ್- ಏಂಜೆಲಾ

ಉತ್ತರ ಐರ್ಲೆಂಡ್ : ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಜರ್ಮನಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರನ್ನು ಲಾಫ್ ಎರ್ನೆ ಗಾಲ್ಫ್ ರೆಸಾರ್ಟ್ ನಲ್ಲಿ ನಡೆದಿರುವ ಜಿ-8 ಸಮೀಟ್ ಗೆ ಸ್ವಾಗತಿಸಿದ್ದು ಹೀಗೆ

ಏರ್ ಇಂಡಿಯಾ ಡ್ರೀಮ್ ಲೈನರ್

ಏರ್ ಇಂಡಿಯಾ ಡ್ರೀಮ್ ಲೈನರ್

ಲೆ ಬೊರ್ಜೆಟ್: ಏರ್ ಇಂಡಿಯಾ 787 ಡ್ರೀಮ್ ಲೈನರ್ 50ನೇ ಪ್ಯಾರೀಸ್ ಏರ್ ಶೋ ನಲ್ಲಿ ಪಾಲ್ಗೊಂಡು ಹಾರಾಟ ನಡೆಸಿದೆ.

ಅಧ್ಯಕ್ಷ ಹಸನ್ ರೊಹಾನಿ

ಅಧ್ಯಕ್ಷ ಹಸನ್ ರೊಹಾನಿ

ತೆಹ್ರಾನ್: ಇರಾನಿನ ನೂತನ ಅಧ್ಯಕ್ಷ ಹಸನ್ ರೊಹಾನಿ ಅವರು ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳತ್ತ ಕೈ ಬೀಸಿದ್ದಾರೆ. ಅವರ ಮುಂದೆ ಕಂಡು ಬಂದ ವಿವಿಧ ಮಾಧ್ಯಮಗಳ ಮೈಕುಗಳು

ಮುಂಬೈನಲ್ಲಿ ಡಿಸ್ನಿ ಸಂಭ್ರಮ

ಮುಂಬೈನಲ್ಲಿ ಡಿಸ್ನಿ ಸಂಭ್ರಮ

ಮುಂಬೈ: ವಾಲ್ಟ್ ಡಿಸ್ನಿ ವಿಶೇಷ ಕಲೆಕ್ಷನ್ ಸ್ಪರ್ಧೆ ವಿಜೇತರು ಭಾರತದಾದ್ಯಂತ ಕಾಲ್ನಡಿಗೆ ಅಭಿಯಾನ ಹಮ್ಮಿಕೊಳ್ಳಲಿದ್ದಾರೆ.

ನಿಂತಲ್ಲೇ ನಿಂತ ವಿಮಾನ

ನಿಂತಲ್ಲೇ ನಿಂತ ವಿಮಾನ

ಮುಂಬೈ: ಭಾರಿ ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ನಿಂತಲ್ಲೇ ನಿಂತ ಏರ್ ಇಂಡಿಯಾ ವಿಮಾನ

ಬೈಕ್ ಏರಿದ ಮಮತಾ ದೀದಿ

ಬೈಕ್ ಏರಿದ ಮಮತಾ ದೀದಿ

ಕುಮುದಿನಿ: ಅತ್ಯಾಚಾರಕ್ಕೊಳಗಾಗಿ ದುರಂತ ಸಾವನ್ನಪ್ಪಿದ 20 ವರ್ಷ ವಯಸ್ಸಿನ ಯುವತಿ ಮನೆಯವರನ್ನು ಕಾಣಲು ಬಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ವಿಧಿ ಕಾಣದೆ ಬೈಕು ಏರಿ ಅಲ್ಲಿಂದ ಮಮತಾ ಅವರು ಬಲವಂತವಾಗಿ ಜಾಗ ಖಾಲಿ ಮಾಡಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+