IBPS: 70000 ಮಂದಿ ಬ್ಯಾಂಕಿಂಗೇತರ ಕಂಪನಿಗಳಿಗೆ

recruitment-70000-non-banking-jobs-for-ibps-meritorious
ಕೋಲ್ಕೊತ್ತಾ, ಜೂನ್ 17: ಬ್ಯಾಂಕಿಂಗ್ ಪರೀಕ್ಷೆ ಬರೆದೂ ಬರೆದೂ ಬಸವಳಿದಿದ್ದೀರಾ? ಎಷ್ಟು ಬರೆದರೂ ಕೈಗಂತೂ ಅಪಾಯಿಂಟ್ ಮೆಂಟ್ ಆರ್ಡರ್ ಬರಲಿಲ್ಲಾ ಎಂದು ಬೇಸತ್ತಿದ್ದೀರಾ? ನಿರಾಶರಾಗದಿರಿ, ಇಂತಹ ಹೆಚ್ಚುವರಿ ಮಿಗತೆ ಪ್ರತಿಭೆಗಳಿಗೂ ಅವಕಾಶದ ಬಾಗಿಲು ತೆಗೆದಿದೆ.

ಏನಪ್ಪಾ ಅಂದರೆ Institute of Banking Personnel Selection (IBPS) ದೇಶದ ನಾನಾ ಸರಕಾರಿ ಬ್ಯಾಂಕುಗಳಿಗಾಗಿ ಸುಮಾರು 1,25,000 ಮಂದಿಯನ್ನು ಆಯ್ಕೆ ಮಾಡಿಟ್ಟುಕೊಂಡಿದೆ. ಇವರೆಲ್ಲ written test ಮತ್ತು interviewಗಳಲ್ಲಿ ಯಶಸ್ವಿಯಾಗಿರುವ ಬುದ್ಧಿವಂತರು. ಇವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಬೇರೆ ಎಲ್ಲಾದರೂ ಇವರನ್ನು accomadate ಮಾಡ್ತೀವಿ, ಸ್ವಲ್ಪ ತಡೆಯಿರಿ ಎಂದು IBPS ಅಭಯ ನೀಡಿದೆ.

ಬಹುತೇಕ ಈ ಮಿಗತೆ ಪ್ರತಿಭೆಗಳನ್ನು non-banking ಸಂಸ್ಥೆಗಳಲ್ಲಿ ತೊಡಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಏಕೆಂದರೆ ಸಾಕಷ್ಟು ಶ್ರಮ/ಹಣ ಖರ್ಚು ಮಾಡಿ ಈ ಲಕ್ಷಕ್ಕೂ ಹೆಚ್ಚು ಮಂದಿಯನ್ನು ಅವರವರ ಮೆರಿಟ್ ಗೆ ತಕ್ಕಂತೆ ಶ್ರೇಣೀಕರಿಸಲಾಗಿದೆ. ಅವರನ್ನು ವೃಥಾ ವ್ಯರ್ಥ ಮಾಡುವ ಇರಾದೆ ಸಂಸ್ಥೆಗಿಲ್ಲ. ಅದಕ್ಕಿಂತ ಮುಖ್ಯವಾಗಿ ಇಷ್ಟು ಮಂದಿಯನ್ನು ಆಯ್ಕೆ ಮಾಡಿಕೊಳ್ಳಲು ಈ non-banking ಸಂಸ್ಥೆಗಳು ಅನಗತ್ಯವಾಗಿ ಶ್ರಮ/ಹಣ ಪೋಲುಮಾಡುವುದು ಅಸಮಂಜಸವಾದೀತು.

ಹಾಗಾಗಿ ಸನ್ನದ್ಧವಾಗಿರುವ ಹೆಚ್ಚುವರಿ 70,000 ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗುವುದು ಎಂದು IBPS ಭರವಸೆ ನೀಡಿದೆ. ಗಮನಾರ್ಹವೆಂದರೆ State Bank of India ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ SBI ಸ್ವಯಂ ಪರೀಕ್ಷೆ ಮೂಲಕ ತನ್ನ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತದೆ.

ಕೇಂದ್ರ ಹಣಕಾಸು ಸಚಿವಾಲಯದ ಆದೇಶದಂತೆ 19 ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಸಾಮಾನ್ಯ ಪರೀಕ್ಷೆ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಮುಖ್ಯವಾಗಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳು ಹಾಗೂ Small Industries Development Bank of India ಈ ಮಿಗತೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಉಮೇದಿಯಲ್ಲಿದೆ.

ಗಮನಿಸಿ: ಹೀಗೆ non-banking jobಗೆ ನೇಮಕಗೊಂಡವರು ಮತ್ತೆ 2013-14 ಸಾಲಿನಲ್ಲಿ ಬ್ಯಾಂಕಿಂಗ್ ಪರೀಕ್ಷೆ ತೆಗೆದುಕೊಳ್ಳುವಂತಿಲ್ಲ. ಅಂತಹವರು non-banking jobಗೇ ತೃಪ್ತಿಪಡಬೇಕು. ಸ್ವಲ್ಪ ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯುವ ಊಸಾಬರಿಗೆ ಹೋಗದೆ non-banking jobಗೆ ಸೀಮಿತವಾಗುವುದು ಬುದ್ಧಿವತಿಂಕೆಯೂ ಆಗಿದೆ ಎಂದು IBPS ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+