ಇನ್ಫಿ ಮೂರ್ತಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲೇನಿದೆ?
ಬೆಂಗಳೂರು, ಜೂನ್ 17: ನಿರಾಶಾದಾಯಕ ಸ್ಥಿತಿ ತಲುಪಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಕಂಪನಿ ಚುಕ್ಕಾಣಿಯನ್ನು ಮತ್ತೆ ತಮ್ಮ ಅಧಿನಕ್ಕೆ ತೆಗೆದುಕೊಂಡಿರುವ 'ಇನ್ಫಿ ದೊಡ್ಡಣ್ಣ' ಎನ್ ಆರ್ ನಾರಾಯಣ ಮೂರ್ತಿ ಅವರು ತಮ್ಮ ಉದ್ಯೋಗಳಿಗೊಂದು ಆತ್ಮೀಯ/ ಅರ್ಥಗರ್ಭಿತ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
'ಇನ್ಫಿ ದೊಡ್ಡಣ್ಣ' ಟೆಕ್ಕಿ ಭಾಷೆಯಲ್ಲೇ ಪತ್ರ ಬರೆದಿದ್ದು ವ್ಯಾಕರಣರಹಿತ ಎಸ್ಎಂಎಸ್ ಭಾಷೆಗೆ ಮೊರೆ ಹೋಗಿರುವುದು ಗಮನಾರ್ಹ. ಕೆಲಸ ಮತ್ತು ಖಾಸಗಿ ಜೀವನವನ್ನು ಸಮತೋಲನದಲ್ಲಿಡಲು ಪರದಾಡುತ್ತಿರುವ ಟೆಕ್ಕಿಗಳನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಹುರಿದುಂಬಿಸಲು 'ಇನ್ಫಿ ದೊಡ್ಡಣ್ಣ' ಈ ಪತ್ರ ಬರೆದಂತಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಈ ಪತ್ರ ಬಿಡುಗಡೆಗೊಂಡಿದೆಯದಾರೂ ಇದರ ಸತ್ಯಾಸತ್ಯತೆ ಖಚಿತಪಟ್ಟಿಲ್ಲ. ತಮಾಷೆಗಾಗಿ ಯಾರೋ ಗೀಚಿದ ಪತ್ರವಾ ಇದು? ಗೊತ್ತಿಲ್ಲ.
ಹಾಗಂತ ಇದೇ ಮೊದಲ ಬಾರಿಗೆ 'ಇನ್ಫಿ ದೊಡ್ಡಣ್ಣ' ಈ ಪತ್ರ ಬರೆದಿದ್ದಾರೆ ಅಂತಲ್ಲ. ಈ ಹಿಂದೆಯೂ 'ಇಂತಹ ಪತ್ರ ಹರಿದಾಡಿತ್ತು'.

ಇ ಮೇಲ್ ಇಲ್ಲಿದೆ, ನೀವು ಓದಿಕೊಳ್ಳಿ:
ಇನ್ಫೋಸಿಸ್ ಸಿಬ್ಬಂದಿಗೆ ಎನ್ ಆರ್ ನಾರಾಯಣ ಮೂರ್ತಿ ಅವರು ಕಳುಹಿಸಿದ್ದಾರೆನ್ನಲಾದ ಇ ಮೇಲ್ ಇಲ್ಲಿದೆ, ಓದಿಕೊಳ್ಳಿ: (ಮರೆಯಬೇಡಿ, ಪತ್ರದ ಕೊನೆಯ ಸಾಲಿನವರೆಗೂ ಓದಿಕೊಂಡಾದ ಮೇಲೆ ನಿಮಗೇನನ್ನಿಸಿತು ಎಂಬುದನ್ನು ತಪ್ಪದೆ ನಮಗೆ ತಿಳಿಸಿ)

ಇಂಥವರನ್ನು ಮೊದಲು ಕೆಲಸದಿಂದ ತೆಗೆದುಹಾಕಿ:
1) ನೀವು 9 ಗಂಟೆಗಿಂತ ಹೆಚ್ಚು ಅವಧಿಗೆ ಕೆಲಸ ಮಾಡುತ್ತಿದ್ದರೆ ಇನ್ಫೋಸಿಸ್ ಕಂಪನಿಗೆ ನಿಮ್ಮ ಅಗತ್ಯವಿಲ್ಲ.
2) ಶನಿವಾರ ಮತ್ತು ಭಾನುವಾರವೂ ಕೆಲಸ ಮಾಡುವಂತಿದ್ದರೆ ಇನ್ಫೋಸಿಸ್ ಕಂಪನಿಯನ್ನು ಬಿಡಬಹುದು.
3) ನಿಮಗೆ ನಿಗದಿಪಡಿಸಿದ ಕಾಲಾವಧಿಯಲ್ಲೇ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಿ.
ಈ ಮೂರೂ ವರ್ಗಗಳಲ್ಲಿ ಕಾಣಿಸಿಕೊಳ್ಳುವ ಉದ್ಯೋಗಿಗಳನ್ನು ತಕ್ಷಣ ಇನ್ಫೋಸಿಸ್ ಕೆಲಸದಿಂದ ತೆಗೆದುಹಾಕಿ.

specimenಗಳು ನಮಗೆ ಬೇಡವೇ ಬೇಡ:
ರಾತ್ರಿ 8.30 ಆಗಿದ್ದರೂ ಕಚೇರಿಯಲ್ಲಿ ಇನ್ನೂ ಲೈಟುಗಳು ಬೆಳಕು ಚೆಲ್ಲುತ್ತಿದ್ದರೆ... PCಗಳು ಇನ್ನೂ ಆಫ್ ಆಗದಿದ್ದರೆ, ಕಾಫಿ ಯಂತ್ರಗಳು ಇನ್ನೂ ಕಾಫಿ ವಿತರಿಸುತ್ತಿದ್ದರೆ ... ಮತ್ತು ಈ ವಾತಾವರಣದಲ್ಲಿ ಇನ್ನೂ ಕೆಲಸ ಮಾಡುತ್ತೀನಿ ಎನ್ನುವವರತ್ತ ಒಮ್ಮೆ ವಾರೆನೊಟ ಬೀರಿ.
specimenಗಳೆಲ್ಲ ನಿಜಕ್ಕೂ menಗಳೇ. ಆದರೆ ಇವರೆಲ್ಲಾ ಮದುವೆಯಾಗದ ಪಡ್ಡೆಗಳು. ಅವರೆಲ್ಲಾ ಯಾಕೆ ಇಷ್ಟು ಹೊತ್ತು ಕಚೇರಿಯಲ್ಲೇ ಸಮಯ ವ್ಯರ್ಥ ಮಾಡುತ್ತಾರೆ ಅಂತ ಯೋಚಿಸಿದ್ದೀರಾ? ಏನಿಲ್ಲ, ಮನೆಗೆ ಹೋಗಿ ಅವರು ಮಾಡುವುದೇನಿದೆ? ಇಲ್ಲಿ ಇಂಟರ್ನೆಟ್ ನೋಡಬಹುದು, ಎಸಿ ಇರುತ್ತದೆ, ಫುಡ್ಡು-ಕಾಫಿ ಇರುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಬಾಸ್ ಇರುವುದಿಲ್ಲ! ಅದಕ್ಕೇ ಮನೆಗಿಂತ ಕಚೇರಿಯೇ ಹೆಚ್ಚು ಪ್ರಿಯವಾಗುತ್ತದೆ ಎಂಬುದು ಈ ಪಡ್ಡೆಗಳು ನೀಡುವ ಸರಳ ಉತ್ತರ! ಬಹುತೇಕ ಸಂಶೋಧನಾ ಕೇಂದ್ರಗಳಲ್ಲಿ/ ಸಾಫ್ಟ್ ವೇರ್ ಕಂಪನಿಗಳಲ್ಲಿ/ ಸಾಗರದಾಚೆಗಿನ ಕಂಪನಿಗಳಲ್ಲಿ ಇದೇ ದೃಶ್ಯ ಕಂಡುಬರುತ್ತದೆ.

ದುಷ್ಪರಿಣಾಮಗಳ ಬಗ್ಗೆಯೂ ಸ್ವಲ್ಪ ಯೋಚಿಸಿ:
ಅವಿವಾಹಿತ ಪಡ್ಡೆಗಳು ಕಚೇರಿಯಲ್ಲೇ ಏಕೆ Time Pass ಮಾಡ್ತಾರೆ ಅಂದರೆ ಮನೆಗಳಲ್ಲಿ ಅವರಿಗೆ ಬೇರೆ ಕೆಲಸವಿರುವುದಿಲ್ಲ. ಈ ರೀತಿ 'ಕಾರ್ಯನಿರತವಾಗುವುದು' (ದಾಖಲೆಯಲ್ಲಿ ಮಾತ್ರ; ಉತ್ಪಾದನೆಯಲ್ಲಿ ಅಲ್ಲ) ಸಮೂಹಸನ್ನಿಯಾಗಿ ಇಡೀ ಕಂಪನಿಗೆ ಹಬ್ಬುತ್ತದೆ.
ನೋಡಿ ಹೀಗೆ 'ಕಾರ್ಯನಿರತರಾಗುವ' ಉದ್ಯೋಗಿಗಳ ಬಗ್ಗೆ ಮೆಲಾಧಿಕಾರಿಗಳಿಗೂ ಕನಿಕರವುಂಟಾಗುತ್ತದೆ. 'ಕಾರ್ಯನಿರತ' ಉದ್ಯೋಗಿಯನ್ನು ಅವೇಳೆಯಲ್ಲಿ ಮನೆಗೆ ಕಳುಹಿಸಲು ಟ್ಯಾಕ್ಸಿ ವೋಚರ್ಮ ಫುಡ್ ವೋಚರ್ ''ಭರಿಸಬೇಕಾಗುತ್ತದೆ''. ಇಂತಹ 'ಕಾರ್ಯನಿರತ' ಉದ್ಯೋಗಿಗಳು ತಮ್ಮ ಕನಿಷ್ಠ ಅಗತ್ಯಗಳನ್ನು ಪೂರೈಸಲು/ಬದಲಾಯಿಸಲಷ್ಟೇ ಮನೆಗೆ ಹೋಗಿಬರುತ್ತಾರೆ. ಅವರು ನಿಜಕ್ಕೂ 'ಶ್ರಮಜೀವಿ' ಎಂಬ ಬಿರಿದು ಸಹ ಅವರಿಗೆ ಪ್ರಾಪ್ತಿಯಾಗುತ್ತದೆ. ಅದರೆ ವಾಸ್ತವೇ ಬೇರೆ ಎಂಬುದನ್ನು ಮನಗಾಣಿ.

ಅವಿವಾಹಿತ ಸಹೋದ್ಯೋಗಿಗಳೇ ಇದನ್ನು ಗಮನಿಸಿ:
ಸುಮ್ಮನೆ ಕಚೇರಿಯಲ್ಲಿ ಕುಳಿತುಕೊಳ್ಳುವ, ನಿಜಕ್ಕೂ ಶ್ರಮ ಹಾಕಿ ಕೆಲಸ ಮಾಡುವ ಸಿಬ್ಬಂದಿಯ ನಡುವಣ ವ್ಯತ್ಯಾಸ ಬಾಸ್ ಗೆ ಅರ್ಥವೇ ಆಗುವುದಿಲ್ಲ. ಎಲ್ಲ ಉದ್ಯೋಗಿಗಳೂ ಹೀಗೇ ಹೆಚ್ಚು ಶ್ರಮಜೀವಿಗಳಾಗಲಿ ಎಂದು ಬಾಸ್ ಸಹ ಆಪೇಕ್ಷಿಸಿಬಿಡುವ ಅಪಾಯವಿರುತ್ತದೆ.
ಆದ್ದರಿಂದ, ನನ್ನ ನೆಚ್ಚಿನ ಅವಿವಾಹಿತ ಸಹೋದ್ಯೋಗಿಗಳೇ ಒಂದನ್ನು ಗಮನಿಸಿ, ನೀವು ಮದುವೆಯಾಗುತ್ತಿದ್ದಂತೆ ನಿಮ್ಮ ಕೌಟುಂಬಿಕ ಜೀವನ ಬದಲಾಗುತ್ತದೆ. ಕೆಲಸದ ಬಗ್ಗೆ ಅಸಡ್ಡೆ ಬೆಳೆಸಿಕೊಂಡು, ನಿಮ್ಮ ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ. ಸಮಸ್ಯೆ ಶುರುವಾಗುವುದೇ ಆಗ.

ಬ್ಯಾಚಲರುಗಳು ಪಶ್ಚಾತ್ತಾಪ ಪಡೋದು ಗ್ಯಾರಂಟಿ:
ಅದೇ, ಸಮಯ ಮುಗಿಯುತ್ತಿದ್ದಂತೆ ಕರಾರುವಕ್ಕಾಗಿ ತಮ್ಮ ಕೆಲಸ ಮುಗಿಸಿ, ನಿಗದಿತ ಸಮಯಕ್ಕೆ ಕಚೇರಿಯನ್ನು ಬಿಡುವ ಉದ್ಯೋಗಿಗಳನ್ನು ಕೆಲಸ ಮಾಡಲು ಇಚ್ಛಿಸದ ಸೋಂಭೇರಿ ಉದ್ಯೋಗಿಗಳು ಎಂಬ ಹಣೆಪಟ್ಟಿ ಅವರದಾಗುತ್ತದೆ. ಇನ್ನು ಹುಡುಗಿಯರ ಬಗ್ಗೆಯಂತೂ ಇಂತಹ ಮಾತುಗಳು ಹೆಚ್ಚಾಗಿ ಕೇಳಿಬರುತ್ತದೆ. ಅಂತಹ ಹುಡುಗಿಯರನ್ನು ಅವಲಂಬಿಸಲು/ಅವರ ಮೇಲೆ ಭರವಸೆಯಿಡಲು ಆಗುವುದೇ ಇಲ್ಲ ಎಂದು ಬಾಸ್ ಹೇಳುತ್ತಾರೆ.
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ/ ಕಚೇರಿಯ ವಾತಾವರಣವನ್ನು ಹಾಳುಗೆಡಹುವ ಬ್ಯಾಚಲರ್ ಉದ್ಯೋಗಿಗಳು ಮುಂದೊಂದು ದಿನ ಅದಕ್ಕೆ ಪಶ್ಚಾತ್ತಾಪ ಪಡುವುದು ಗ್ಯಾರಂಟಿ.

ಹಾಗಾದರೆ ನೀತಿ ಪಾಠವೇನು?:
ತುಂಬಾ ತುಂಬಾ ಸ್ಪಷ್ಟವಾಗಿದೆ.
* ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಯನ್ನು ಬಿಡುವೆ.
* ಕಚೇರಿಯಲ್ಲಿ ಎಕ್ಸ್ ಟ್ರಾ ಟೈಮ್ ಉಳಿದುಕೊಳ್ಳುವುದೇ ಇಲ್ಲ. ಅಗತ್ಯಬಿದ್ದರೆ ಖಂಡಿತಾ ಇರುವೆ.

ಕಚೇರಿ ಬಿಟ್ಟು ಬೇರೆ ಏನು ಮಾಡಲು ಸಾಧ್ಯ?:
ಸ್ವಲ್ಪ ಯೋಚಿಸಿ ನೋಡಿ, ನೂರೆಂಟು ಮಾರ್ಗಗಳಿವೆ-
* ಸಂಗೀತ ಕಲಿಯಿರಿ
* ಒಂದಾದರೂ ವಿದೇಶಿ ಭಾಷೆಯನ್ನು ಕಲಿಯಿರಿ.
* ಆಟ? ಟಿಟಿ, ಕ್ರಿಕೆಟ್ ಆಡಿ ನಲಿಯಿರಿ

How about BF/GF!?
ಮೇಲಿನದ್ದೆಲ್ಲಾ ಬೇಡವೆಂದಾದರೆ:
How about BF/GF!? ಯಸ್ ಐ ಮೀನ್ ಇಟ್. ಸಂಗಾತಿಯ ಜತೆ ಒಂದು ಸುತ್ತು ಹೊಡೆಯಿರಿ.
Smirnoff ಜಾಹೀರಾತು ಮರೆಯಬೇಡಿ: Life's calling, where are you??'

ಟಿಪಿಕಲ್ ಇಂಡಿಯನ್ ಮೆಂಟಾಲಿಟಿ ಕಣ್ರೀ!:
ದಯವಿಟ್ಟು ಈ ಮೆಸೇಜ್ ಅನ್ನು ನಿಮ್ಮ ಎಲ್ಲ ಸಹೋದ್ಯೋಗಿಗಳಿಗೂ ಪಾಸ್ ಮಾಡಿ. ಹಾಗಂತ, ಅದಕ್ಕಾಗಿ ಮಧ್ಯರಾತ್ರಿವರೆಗೂ ಕಚೇರಿಯಲ್ಲೇ ಉಳಿಯಬೇಡಿ. ದೀರ್ಘಾವಧಿಗೆ ಕಚೇರಿಯಲ್ಲಿದ್ದರೆ ಶ್ರಮಜೀವಿ ಅಂತಲೂ ಶೇ. 100 ರಷ್ಟು ಕಮಿಟ್ ಮೆಂಟ್ ಇದೆ ಎಂಬುದು ನಿಜಕ್ಕೂ ಟಿಪಿಕಲ್ ಇಂಡಿಯನ್ ಮೆಂಟಾಲಿಟಿ ಕಣ್ರೀ!
ಸರಳವಾಗಿ ಹೇಳಬೇಕು ಅಂದರೆ ಕಚೇರಿಯಲ್ಲಿ ಹೆಚ್ಚಿನ ಅವಧಿಗೆ ಸ್ಟೇ-ಬ್ಯಾಕ್ ಆಗುವವರಿಗೆ ನಿಜಕ್ಕೂ ಸಮಯವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿರುವುದೇ ಇಲ್ಲ, ಏನಂತೀರಿ!?
-ನಿಮ್ಮವ, ನಾರಾಯಣ ಮೂರ್ತಿ
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications