ತಿರುಪತಿ ವೋಲ್ವೊ ಬಸ್ಸಿಗೆ ಲಾರಿ ಡಿಕ್ಕಿ: 4 ಸಜೀವ ದಹನ

ಬಸ್ಸು ಬೆಂಗಳೂರಿನಿಂದ ತಿರುಪತಿಗೆ ಹೊರಟಿತ್ತು. ಕಂಟೇನರ್ ವಾಹನ ಚೆನ್ನೈನಿಂದ ಬೆಂಗಳೂರಿನತ್ತ ಬರುತ್ತಿತ್ತು. ಬಸ್ಸಿನಲ್ಲಿ 46 ಜನರಿದ್ದರು. 25 ಮಂದಿಗೆ ಸುಟ್ಟ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಹಾದಿ ದುರ್ಗಮವಾಗಿದೆ. ಕಂಟೇನರ್ ಚಾಲಕ ಅಡ್ಡಾದಿಡ್ಡಿ ವಾಹನ ಚಲಾಯಿಸಿದ್ದೇ ದುರ್ಘಟನೆಗೆ ಕಾರಣವಾಗಿದೆ.
ಬಸ್ಸಿನಲ್ಲಿದ್ದ ಮೂವರು ಸುಟ್ಟು ಕರಕಲಾಗಿದ್ದರೆ ಕಂಟೇನರಿನಲ್ಲಿದ್ದ ಕ್ಲೀನರ್ ಮೃತಪಟ್ಟಿದ್ದಾನೆ. ಮುಖಾಮುಖಿ ಅಪಘಾತವಾಗುತ್ತಿದ್ದಂತೆ ಎರಡೂ ವಾಹನಗಳಿಗೆ ಬೆಂಕಿಗೆ ತಾಗಿದೆ.
ಮೃತಪಟ್ಟ ಇಬ್ಬರಲ್ಲಿ ಬಸ್ ಪ್ರಯಾಣಿಕರಾದ ಪ್ರಿಯಾ ಮತ್ತು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಳಬಾಗಿಲು ಸರಕಾರಿ ಆಸ್ಪತ್ರೆ ಹಾಗೂ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಆಂಧ್ರ ಸಾರಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications