ಬಿಎಸ್‌ವೈ ವಾಪಸಾದರೆ ಅದಕ್ಕಿಂತ ಬೇರೆ ಸಂತಸವಿಲ್ಲ

if-yeddyurappa-returns-to-bjp-will-be-happy-pc-mohan
ಚಿಕ್ಕಬಳ್ಳಾಪುರ, ಜೂನ್ 14: ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುವುದಕ್ಕೆ ಇಬ್ಬರು ಸಂಸದರು ತುದಿಗಾಲಲ್ಲಿ ನಿಂತಿದ್ದಾರೆ. ಯಡಿಯೂರಪ್ಪ ಅಧಿಕಾರ ತೊರೆಯುವ ದಿನ ಅವರನ್ನು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್ ನಲ್ಲಿ ವಾಚಾಮಗೋಚರ ಹೊಗಳಿ ಆನಂತರ ಅಧಿಕಾರದಿಂದ ಇಳಿದುಹೋಗುತ್ತಿದ್ದಂತೆ ಅವರನ್ನು ಕ್ಯಾರೇ ಎನ್ನದ ಆದರೆ ಈಗ ಮತ್ತೆ ಯಡಿಯೂರಪ್ಪಗೆ ಹತ್ತಿರವಾಗಿರುವ ಸಂಸದ ಪಿಸಿ ಮೋಹನ್‌ ಅವರು ಮಾಜಿ ಮುಖ್ಯಮಂತ್ರಿ ಬಿಜೆಪಿಗೆ ಮರು ಸೇರ್ಪಡೆಯಾಗಲೇಬೇಕು ಎಂದಿದ್ದಾರೆ

ಯಡಿಯೂರಪ್ಪ ಬಗ್ಗೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಪಾರದರ್ಶಕವಾದ ಹೇಳಿಕೆ ನೀಡಿದ್ದು, ಅವರು ಮತ್ತೆ ಬಿಜೆಪಿಗೆ ಬಂದರೆ ಅದಕ್ಕಿಂತ ಸಂತಸ ಮತ್ತೂಂದಿಲ್ಲ ಎಂದು ಸಂಸದ ಮೋಹನ್‌ ಅಭಿಪ್ರಾಯಪಟ್ಟಿದ್ದಾರೆ. ಬಿಎಸ್‌ವೈ ಪಕ್ಷ ತೊರೆದಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದೂ ಅವರು ಚುಟುಕಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿಗೆ ಅನಿವಾರ್ಯ:
ಇದೇ ವೇಳೆ ಮತ್ತೊಬ್ಬ ಬಿಜೆಪಿ ಸಂಸದ ಶಿವರಾಮೇಗೌಡ ಅವರು ಗೊರೇಬಾಳದಲ್ಲಿ ಮಾತನಾಡಿದ ಪಕ್ಷ ಸಂಘಟನೆಗಾಗಿ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತವಿದೆ. ಯಡಿಯೂರಪ್ಪಗೂ ಬಿಜೆಪಿ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೋದಿಗೆ ಜೈ ಎಂದ ಈಶ್ವರಪ್ಪ:
ಈ ಮಧ್ಯೆ, ಯಡಿಯೂರಪ್ಪ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು 'ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬರುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅದು ನಮಗೆ ಸಂಬಂಧಿಸಿದ ವಿಷಯವೂ ಅಲ್ಲ ಎಂದು ಹೇಳಿದ್ದಾರೆ.

ಪಕ್ಷದ ಬಲವರ್ಧನೆ ದೃಷ್ಟಿಯಿಂದ ಹಿರಿಯರು ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳಿಗೆ ಬದ್ಧರಾಗಿರಬೇಕಾದ್ದು ನಮ್ಮ ಕರ್ತವ್ಯ. ಯಾರನ್ನು ಅವರು ಬರಮಾಡಿಕೊಳ್ಳುತ್ತಾರೆ, ಯಾರು ಇಲ್ಲ ಎಂಬುದರ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗುವತ್ತ ಮಾತ್ರ ಗಮನಹರಿಸಬೇಕು ಎಂದಿದ್ದಾರೆ.

ದೇಶದ ಜನರ ಅಪೇಕ್ಷೆ ಎನ್ ಡಿಎ ಅಧಿಕಾರಕ್ಕೆ ಬರುವುದಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರಂತೆ ಮೋದಿ ಪ್ರಧಾನಿಯಾದಲ್ಲಿ ದೇಶದ ಚಿತ್ರಣ ಬದಲಾಗುತ್ತದೆ. ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರು ಘೋಷಣೆ ಮಾಡುವುದಕ್ಕೂ ಮೊದಲು ಪಕ್ಷದ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿಯವರ ಒಪ್ಪಿಗೆ ಪಡೆಯಲಾಗಿತ್ತು ಎಂದು ಸ್ಪಷ್ಟಪಡಿಸುವ ಮೂಲಕ ಈಶ್ವರಪ್ಪ ಅವರು ಮೋದಿಗೆ ಜೈ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+